ನವದೆಹಲಿ: ಪಸ್ತುತ ಅಮೆರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗಳಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತ ಬಂದಿರುವ ಟೀಂ ಇಂಡಿಯಾ ಸದ್ಯ ಗೆಲುವಿನ ರಾಯಭಾರಿಯಂತೆ ಮಿಂಚುತ್ತಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ನೇತೃತ್ವದಲ್ಲಿ ಮುನ್ನುಗ್ಗುತ್ತಿರುವ ಭಾರತ ತಂಡಕ್ಕೆ ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಪ್ರಶಂಸೆ, ಮೆಚ್ಚುಗೆಗಳು ಹರಿದುಬರುತ್ತಿವೆ.
ಇದನ್ನೂ ಓದಿ: ಕೆಂಪೇಗೌಡರ ಜಯಂತಿ ಅರ್ಥಪೂರ್ಣವಾಗಿ ಆಚರಿಸೋಣ
ಒಂದೆಡೆ ಟೀಂ ಇಂಡಿಯಾ ನೋಡುತ್ತಿರುವ ಸತತ ಗೆಲುವು ಈ ಬಾರಿಯ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯುವ ಭರವಸೆ ಅಭಿಮಾನಿಗಳಲ್ಲಿ ಮೂಡಿಸಿದರೆ, ಮತ್ತೊಂದೆಡೆ ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್ ನಡುವೆ ಯಾವುದು ಸರಿಯಲ್ಲ ಎಂಬಂತೆ ಮೇಲ್ನೋಟಕ್ಕೆ ತೋರುತ್ತಿದೆ. ಆದ್ರೆ, ಈ ಬಗ್ಗೆ ಇನ್ನಷ್ಟು ಸ್ಪಷ್ಟತೆ ಬೇಕಿದೆ ಎಂಬುದರಲ್ಲಿ ಕಿಂಚಿತ್ತು ಅನುಮಾನವೇ ಬೇಡ.
ಈ ಬಾರಿಯ ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳದ ಶುಭಮನ್ ಗಿಲ್, ತಮ್ಮ ಲಗೇಜ್ ಸಮೇತ ತಂಡದೊಂದಿಗೆ ಅಮೆರಿಕಾಗೆ ಬಂದಿದ್ದನ್ನು ಕಂಡು ಮುಂಬರುವ ಪಂದ್ಯಗಳಲ್ಲಿ ಅವರನ್ನು ಕಣಕ್ಕಿಳಿಸಬಹುದೇನೋ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಇದೀಗ ಗಿಲ್ರನ್ನು ಭಾರತಕ್ಕೆ ವಾಪಾಸ್ ಕಳಿಸಲು ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧರಿಸಿದ್ದು, ಕೆಲವು ಕಾರಣಗಳಿಂದ ನಿರ್ಗಮಿಸುವಂತೆ ತಿಳಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಯುವಪಥದಲ್ಲಿ ಜು.3ತನಕ ಚಿತ್ರಕಲಾ ಪ್ರದರ್ಶನ; ಚಿತ್ರಕಲೆಯಲ್ಲಿ ಕಲಾವಿದನ ನೈಜತೆ ಮುಖ್ಯ ಎಂದ ಸುಬ್ರಹ್ಮಣ್ಯಂ ವೇಣುಗೋಪಾಲ್
ಟೀಂ ಇಂಡಿಯಾ ತಂಡಕ್ಕೆ ರಿಂಕು ಸಿಂಗು, ಶುಭಮನ್ ಗಿಲ್, ಆವೇಶ್ ಖಾನ್ ಮತ್ತು ಕಲೀಲ್ ಅಹ್ಮದ್ರನ್ನು ಮೀಸಲು ಆಟಗಾರರನ್ನಾಗಿ ಉಳಿಸಿಕೊಳ್ಳಲಾಗಿತ್ತು. ಅದರಂತೆಯೇ ಇಂದಿನ (ಜೂ.15) ಕೆನಡಾ ವಿರುದ್ಧದ ಪಂದ್ಯದಲ್ಲಿ ರಿಂಕು ಅವರನ್ನು ರೋಹಿತ್ ಜತೆ ಆರಂಭಿಕ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಸಲು ಮ್ಯಾನೇಜ್ಮೆಂಟ್ ನಿರ್ಧರಿಸಿತು. ಈ ವೇಳೆ ಆವೇಶ್ ಖಾನ್ ಮತ್ತು ಗಿಲ್ಗೆ ಭಾರತಕ್ಕೆ ಹಿಂತಿರುಗುವಂತೆ ತಿಳಿಸಿದೆ.
ವರದಿಗಳ ಪ್ರಕಾರ, ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮರನ್ನು ಶುಭಮನ್ ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದಾರೆ ಎಂಬ ವದಂತಿಗಳು ವ್ಯಾಪಕವಾಗಿ ಕೇಳಿಬಂದಿವೆ. ತಮ್ಮನ್ನು ತಂಡದಿಂದ ಹೊರಗಿಡಲು ರೋಹಿತ್ ಕಾರಣವೆಂದು ಭಾವಿಸಿ, ಗಿಲ್ ಇಂತಹ ಕೆಲಸ ಮಾಡಿದ್ದಾರೆಯೇ ಎಂದು ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).