More

    ಡಿಂಪಲ್ ಯಾದವ್, ತರೂರ್ ಸೇರಿದಂತೆ ಲೋಕಸಭೆಯಿಂದ ಮತ್ತೆ 49 ಸಂಸದರ ಅಮಾನತು; ಈವರೆಗೆ 141 ಪ್ರತಿಪಕ್ಷ ಸದಸ್ಯರ ಮೇಲೆ ಕ್ರಮ

    ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದ ಮಧ್ಯೆ ವಿರೋಧ ಪಕ್ಷದ ಸಂಸದರ ವಿರುದ್ಧ ಕ್ರಮದ ಪ್ರಕ್ರಿಯೆ ಮುಂದುವರೆದಿದೆ. ಇನ್ನು 49 ಸಂಸದರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿದೆ.

    ಲೋಕಸಭೆಯಲ್ಲಿ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಲು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಪ್ರಸ್ತಾಪಿಸಿದರು, ನಂತರ ವಿರೋಧ ಪಕ್ಷದ ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಯಿತು. ಇವರಲ್ಲಿ ಸಂಸದರಾದ ಸುಪ್ರಿಯಾ ಸುಳೆ, ಮನೀಶ್ ತಿವಾರಿ, ಶಶಿ ತರೂರ್, ಮೊಹಮ್ಮದ್ ಫೈಸಲ್, ಕಾರ್ತಿ ಚಿದಂಬರಂ, ಸುದೀಪ್ ಬಂಧೋಪಾಧ್ಯಾಯ, ಡಿಂಪಲ್ ಯಾದವ್ ಮತ್ತು ಡ್ಯಾನಿಶ್ ಅಲಿ ಮತ್ತು ಇತರ ವಿರೋಧ ಪಕ್ಷದ ಸಂಸದರು ಸೇರಿದ್ದಾರೆ. 

    ಇದುವರೆಗೆ 141 ಸಂಸದರ ವಿರುದ್ಧ ಕ್ರಮ
    ಸಂಸತ್ತಿನ ಭದ್ರತಾ ಲೋಪದ ಘಟನೆಗೆ ಸಂಬಂಧಿಸಿದಂತೆ ಸೋಮವಾರ, ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ಗದ್ದಲವನ್ನು ಸೃಷ್ಟಿಸಿದ್ದರು. ಅದರ ನಂತರ 78 ಪ್ರತಿಪಕ್ಷ ಸದಸ್ಯರನ್ನು ಲೋಕಸಭೆ ಮತ್ತು ರಾಜ್ಯಸಭೆಯಿಂದ ಅಮಾನತುಗೊಳಿಸಲಾಯಿತು. ಇದಕ್ಕೂ ಮುನ್ನ 14 ಸಂಸದರನ್ನು ಅಮಾನತುಗೊಳಿಸಲಾಗಿದೆ. ಆದರೆ, ಇಂದು ಇನ್ನೂ 49 ಸಂಸದರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ 141 ಪ್ರತಿಪಕ್ಷ ಸದಸ್ಯರನ್ನು ಅಮಾನತು ಮಾಡಲಾಗಿದೆ. 

    ಪ್ಲೇ ಸ್ಟೋರ್‌ನಿಂದ ಸಾವಿರಾರು ಅಪ್ಲಿಕೇಶನ್‌ ತೆಗೆದುಹಾಕಿದ ಗೂಗಲ್

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts