ಕ್ರೀಡೆ

ಐಪಿಎಲ್​ ಎಕ್ಸ್​ಪ್ರೆಶನ್​​ ಮೇಲೆ ಸಿಕ್ಕಾಪಟ್ಟೆ ಮೀಮ್ಸ್​... ಕೊನೆಗೂ ಮೌನ ಮುರಿದ SRH ಒಡತಿ ಕಾವ್ಯಾ ಮಾರನ್​! Kavya Maran

Kavya Maran : ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​)ನ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಒಡತಿ ಕಾವ್ಯಾ ಮಾರನ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಐಪಿಎಲ್ ಸಮಯದಲ್ಲಿ ಅವರ ಬಗೆ ಬಗೆಯ ಎಕ್ಸ್​ಪ್ರೆಶನ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿರುವ ಅನೇಕ ಸಂದರ್ಭಗಳಿವೆ. ಕಾವ್ಯಾರ ಸೌಂದರ್ಯಕ್ಕೆ ಮಾರುಹೋದ ಕೆಲವರು ಅವರಿಗಾಗಿಯೇ ಐಪಿಎಲ್ ಪಂದ್ಯಗಳನ್ನು ವೀಕ್ಷಿಸುತ್ತಾರೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಅವರನ್ನು ಗುರಿಯಾಗಿಸಿಕೊಂಡು ಅನೇಕ ಮೀಮ್‌ಗಳು ಸಹ ಹರಿದಾಡಿವೆ. ಕ್ಯಾಮೆರಾಮೆನ್‌ಗಳು ಸಹ ಪಂದ್ಯಗಳ ಸಮಯದಲ್ಲಿ ಕಾವ್ಯಾ ಅವರ ಮೇಲೆ ಹೆಚ್ಚು ಗಮನ ಹರಿಸುತ್ತಾರೆ.

ಅಂದಹಾಗೆ, ಇಲ್ಲಿಯವರೆಗೆ ಕಾವ್ಯಾ ಅವರು ತಮ್ಮ ಎಕ್ಸ್​ಪ್ರೆಶನ್​ ಕುರಿತ ಮೀಮ್​ಗಳ ಬಗ್ಗೆ ಮಾತನಾಡಿರಲಿಲ್ಲ. ಆದರೆ, ಇದೀಗ ಕೊನೆಗೂ ಮೌನ ಮುರಿದಿದ್ದಾರೆ. ಪಂದ್ಯದ ಸಮಯದಲ್ಲಿ ನೀವು ನೋಡುವುದು ನನ್ನ ನಿಜವಾದ ಎಕ್ಸ್​ಪ್ರೆಶನ್​ಗಳು. ಹೈದರಾಬಾದ್‌ನಲ್ಲಿ ನನಗೆ ಏನೂ ಮಾಡಲು ಸಾಧ್ಯವಿಲ್ಲ. ನಾನು ಅಲ್ಲಿ ಸುಮ್ಮನೇ ಕುಳಿತುಕೊಳ್ಳಬೇಕು. ನಾನು ಕುಳಿತುಕೊಳ್ಳಬಹುದಾದ ಏಕೈಕ ಸ್ಥಳ ಅದು. ಆದರೆ, ನಾನು ಅಹಮದಾಬಾದ್ ಅಥವಾ ಚೆನ್ನೈಗೆ ಹೋದಾಗಲೂ ಹಲವು ಅಡಿ ದೂರದಲ್ಲಿ, ಎಲ್ಲೋ ಕುಳಿತಿದ್ದರೂ ಸಹ, ಕ್ಯಾಮೆರಾಮನ್ ನನ್ನನ್ನು ಹುಡುಕುವಲ್ಲಿ ಯಶಸ್ವಿಯಾಗುತ್ತಾರೆ. ಹಾಗಾಗಿ, ಅದು ಹೇಗೆ ಮೀಮ್‌ಗಳಾಗಿ ಬದಲಾಗುತ್ತದೆ ಎಂಬುದು ನನಗೆ ಅರ್ಥವಾಗಿದೆ ಎಂದು ಕಾವ್ಯಾ ಅವರು ಇನ್‌ಸೈಡ್‌ ಸ್ಪೋರ್ಟ್‌ನೊಂದಿಗಿನ ಚಾಟ್‌ನಲ್ಲಿ ಹೇಳಿದರು.

ಸನ್‌ರೈಸರ್ಸ್ ಹೈದರಾಬಾದ್‌ಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ಅದಕ್ಕಾಗಿಯೇ ತಂಡದ ಸೋಲು ಮತ್ತು ಯಶಸ್ಸನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತೇನೆ ಎಂದು ಕಾವ್ಯಾ ಹೇಳಿದರು. ಅಲ್ಲದೆ, ಸನ್‌ರೈಸರ್ಸ್ ವಿಷಯಕ್ಕೆ ಬಂದಾಗ, ನಾನು ನಿಜವಾಗಿಯೂ ನನ್ನ ಪೂರ್ಣ ಹೃದಯವನ್ನು ಅದರಲ್ಲಿ ತೊಡಗಿಸಿಕೊಳ್ಳುತ್ತೇನೆ. ನೀವು ನಿಮ್ಮ ಹೃದಯ ಮತ್ತು ಆತ್ಮವನ್ನು ಯಾವುದಾದರೂ ಒಂದು ವಿಷಯದಲ್ಲಿ ತೊಡಗಿಸಿಕೊಂಡಾಗ ನೀವು ಸ್ವಾಭಾವಿಕವಾಗಿ ಅದರ ಯಶಸ್ಸು ಮತ್ತು ವೈಫಲ್ಯಗಳನ್ನು ಬಹಳ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತೀರಿ ಎಂದು ಕಾವ್ಯಾ ಹೇಳಿದರು.

ಅಂದಹಾಗೆ, ಹತಾಶೆಯ ಕಣ್ಣೀರಿನಿಂದ ಹಿಡಿದು ಭಾವಪರವಶತೆಯ ಕುಣಿತದವರೆಗೆ ಸನ್‌ರೈಸರ್ಸ್ ಹೈದರಾಬಾದ್‌ನ ಕಟ್ಟಾ ಅಭಿಮಾನಿ ಅನುಭವಿಸುವ ಎಲ್ಲಾ ಭಾವನೆಗಳನ್ನು ಕಾವ್ಯಾ ಮೂಲಕ ಅಭಿಮಾನಿಗಳು ವೀಕ್ಷಿಸಿ, ಆನಂದಿಸುತ್ತಾರೆ. ಅಭಿಮಾನಿಗಳು ಅನೇಕ ಭಾವನೆಗಳನ್ನು ವ್ಯಕ್ತಪಡಿಸುವಾಗ ಕಾವ್ಯಾ ಅವರ ಬಗೆ ಬಗೆಯ ಎಕ್ಸ್​ಪ್ರೆಶನ್​ಗಳನ್ನು ಮೀಮ್​ಗಳಲ್ಲಿ ಬಳಸಿಕೊಳ್ಳುತ್ತಾರೆ.

ಸನ್‌ರೈಸರ್ಸ್ ಹೈದರಾಬಾದ್​ ಕೊನೆಯ ಬಾರಿಗೆ 2016ರಲ್ಲಿ ಪ್ರಶಸ್ತಿ ಗೆದ್ದಿದೆ. ಇದಾದ ಬಳಿಕ 2018 ಮತ್ತು 2024ರಲ್ಲಿ ಎರಡು ಬಾರಿ ಫೈನಲ್ ತಲುಪಿದೆ. ಆದರೆ, ಪ್ರಶಸ್ತಿಯನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದೆ. ಸದ್ಯ ಎರಡನೇ ಪ್ರಶಸ್ತಿಯನ್ನು ಗೆಲ್ಲುವ ಗುರಿಯನ್ನು ಎಸ್​ಆರ್​ಎಚ್​ ಹೊಂದಿದೆ. (ಏಜೆನ್ಸೀಸ್​)