ಕ್ರೀಡೆ

IPL Auction: ಸ್ಟಾರ್​ ವೇಗಿ ಮಯಾಂಕ್​ ಯಾದವ್​ ಮೇಲೆ ಕಣ್ಣಿಟ್ಟಿವೆ ಈ 3 ಬಲಿಷ್ಠ ತಂಡಗಳು

ನವದೆಹಲಿ: ಐಪಿಎಲ್​ 18ನೇ ಆವೃತ್ತಿ (IPL 2025) ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ಈಗಾಗಲೇ ಹಲವು ವಿಷಯಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಲು ಆರಂಭಿಸಿವೆ. ಮುಂಬರುವ​ ಸೀಸನ್​ನಲ್ಲಿ ಮಹತ್ವದ ಬದಲಾವಣೆಗಳು ಆಗಲಿದೆ ಎಂಬ ನಿರೀಕ್ಷೆಗಳೇ ಸದ್ಯ ಜೋರಾಗಿದ್ದು, ಐಪಿಎಲ್​ ಮೆಗಾ ಹರಾಜು (IPL Auction 2025) ಪ್ರಕ್ರಿಯೆಯಲ್ಲಿ ಆಯಾ ಫ್ರಾಂಚೈಸಿಗಳ ಕ್ಯಾಪ್ಟನ್​ಗಳು ಸೇರಿದಂತೆ ಸ್ಟಾರ್​ ಆಟಗಾರರು ಈಗಿರುವ ತಮ್ಮ ತಂಡ ಬಿಟ್ಟು ಬೇರೆ ತಂಡಗಳಿಗೆ ಸೇರುತ್ತಾರೆ ಎಂಬ ಸುದ್ದಿಗಳು ಐಪಿಎಲ್ ಅಭಿಮಾನಿಗಳಲ್ಲಿ ಭಾರೀ ಗೊಂದಲ ಹುಟ್ಟುಹಾಕಿದೆ. ಇನ್ನು ಇದೇ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಆಕ್ಷನ್​ನತ್ತ ಎದುರುನೋಡುತ್ತಿರುವ ಫ್ರಾಂಚೈಸಿಗಳು, ಸ್ಟಾರ್​ ಆಟಗಾರರನ್ನು ನಮ್ಮ ತಂಡಕ್ಕೆ ಕರೆದುಕೊಳ್ಳಲು ದೊಡ್ಡ ಲೆಕ್ಕಾಚಾರಗಳನ್ನೇ ಹಾಕಿಕೊಂಡಿವೆ.

ಪ್ರಸ್ತುತ ನಡೆಯುತ್ತಿರುವ ಬಾಂಗ್ಲಾದೇಶ ಮತ್ತು ಭಾರತ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಯುವ ವೇಗಿ ಮಯಾಂಕ್ ಯಾದವ್​​, ತನ್ನ ಮೊದಲ ಟಿ20 ಪಂದ್ಯದಲ್ಲಿಯೇ ಮೈಡನ್​ ಓವರ್​ ದಾಖಲಿಸಿದ ಭಾರತದ ಮೂರನೇ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ದಾಖಲೆ ನಿರ್ಮಿಸಿದ ಯುವ ಕ್ರಿಕೆಟಿಗನಾಗಿ ಹೊರಹೊಮ್ಮಿರುವ ಮಯಾಂಕ್​ಗೆ ಕ್ರಿಕೆಟ್ ಪ್ರೇಮಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೇ ಸಮಯದಲ್ಲಿ ಮುಂಬರುವ ಐಪಿಎಲ್​ ಆಕ್ಷನ್​ ಮೇಲೆ ಎಲ್ಲರ ಚಿತ್ತ ಮೂಡಿದ್ದು, ಮಯಾಂಕ್​ ಯಾದವ್​ರನ್ನು ಲಖನೌ ಸೂಪರ್​ಜೈಂಟ್ಸ್​ ಉಳಿಸಿಕೊಳ್ಳಲಿದೆಯಾ ಅಥವಾ ಹರಾಜು ಪ್ರಕ್ರಿಯೆಯಲ್ಲಿ ರಿಲೀಸ್ ಮಾಡಿ ಕಳೆದುಕೊಳ್ಳಲಿದೆಯಾ ಎಂಬ ಪ್ರಶ್ನೆ ಇದೀಗ ಕ್ರೀಡಾಭಿಮಾನಿಗಳಲ್ಲಿ ಕಾಡುತ್ತಿದೆ.

ಹದ್ದಿನ ಕಣ್ಣು

ಗಂಟೆಗೆ 156.7 ಕಿ.ಮೀ ವೇಗದಲ್ಲಿ ಬೌಲಿಂಗ್ ದಾಳಿ ನಡೆಸುವ ಮಯಾಂಕ್​ ಮೇಲೆ ಸದ್ಯ ಮೂರು ಬಲಿಷ್ಠ ಐಪಿಎಲ್ ಫ್ರಾಂಚೈಸಿಗಳು ಕಣ್ಣಿಟ್ಟಿದೆ. ಒಂದು ವೇಳೆ ಲಖನೌ ಸೂಪರ್​ಜೈಂಟ್ಸ್​ ಏನಾದರೂ ಆಕ್ಷನ್​ನಲ್ಲಿ ಅವರನ್ನು ರಿಲೀಸ್​ ಮಾಡಿದರೆ ದೊಡ್ಡ ಮಟ್ಟದಲ್ಲಿ ಬಿಡ್​ ಮಾಡಿ, ತಮ್ಮ ತಂಡಕ್ಕೆ ಖರೀದಿ ಮಾಡಲು ಈ ಮೂರು ತಂಡಗಳು ಸದ್ಯ ಎದುರುನೋಡುತ್ತಿವೆ. ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಎಲ್​ಎಸ್​ಜಿ ತಮ್ಮ ತಂಡದ ಅದ್ಭುತ ವೇಗಿ ಮಯಾಂಕ್​ ಯಾದವ್​ರನ್ನು ರಿಲೀಸ್​ ಮಾಡುವುದು ಪಕ್ಕಾ ಎಂಬುದರ ಬಗ್ಗೆ ಇಲ್ಲಿಯವರೆಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಆದ್ರೆ, ಒಂದು ವೇಳೆ ಬಿಡುಗಡೆ ಮಾಡಿದ್ದೇ ಆದರೆ ಈ ಕೆಳಗೆ ಹೆಸರಿಸಿರುವ ತಂಡಗಳು ಮಾತ್ರ ಮಯಾಂಕ್​ನ ಖರೀದಿ ಮಾಡಲು ತುದಿಗಾಲಿನಲ್ಲಿ ನಿಂತಿವೆ ಎಂದು ವರದಿಯಾಗಿದೆ.

ಆ ಮೂರು ಬಲಿಷ್ಠ ತಂಡಗಳು

1. ಮುಂಬೈ ಇಂಡಿಯನ್ಸ್​

2. ರಾಯಲ್ ಚಾಲೆಂಜರ್ಸ್​ ಬೆಂಗಳೂರು

3. ಚೆನ್ನೈ ಸೂಪರ್ ಕಿಂಗ್ಸ್​