ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೆ.19 ರಿಂದ ನವೆಂಬರ್ 10ರವರೆಗೆ 13ನೇ ಐಪಿಎಲ್ ವೇಳಾಪಟ್ಟಿ ಪ್ರಕಟಿಸಿದ್ದೇ ತಡ, ಭಾರತೀಯ ಕ್ರಿಕೆಟಿಗರಲ್ಲಿ ಚಟುವಟಿಕೆ ಗರಿಗೆದರಿದೆ. ದೂರದ ಯುಎಇಯಲ್ಲಿ ಐಪಿಎಲ್ ನಡೆಯುತ್ತಿದ್ದರೂ ಆಟಗಾರರ ಹುಮ್ಮಸ್ಸು ಮಾತ್ರ ಕಡಿಮೆಯಾಗಿಲ್ಲ. ಕರೊನಾ ವೈರಸ್ ಭೀತಿಯಿಂದಾಗಿ ಕಳೆದ 4 ತಿಂಗಳಿಂದ ಕ್ರಿಕೆಟ್ ಚಟುವಟಿಕೆಯಿಂದ ದೂರವಿದ್ದ ಕ್ರಿಕೆಟಿಗರು ಇದೀಗ ಐಪಿಎಲ್ನತ್ತ ಮುಖಮಾಡಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಕಣಕ್ಕಿಳಿಯಲು ಸನ್ನದ್ಧವಾಗಿರುವ ಮಯಾಂಕ್ ಅಗರ್ವಾಲ್ ಮಾತ್ರ ವಿಶೇಷ ಯೋಜನೆಯೊಂದಿಗೆ ಸಿದ್ಧವಾಗುತ್ತಿದ್ದಾರೆ. ಮೈದಾನದ ಸುತ್ತ ಓಡುವುದನ್ನು ಕಾಯುತ್ತಿದ್ದೇನೆ. ನನಗೆ ಕಾಯಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಐಪಿಎಲ್ನಲ್ಲಿ ಆಡಲು ವಿರಾಟ್ ಕೊಹ್ಲಿ ಕಾತರ..!
ಕ್ರಿಕೆಟ್ ಆಡಲು ಉತ್ಸುಕನಾಗಿರುವ ಮಯಾಂಕ್, ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆಯುತ್ತಿದ್ದಾರೆ. ಟೆಸ್ಟ್, ಏಕದಿನ ಹಾಗೂ ಟಿ20 ಹೀಗೆ ಮೂರು ಮಾದರಿಗೂ ಸೈ ಎನಿಸಿಕೊಂಡಿರುವ ಆಟಗಾರ. ಇದೀ ಐಪಿಎಲ್ ಘೋಷಣೆಯಿಂದಾಗಿ ಕ್ರಿಕೆಟ್ ಚಟುವಟಿಕೆಗೆ ಮರಳಲು ಸರ್ವಸನ್ನದ್ಧರಾಗಿದ್ದಾರೆ. ಕಿಟ್ ಹಾಕಿಕೊಂಡಿರುವ ಫೋಟೋವೊಂದನ್ನು ಟ್ವೀಟ್ ಮಾಡುವ ಮೂಲಕ ಕ್ರಿಕೆಟ್ಗೆ ಸಿದ್ಧವಿರುವುದಾಗಿ ತೋರಿಸಿದ್ದಾರೆ.
ಟೂನಿರ್ಯೂ 53 ದಿನಗಳ ಕಾಲ ಯುಎಇಯ ದುಬೈ, ಅಬಿಧಾಬಿ ಹಾಗೂ ಶಾರ್ಜಾದಲ್ಲಿ ನಡೆಯಲಿದೆ. ಇದೇ ವೇಳೆ ನವೆಂಬರ್ 1 ರಿಂದ 10 ರವರೆಗೆ ಮಹಿಳಾ ಐಪಿಎಲ್ ಕೂಡ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ.