ಕ್ರೀಡೆ

IPL 2024: ಯಾವ ಆಟಗಾರರು ಮೊದಲ ಮತ್ತು ಎರಡನೇ ಸೆಟ್‌ಗಳ ಹರಾಜಿನಲ್ಲಿದ್ದಾರೆ? ಇಲ್ಲಿದೆ ಮಾಹಿತಿ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ರ ಹರಾಜು ಇಂದು ದುಬೈನ ಕೋಕಾ-ಕೋಲಾ ಅರೆನಾದಲ್ಲಿ ನಡೆಯುತ್ತಿದ್ದು, ಭಾರತೀಯ ಕಾಲಮಾನದ ಪ್ರಕಾರ 1 ಗಂಟೆಗೆ ಪ್ರಾರಂಭವಾಗಿದೆ. ಯಾವ ಆಟಗಾರರು ಯಾವ ತಂಡಕ್ಕೆ ಸೇಲ್ ಆಗುತ್ತಾರೆ? ಎಂಬುದು ಸದ್ಯ ಕ್ರಿಕೆಟ್​ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಅಂತಿಮ IPL 2024ರ ಹರಾಜಿನಲ್ಲಿ 332 ಆಟಗಾರರು ಇದ್ದು, ಗರಿಷ್ಠ 77 ಸ್ಲಾಟ್‌ಗಳು 10 ಫ್ರಾಂಚೈಸಿಗಳಿಂದ ತುಂಬಲು ಲಭ್ಯವಿವೆ. ಇವರಲ್ಲಿ 30 ಮಂದಿ ವಿದೇಶಿ ಆಟಗಾರರಾಗಿದ್ದಾರೆ. ಒಟ್ಟು 214 ಭಾರತೀಯ ಆಟಗಾರರು ಮತ್ತು 118 ವಿದೇಶಿ ಆಟಗಾರರು ಇರುತ್ತಾರೆ. ಅದುವೇ ಇಬ್ಬರು ಅಸೋಸಿಯೇಟ್ ರಾಷ್ಟ್ರಗಳಿಂದ. 116 ಕ್ಯಾಪ್ಡ್ ಆಟಗಾರರಿದ್ದು, 214 ಅಸೋಸಿಯೇಟ್ ರಾಷ್ಟ್ರಗಳ ಇಬ್ಬರು ಆಟಗಾರರಿದ್ದಾರೆ.

ಹರಾಜಿನ ಮೊದಲ ಎರಡು ಸೆಟ್‌ಗಳನ್ನು ಕ್ಯಾಪ್ಡ್ ಬ್ಯಾಟರ್ಸ್ ಮತ್ತು ಕ್ಯಾಪ್ಡ್ ಆಲ್-ರೌಂಡರ್‌ಗಳಿಗೆ ಗೊತ್ತುಪಡಿಸಲಾಗಿದ್ದು, ವಿವರ ಹೀಗಿದೆ ನೋಡಿ.

ಸೆಟ್ 1 ಕ್ಯಾಪ್ಡ್ ಬ್ಯಾಟರ್ಸ್:

ಹ್ಯಾರಿ ಬ್ರೂಕ್ (ಇಂಗ್ಲೆಂಡ್) - ಮೂಲ ಬೆಲೆ: 2 ಕೋಟಿ ರೂ.

ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ) - ಮೂಲ ಬೆಲೆ: 2 ಕೋಟಿ ರೂ.

ಕರುಣ್ ನಾಯರ್ (ಭಾರತ) - ಮೂಲ ಬೆಲೆ: 0.5 ಕೋಟಿ ರೂ.

ಮನೀಶ್ ಪಾಂಡೆ (ಭಾರತ) - ಮೂಲ ಬೆಲೆ: 0.5 ಕೋಟಿ ರೂ.

ರೋವ್ಮನ್ ಪೊವೆಲ್ (ವೆಸ್ಟ್ ಇಂಡೀಸ್) - ಮೂಲ ಬೆಲೆ: 1 ಕೋಟಿ ರೂ.

ರಿಲೀ ರೊಸೊವ್ (ದಕ್ಷಿಣ ಆಫ್ರಿಕಾ) - ಮೂಲ ಬೆಲೆ: 2 ಕೋಟಿ ರೂ.

ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ) - ಮೂಲ ಬೆಲೆ: 2 ಕೋಟಿ ರೂ.

ಸೆಟ್ 2 ಕ್ಯಾಪ್ಡ್ ಆಲ್ ರೌಂಡರ್ಸ್:

ಜೆರಾಲ್ಡ್ ಕೋಟ್ಜಿ (ದಕ್ಷಿಣ ಆಫ್ರಿಕಾ) - ಮೂಲ ಬೆಲೆ: 2 ಕೋಟಿ ರೂ.

ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ) - ಮೂಲ ಬೆಲೆ: 2 ಕೋಟಿ ರೂ.

ವನಿಂದು ಹಸರಂಗಾ (ಶ್ರೀಲಂಕಾ) - ಮೂಲ ಬೆಲೆ: 1.5 ಕೋಟಿ ರೂ.

ಡ್ಯಾರಿಲ್ ಮಿಚೆಲ್ (ನ್ಯೂಜಿಲೆಂಡ್) - ಮೂಲ ಬೆಲೆ: 1 ಕೋಟಿ ರೂ.

ಅಜ್ಮತುಲ್ಲಾ ಒಮರ್ಜಾಯ್ (ಅಫ್ಘಾನಿಸ್ತಾನ) - ಮೂಲ ಬೆಲೆ: 0.5 ಕೋಟಿ ರೂ.

ಹರ್ಷಲ್ ಪಟೇಲ್ (ಭಾರತ) - ಮೂಲ ಬೆಲೆ: 2 ಕೋಟಿ ರೂ.

ರಚಿನ್ ರವೀಂದ್ರ (ನ್ಯೂಜಿಲೆಂಡ್) - ಮೂಲ ಬೆಲೆ: 0.5 ಕೋಟಿ ರೂ.

ಶಾರ್ದೂಲ್ ಠಾಕೂರ್ (ಭಾರತ) - ಮೂಲ ಬೆಲೆ: 2 ಕೋಟಿ ರೂ.

ಕ್ರಿಸ್ ವೋಕ್ಸ್ (ಇಂಗ್ಲೆಂಡ್) - ಮೂಲ ಬೆಲೆ: 2 ಕೋಟಿ ರೂ. (ಏಜೆನ್ಸೀಸ್).