ನವದೆಹಲಿ: ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ಹಾಗೂ ಹರ್ಭಜನ್ ಸಿಂಗ್ (Harbhajan Singh) ಅವರ ಹೆಸರು ಕೇಳಿ ಬರುತ್ತದೆ,. 2007, 2011 ವಿಶ್ವಕಪ್ ವಿಜೇತ ತಂಡದ ಆಟಗಾರರಾಗಿದ್ದ ಇವರಿಬ್ಬರು ಟೀಮ್ ಇಂಡಿಯಾದ ಯಶಸ್ವಿ ಜೋಡಿಗಳಲ್ಲಿ ಒಂದಾಗಿತ್ತು. ಆದರೆ, ಕೆಲ ದಿನಗಳ ಹಿಂದೆ ಈ ಇಬ್ಬರು ಆಟಗಾರರು ಪರಸ್ಪರ ಮಾತನಾಡಿ 10 ವರ್ಷಗಳಾಗಿವೆ ಎಂಬ ಸುದ್ದಿ ಕ್ರೀಡಾ ವಲಯದಲ್ಲಿ ಸಖತ್ ಸೌಂಡ್ ಮಾಡಿತ್ತು. ಆದರೆ, ಇದೀಗ ಇವರಿಬ್ಬರು ಒಂದಾಗಿದ್ದು, ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಧೋನಿ (MS Dhoni) ಹಾಗೂ ಹರ್ಭಜನ್ (Harbhajan Singh) ಕಾರ್ಯಕ್ರಮ ಒಂದರಲ್ಲಿ ಮುಖಾಮುಖಿಯಾಗಿದ್ದು, ಹರ್ಭಜನ್ಗೆ ಧೋನಿ ಸಹಾಯ ಮಾಡುತ್ತಿರವುದನ್ನು ನೋಡಬಹುದಾಗಿದೆ. ಬಳಿಕ ಧೋನಿ ಹರ್ಭಜನ್ಗೆ ಏನೋ ಹೇಳಿದ್ದು, ಭಜ್ಜಿ ಕೂಡ ಧೋನಿ ಮಾತಿಗೆ ಸಹಮತ ವ್ಯಕ್ತಪಡಿಸುವುದನ್ನ ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಧೋನಿ (MS Dhoni) ಹಾಗೂ ಹರ್ಭಜನ್ (Harbhajan Singh) ಒಂದಾಗಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇವರಿಬ್ಬರ ಜೋಡಿಯನ್ನು ಸಲ್ಮಾನ್ ಖಾನ್ ಹಾಗೂ ಅಶ್ನೀರ್ ಗ್ರೋವರ್ ಎಂದು ಕರೆದಿದ್ದಾರೆ. ಅನೇಕರು ಈ ಸ್ನೇಹ ಹೀಗೆ ಮುಂದುವರೆಯಲಿ ಎಂದು ಆಶಿಸಿದ್ದು, ಸದ್ಯ ಈ ವಿಡಿಯೋ ಎಲ್ಲರ ಮನ ಗೆಲ್ಲುತ್ತಿದೆ.
ಟೀಮ್ ಇಂಡಿಯಾ ಹಾಗೂ ಚೆನ್ನೈ ಸೂಪರ್ಕಿಂಗ್ಸ್ ಪರ ಒಟ್ಟಾಗಿ ಆಡಿದ್ದ ಹರ್ಭಜನ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ ಕ್ರೀಡಾ ವಲಯದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದಾಗಿದೆ. ಈ ಜೋಡಿ ಮಾತು ಸುಮಾರು 10 ವರ್ಷಗಳಾಗಿದೆ ಎಂದು ಸ್ವತಃ ಹರ್ಭಜನ್ ಸಿಂಗ್ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಈ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಈ ಜೋಡಿ ಒಂದಾಗಿದೆ ಎಂಬ ವಿಡಿಯೋ ಹೊರಬಿದ್ದಿರುವುದು ಅಚ್ಚರಿಯನ್ನುಂಟು ಮಾಡಿದೆ.