ಕ್ರೀಡೆ

ಯುವ ಕ್ರಿಕೆಟಿಗನ ಪ್ರೀತಿಯ ಬಲೆಯಲ್ಲಿ ಬಿದ್ರಾ ಕಾವ್ಯಾ ಮಾರನ್​!? ಅಸಲಿ ಸಂಗತಿ ಇಲ್ಲಿದೆ...

ಹೈದರಾಬಾದ್​: ಸನ್‌ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​) ತಂಡದ ಮಾಲಕಿ ಕಾವ್ಯಾ ಮಾರನ್​ ಅವರನ್ನು ಕ್ರೀಡಾಭಿಮಾನಿಗಳಿಗೆ ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ಐಪಿಎಲ್​ ನೋಡುವವರಿಗೆ ಆಕೆ ಚಿರಪರಿಚಿತೆ. ಕ್ರಿಕೆಟ್​ ನೋಡದವರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕಾವ್ಯಾ ಮಾರನ್​ ಸೌಂದರ್ಯಕ್ಕೆ ಫಿದಾ ಆಗುತ್ತಾರೆ.

ಅಂದಹಾಗೆ ಕಾವ್ಯಾ ಮಾರನ್ ಅವರು ಕ್ರಿಕೆಟ್ ಅಭಿಮಾನಿಗಳಿಗೆ ಹಾಟ್ ಫೇವರಿಟ್ ಆಗಿದ್ದಾರೆ. ಹೀಗಾಗಿ ಆಕೆಗೆ ಅಡ್ಡಹೆಸರು ಇಟ್ಟಿದ್ದಾರೆ. ನಮ್ಮ 'ಕಾವ್ಯಾ ಪಾಪಾ'ಳ ಮುಖದಲ್ಲಿ ಮೂಡುವ ಖುಷಿ ನೋಡುವುದಕ್ಕೋಸ್ಕರ ನಾವು ಕ್ರಿಕೆಟ್ ಮ್ಯಾಚ್ ನೋಡುತ್ತೇವೆ ಎನ್ನುತ್ತಾರೆ ಅಭಿಮಾನಿಗಳು. ಎಸ್‌ಆರ್‌ಎಚ್ ಪಂದ್ಯಗಳು ನಡೆಯುವ ಕ್ರೀಡಾಂಗಣದಲ್ಲಿ ಕಾವ್ಯಾ ಪಾಪಾ ಪ್ರತಿ ಬಾಲ್‌ಗೆ ನೀಡುವ ಎಕ್ಸ್‌ಪ್ರೆಶನ್‌ಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇಂದು ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ಪ್ರಸಕ್ತ ಐಪಿಎಲ್​ ಟೂರ್ನಿಯ ಫೈನಲ್​ ಪಂದ್ಯ ನಡೆಯಲಿದೆ. ಇಂದು ನಡೆಯಲಿರುವ ಅಂತಿಮ ಹೋರಾಟದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಕ್ವಾಲಿಫೈಯರ್​ 1ರಲ್ಲಿ ಕೆಕೆಆರ್​ ವಿರುದ್ಧ ಸೋತು ಕ್ವಾಲಿಫೈಯರ್​ 2ರಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ಗೆದ್ದು ಫೈನಲ್​ ಪ್ರವೇಶಿಸಿರುವ ಎಸ್​ಆರ್​ಎಚ್​, ಟ್ರೋಫಿಗಾಗಿ ಮತ್ತೆ ಕೆಕೆಆರ್​ ತಂಡದ ಜತೆ ಸೆಣಸಾಡಲಿದೆ.

ಇತ್ತೀಚೆಗೆ ಕಾವ್ಯಾ ಮಾರನ್ ಅವರ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಕಾವ್ಯಾ ಮಾರನ್ ಈಗಾಗಲೇ ಹಲವರ ಜೊತೆ ಡೇಟ್ ಮಾಡಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿವೆ. ಇತ್ತೀಚೆಗಷ್ಟೇ ಕಾವ್ಯಾ ಮಾರನ್ 23ರ ಹರೆಯದ ತಮ್ಮ ತಂಡದ ಆಟಗಾರನನ್ನು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಇದು ವದಂತಿಯಷ್ಟೇ. ಕಾವ್ಯಾ ಮಾರನ್ ಇತ್ತೀಚೆಗೆ ಹೆಚ್ಚು ಸುದ್ದಿಯಾಗಿರುವುದರಿಂದ ಅವರ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ.

ಕಾವ್ಯಾ ಅವರು ಅಭಿಷೇಕ್ ಶರ್ಮ ಜತೆ ತುಂಬಾ ಕ್ಲೋಸ್ ಆಗಿದ್ದಾರೆ ಎಂಬ ವದಂತಿ ಹಬ್ಬಿದೆ. ಅಭಿಷೇಕ್​ ಅವರು ಹಲವು ವರ್ಷಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡುತ್ತಿದ್ದಾರೆ. ಈ ತಂಡದ ಸ್ಟಾರ್ ಆಟಗಾರರನ್ನೇ ಹೊರಹಾಕಿರುವ ಕಾವ್ಯಾ ಮಾರನ್, ಅಭಿಷೇಕ್​ ಅವರನ್ನು ಮುಂದುವರಿಸುತ್ತಿದ್ದಾರೆ. ಹೀಗಾಗಿ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಪ್ರಚಾರ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಆದರೆ ಇದೆಲ್ಲ ವದಂತಿಯಷ್ಟೇ ಎಂದು ಆಪ್ತ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)