ಟೋಕಿಯೊ: ಕೋವಿಡ್-19 ರಿಂದಾಗಿ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿರುವ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟ ಶೇಕಡ 77 ರಷ್ಟು ನಡೆಯುವುದು ಅನುಮಾನವಾಗಿದೆ ಎಂದು ಜಪಾನ್ ನ್ಯೂಸ್ ನೆಟ್‌ವರ್ಕ್ (ಜೆನ್‌ಎನ್) ನಡೆಸಿದ ಸರ್ವೆಯಿಂದ ತಿಳಿದು ಬಂದಿದೆ. ಇದೇ ಜುಲೈ-ಆಗಸ್ಟ್‌ನಲ್ಲಿ ನಿಗದಿಯಾಗಿದ್ದ 2020ರ ಟೋಕಿಯೊ ಒಲಿಂಪಿಕ್ಸ್ ಇದೀಗ ಒಂದು ವರ್ಷ ಮುಂದಕ್ಕೆ ಹೊಂದಿದೆ. ಆಯೋಜಕರು ಸಿದ್ಧತೆ ಕೈಗೊಳ್ಳುತ್ತಿದ್ದರೂ ಮುಂದಿನ ವರ್ಷವೂ ಕ್ರೀಡಾಕೂಟ ನಡೆಯುವುದು ಅನುಮಾನವಾಗಿದೆ.
ಕರೊನಾ ವೈರಸ್ ಭೀತಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. 2020ರ ಜಾಗತಿಕ ಕ್ರೀಡಾಲೋಕವೇ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಅದೆಷ್ಟೋ ಅಂತಾರಾಷ್ಟ್ರೀಯ ಕ್ರೀಡಾಕೂಟಗಳು ಮುಂದಿನ ವರ್ಷಕ್ಕೆ ಮುಂದೂಡಿಕೆಯಾದರೆ, ಕೆಲವು ರದ್ದುಗೊಂಡಿವೆ. ಈಗಾಗಲೇ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವ ಟೋಕಿಯೊ ಒಲಿಂಪಿಕ್ಸ್ ತೂಗುಯ್ಯಲೆಯಲ್ಲಿ ಸಿಲುಕಿದೆ. ಜೆನ್‌ಎನ್ ನಡೆಸಿದ ಸರ್ವೆಯಂತೆ ಶೇಕಡ 77 ರಷ್ಟು ಜನ ಮುಂದಿನ ವರ್ಷವೂ ಒಲಿಂಪಿಕ್ಸ್ ನಡೆಯುವುದು ಅನುಮಾನ ಎಂದು ತಿಳಿಸಿದ್ದಾರೆ. ಕೇವಲ 17 ಮಂದಿಯಷ್ಟು ಮಂದಿ ಕ್ರೀಡಾಕೂಟ ನಡೆಯುತ್ತದೆ ಎಂದಿದ್ದಾರೆ. ಕಡಿಮೆ ಖರ್ಚಿನಲ್ಲಿ ಕ್ರೀಡಾಕೂಟ ಆಯೋಜಿಸುವ ಗುರಿಯಲ್ಲಿದ್ದಾರೆ. ಒಟ್ಟಾರೆ, ಟೋಕಿಯೊ ಒಲಿಂಪಿಕ್ಸ್ ಹಾದಿ ಅಷ್ಟು ಸುಲಭವಾಗಿಲ್ಲ.
ಇದನ್ನೂ ಓದಿ:ಹಾವು ಕಚ್ಚಿದ್ದಕ್ಕೆ ಮದ್ದು ಇದೆ, ತಪ್ಪು ಗ್ರಹಿಕೆಗೆ ಇಲ್ಲ ಎಂದು ಅಫ್ರಿದಿಗೆ ಚಾಟಿ ಬೀಸಿದ ಆಕಾಶ್ ಚೋಪ್ರಾ!
2020ರ ಜುಲೈ-ಆಗಸ್ಟ್‌ನಲ್ಲಿ ನಿಗದಿಯಾಗಿದ್ದ ಟೋಕಿಯೊ ಒಲಿಂಪಿಕ್ಸ್ ಇದೀಗ 2021ರ ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿದೆ. ಕ್ರೀಡಾಗ್ರಾಮ ಬಹುತೇಕ ಪೂರ್ಣಗೊಂಡಿದ್ದರೂ ಇದೀಗ ಅದರ ನಿರ್ವಹಣೆಯೇ ಆಯೋಜಕರಿಗೆ ದೊಡ್ಡ ತಲೆನೋವಾಗಿದೆ.