ಇನ್ಸ್ಟಾಗ್ರಾಮ್ ರೀಲ್ಸ್ಗೆ 70,000 ದ ಉಂಗುರ ಕಳೆದುಕೊಂಡ ಯುವತಿ
- ಇನ್ಸ್ಟಾಗ್ರಾಮ್ ರೀಲ್ಸ್ಗೆ 70,000 ದ ಉಂಗುರ ಕಳೆದುಕೊಂಡ ಯುವತಿ
- ಕ್ರಿಕೆಟ್ ನೋಡಲು ಹೋಗಿ ರಿಂಗ್ ಲಾಸ್ಟ್ ಎಂದು ಫೋಸ್ಟ್
- ಸಾಮಾಜಿಕ ಜಾಲತಾಣದಲ್ಲಿ ವಿಡೊಯೋ ವೈರಲ್
ಐಪಿಎಲ್: ಭಾರತದ ಕ್ರಿಕೆಟ್ ಉತ್ಸವವಾದ ಐಪಿಎಲ್ ಟೂರ್ನಿ ಈಗಾಗಲೇ ಆರಂಭಗೊಂಡಿದ್ದು, ಇಲ್ಲಿವರೆಗೆ ಸುಮಾರು 22 ಪಂದ್ಯಗಳು ಮುಗಿದಿದ್ದು, ಇನ್ನೂ ಸಾಕಷ್ಟು ಪಂದ್ಯಗಳು ಮುಂದಿನ ದಿನ ನಡೆಯಲಿದೆ. ಆದರೆ ಮೈದಾನದಲ್ಲಿ ಪಂದ್ಯಾವಳಿ ನಡೆಯುತ್ತಿದ್ದರೆ ಸ್ಟಾಂಡ್ಸ್ನಲ್ಲಿ ನಿಂತಿರುವ ಜನರು ಕ್ರಿಕೆಟ್ ನೋಡುವ ಬದಲು ರೀಲ್ಸ್ (Instagram Reels) ಮಾಡುವುದರಲ್ಲಿಯೇ ನಿರತರಾಗಿರುವುದು ಬೇಸರದ ಸಂಗತಿಯಾಗಿದೆ.
70,000 ಕಳೆದು ಕೊಂಡ ಯುವತಿ!
ಎಪ್ರಿಲ್ 11 ಶನಿವಾರ ಸನ್ರೈಸರ್ಸ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವನ್ನು ವೀಕ್ಷಿಸಲು ಮುಲ್ಲನ್ಪುರ್ ಕ್ರಿಕೆಟ್ ಸ್ಟೇಡಿಯಂಗೆ ಬಂದ ಯುವತಿಯೊಬ್ಬಳು ಪಂದ್ಯವನ್ನು ವೀಕ್ಷಿಸುವ ಬದಲು ಇನ್ಸ್ಟಾಗ್ರಾಮ್ ರೀಲ್ಸ್ ಮಾಡಲು ಮುಂದಾಗಿದ್ದಾಳೆ. ವಿಡಿಯೋನಲ್ಲಿ ಉಂಗುರವನ್ನು ಗಾಳಿಯಲ್ಲಿ ಚಿಮ್ಮಿ ಹಿಡಿಯಲು ಹೋಗಿ ಉಂಗುರವನ್ನು ಬೀಳಿಸಿ ಕೊಂಡಿದ್ದಾಳೆ. ನಂತರ ಎಷ್ಟು ಹುಡುಕಿದರೂ ಆ ಉಂಗುರ ಸಿಗದೆ ಯುವತಿ ಕಂಗಾಲಾಗಿದ್ದಾಳೆ.
ಉಂಗುರವನ್ನು ಹುಡುಕಿಕೊಡಿ.. ಪ್ಲೀಸ್
ಉಂಗುರವನ್ನು ಕಳೆದುಕೊಂಡ ಹುಡುಗಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನನ್ನ ಉಂಗುರ ಕ್ರೀಡಾಂಗಣದಲ್ಲಿ ಕಳೆದು ಹೋಗಿದೆ ಅದು ಸುಮಾರು 70,000 ಮೌಲ್ಯವುಳ್ಳ ಉಂಗುರ ದಯವಿಟ್ಟು ಯಾರಿಗಾದರೂ ದೊರಕಿದರೆ ನನ್ನನ್ನು ಸಂಪರ್ಕಿಸಿ ಎಂದು ಹೇಳಿದ್ದಾಳೆ.
ನೆಟ್ಟಿಗರು ಏನಂತಾರೆ?
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಯುವತಿಗೆ ಸಹಾನುಭೂತಿ ತೋರಿಸುವ ಬದಲು ಕಾಲೆಳೇಯುವ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.
ಸ್ಟೇಡಿಯಂಗೆ ಹೋದೆವಾ, ಮ್ಯಾಚ್ ನೋಡಿದೆವಾ, ಮನೆಗೆ ಬಂದೆವಾ ಸಾಕು; ಈ ರೀಲ್ಸ್ ಶೋಕಿಯೆಲ್ಲಾ ಏಕೆ ಬೇಕು? ಎಂದು ಒಬ್ಬ ಬಳಕೆದಾರ ಪ್ರಶ್ನಿಸಿದ್ದಾರೆ. ಅಲ್ಲ ತಾಯಿ ನಿನಗೆ ಉಂಗುರವನ್ನು ಕ್ಯಾಚ್ ಹಿಡಿಯಲು ಬರದಿದ್ದರೆ ಅದನ್ನು ಗಾಳಿಯಲ್ಲೆ ಏಕೆ ಎಸೆದೆ? ಈಗ ಅನುಭವಿಸು ಎಂದು ಇನ್ನೊಬ್ಬರು ಹೇಳಿದ್ದಾರೆ. ಆ ಉಂಗುರ ಯಾರಿಗಾದರೆ ದೊರೆತರೂ ಅವರು ನಿನಗೆ ವಾಪಸ್ ನೀಡುವುದು ಸುಳ್ಳೆಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ, (ಏಜನ್ಸೀಸ್).