ಕ್ರೀಡೆ

Border-Gavaskar Trophy ಆರಂಭಕ್ಕೂ ಮುನ್ನ ಟೀಮ್​ ಇಂಡಿಯಾಗೆ ದೊಡ್ಡ ಹೊಡೆತ; ಸರಣಿಗೆ ರೋಹಿತ್​ ಶರ್ಮ ಗೈರು

ಮುಂಬೈ: ನವೆಂಬರ್​ 26ರಿಂದ ಭಾರತ (India) ಹಾಗೂ ಆಸ್ಟ್ರೇಲಿಯಾ (Australia) ನಡುವೆ ಆರಂಭವಾಗಲಿರುವ ಐದು ಪಂದ್ಯಗಳ ಬಾರ್ಡರ್​-ಗವಾಸ್ಕರ್ (Border-Gavaskar Trophy)​ ಟೆಸ್ಟ್​ ಸರಣಿಗೆ ಈಗಾಗಲೆ ಉಭಯ ತಂಡಗಳು ತಯಾರಿ ನಡೆಸುತ್ತಿದ್ದು, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ (World Test Championship)​ 2023-25ರ ಅಡಿಯಲ್ಲಿ ಈ ಟೆಸ್ಟ್​ ಸರಣಿ (Test Series) ನಡೆಯಲಿದೆ. ಆದರೆ, ಟೆಸ್ಟ್​ ಸರಣಿ ಆರಂಭಕ್ಕೂ ಮುನ್ನ ಇದೀಗ ವಿಚಾರ ಒಂದು ಹೊರಬಿದ್ದಿದ್ದು, ಈ ವಿಚಾರ ಟೀಮ್​ ಇಂಡಿಯಾವನ್ನು (Team India) ಚಿಂತೆಗೆ ದೂಡಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ರೋಹಿತ್​ ಶರ್ಮ (Rohit Sharma) ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯ (Test Series) ಮೊದಲೆರಡು ಪಂದ್ಯಗಳನ್ನು ಮಿಸ್​ ಮಾಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ವೈಯಕ್ತಿಕ ಕಾರಣಗಳನ್ನು (Personal Reasons) ನೀಡಿ ಅವರು ಸರಣಿಯ ಮೊದಲೆರಡು ಪಂದ್ಯಗಳನ್ನು ತಪ್ಪಿಸಿಕೊಳ್ಳುತ್ತಿದ್ದು, ಇದು ಟೀಮ್ ಇಂಡಿಯಾವನ್ನು (Team India) ಚಿಂತೆಗೆ ದೂಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐನ (BCCI) ಹಿರಿಯ ಅಧಿಕಾರಿಯೊಬ್ಬರು, ವೈಯಕ್ತಿಕ ಕಾರಣಗಳನ್ನು ನೀಡಿ ರೋಹಿತ್ (Rohit Sharma)​ ಸರಣಿಯ ಮೊದಲೆರಡು ಪಂದ್ಯಗಳಿಗೆ ಗೈರಾಗಬಹುದು. ಆದರೆ, ಈ ಬಗ್ಗೆ ನಮಗೆ ಇನ್ನೂ ನಿಶ್ಚಿತ ಮಾಹಿತಿ ದೊರೆತಿಲ್ಲ. ಸರಣಿ ಆರಂಭಕ್ಕೂ ಮುನ್ನ ಒಂದು ವೇಳೆ ಅವರ ಕೆಲಸ ಮುಗಿದಲ್ಲಿ ಎಲ್ಲಾ ಐದು ಪಂದ್ಯಗಳನ್ನು ರೋಹಿತ್​ ಆಡಲಿದ್ದಾರೆ ಎಂದು ಬಿಸಿಸಿಐ (BCCI) ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ರೋಹಿತ್​ ಬದಲಿಗೆ ತಂಡದಲ್ಲಿ ಅಭಿಮನ್ಯು ಈಶ್ವರನ್ (Abhimanyu Eshwaran)​​ ಸ್ಥಾನ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ ಸರಣಿಯ (Series) ಮೊದಲೆರಡು ಪಂದ್ಯಗಳನ್ನು ಕೆ.ಎಲ್​. ರಾಹುಲ್ (KL Rahul) ಅಥವಾ ಶುಭಮನ್​ ಗಿಲ್​ (Shubman Gill) ಮುನ್ನಡೆಸಬಹುದು ಎಂದು ಹೇಳಲಾಗಿದ್ದು, ಅಂತಿಮವಾಗಿ ಸರಣಿ ಆರಂಭಕ್ಕೂ ಮುನ್ನ ಈ ಬಗ್ಗೆ ತಿಳಿದು ಬರಲಿದೆ.