ಕ್ರೀಡೆ

ಯಾರಿಗೆ ಯಾವ ಪ್ರಶಸ್ತಿ? ಎಷ್ಟು ಹಣ ಸಿಕ್ತು? ಇಲ್ಲಿದೆ 18ನೇ ಐಪಿಎಲ್​ ಆವೃತ್ತಿಯ ಕಂಪ್ಲೀಟ್​ ಅವಾರ್ಡ್​ ಲಿಸ್ಟ್...! IPL 2025 Awards ​

IPL 2025 Awards : ಬರೋಬ್ಬರಿ 18 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ ಚಾಂಪಿಯನ್ ಆಗಿದೆ. ಮಂಗಳವಾರ (ಜೂನ್​ 04) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸುವ ಮೂಲಕ RCB ಐಪಿಎಲ್ 2025ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಮೂರು ಬಾರಿ ಫೈನಲ್‌ನಲ್ಲಿ ಸೋತಿದ್ದ ಬೆಂಗಳೂರು ತಂಡ, ತನ್ನ ನಾಲ್ಕನೇ ಪ್ರಯತ್ನದಲ್ಲಿ ಟ್ರೋಫಿಯನ್ನು ಎತ್ತಿಹಿಡಿಯಿತು. ಆರ್​ಸಿಬಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮುತ್ತಿದ್ದಂತೆ ಆಟಗಾರರು ಮತ್ತು ಅಭಿಮಾನಿಗಳು ಸಂಭ್ರಮಿಸಿದರು. ಐಪಿಎಲ್​ 2025 ಚಾಂಪಿಯನ್ ಆಗಿ ಹೊರಹೊಮ್ಮಿದ ಆರ್​ಸಿಬಿ, 20 ಕೋಟಿ ರೂ. ಬಹುಮಾನ ಮೊತ್ತವನ್ನು ಪಡೆಯಿತು.

ಐಪಿಎಲ್ 2025ರ ರನ್ನರ್ ಅಪ್ ಪಂಜಾಬ್ ಕಿಂಗ್ಸ್ ತಂಡವು 12.5 ಕೋಟಿ ರೂ. ಬಹುಮಾನ ಮೊತ್ತವನ್ನು ಪಡೆದುಕೊಂಡಿತು. ಅರ್ಹತಾ ಸುತ್ತಿನ ತಂಡವು 7 ಕೋಟಿ ರೂ. ಬಹುಮಾನ ಮೊತ್ತವನ್ನು ಮತ್ತು ಎಲಿಮಿನೇಟರ್ ತಂಡವು 6.5 ಕೋಟಿ ರೂ. ಬಹುಮಾನ ಮೊತ್ತವನ್ನು ಪಡೆದುಕೊಂಡಿತು. ತಂಡಗಳಿಗೆ ನೀಡಲಾಗುವ ಬಹುಮಾನದ ಜೊತೆಗೆ ಇತರ ಪ್ರಶಸ್ತಿಗಳು ಇರುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ. ಇವುಗಳಲ್ಲಿ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್, ಫೇರ್ ಪ್ಲೇ ಪ್ರಶಸ್ತಿ, ಫ್ಯಾಂಟಸಿ ಕಿಂಗ್ ಆಫ್ ದಿ ಸೀಸನ್, ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್, ಬೆಸ್ಟ್ ಕ್ಯಾಚ್, ಮೋಸ್ಟ್ ಸಿಕ್ಸಸ್​ ಮತ್ತು ಮೋಸ್ಟ್ ವ್ಯಾಲ್ಯೂಯಬಲ್ ಪ್ಲೇಯರ್ ಮುಂತಾದ ಪ್ರಶಸ್ತಿಗಳು ಸೇರಿವೆ. ಈಗ ಪ್ರಶಸ್ತಿಗಳ ಸಂಪೂರ್ಣ ಪಟ್ಟಿಯನ್ನು ನೋಡೋಣ.

* ಫೈನಲ್​ ಪಂದ್ಯದ ಸೂಪರ್ ಸ್ಟ್ರೈಕರ್ - ಜಿತೇಶ್ ಶರ್ಮ (1 ಲಕ್ಷ ರೂಪಾಯಿ)

* ಫ್ಯಾಂಟಸಿ ಕಿಂಗ್ ಆಫ್ ದಿ ಮ್ಯಾಚ್ - ಶಶಾಂಕ್ ಸಿಂಗ್ (1 ಲಕ್ಷ ರೂಪಾಯಿ)

* ಫೈನಲ್​ ಪಂದ್ಯದಲ್ಲಿ ಸೂಪರ್ ಸಿಕ್ಸರ್ - ಶಶಾಂಕ್ ಸಿಂಗ್ (1 ಲಕ್ಷ ರೂಪಾಯಿ)

* ಫೈನಲ್​ ಪಂದ್ಯದ ಗ್ರೀನ್ ಡಾಟ್ ಬಾಲ್‌ಗಳು - ಕೃನಾಲ್ ಪಾಂಡ್ಯ (1 ಲಕ್ಷ ರೂಪಾಯಿ)

* ಫೈನಲ್​ ಪಂದ್ಯದ ಮ್ಯಾನ್​ ಆಫ್​ ದಿನ ಮ್ಯಾಚ್​ ಅವಾರ್ಡ್​ - ಕೃನಾಲ್ ಪಾಂಡ್ಯ (5 ಲಕ್ಷ ರೂಪಾಯಿ)

* ಈ ಸೀಸನ್​ನ ಉದಯೋನ್ಮುಖ ಆಟಗಾರ - ಸಾಯಿ ಸುದರ್ಶನ್ (10 ಲಕ್ಷ ರೂಪಾಯಿ)

* ಈ ಸೀಸನ್​ನ ಸೂಪರ್ ಸ್ಟ್ರೈಕರ್ - ವೈಭವ್ ಸೂರ್ಯವಂಶಿ (ಟಾಟಾ ಕರ್ವ್)

* ಈ ಸೀಸನ್​ನ ಫ್ಯಾಂಟಸಿ ಕಿಂಗ್ - ಸಾಯಿ ಸುದರ್ಶನ್ (10 ಲಕ್ಷ ರೂಪಾಯಿ)

* ಈ ಸೀಸನ್​ನ ಸೂಪರ್ ಸಿಕ್ಸ್‌ಗಳು - ನಿಕೋಲಸ್ ಪೂರನ್ (10 ಲಕ್ಷ ರೂಪಾಯಿ)

* ಈ ಸೀಸನ್​ನ ಗ್ರೀನ್ ಡಾಟ್ ಬಾಲ್‌ಗಳು - ಮೊಹಮ್ಮದ್ ಸಿರಾಜ್ (10 ಲಕ್ಷ ರೂಪಾಯಿ)

* ಈ ಸೀಸನ್​ನ ಅತ್ಯುತ್ತಮ ಕ್ಯಾಚ್ - ಕಮಿಂದು ಮೆಂಡಿಸ್ (10 ಲಕ್ಷ ರೂಪಾಯಿ)

* ಈ ಸೀಸನ್​ನ ಫೇರ್ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿ - ಚೆನ್ನೈ ಸೂಪರ್ ಕಿಂಗ್ಸ್ (ಟ್ರೋಫಿ)

* ಸೀಸನ್ ಪರ್ಪಲ್ ಕ್ಯಾಪ್ - ಪ್ರಸಿದ್ಧ ಕೃಷ್ಣ (10 ಲಕ್ಷ ರೂಪಾಯಿ)

* ಈ ಸೀಸನ್ ಆರೆಂಜ್ ಕ್ಯಾಪ್ - ಸಾಯಿ ಸುದರ್ಶನ್ (10 ಲಕ್ಷ ರೂಪಾಯಿ)

* ಈ ಸೀಸನ್‌ನ ಅತ್ಯಂತ ಮೌಲ್ಯಯುತ ಆಟಗಾರ - ಸೂರ್ಯಕುಮಾರ್ ಯಾದವ್ (15 ಲಕ್ಷ ರೂಪಾಯಿ)

* ಈ ಸೀಸನ್‌ನ ಅತ್ಯುತ್ತಮ ಪಿಚ್ ಮತ್ತು ಮೈದಾನ ಪ್ರಶಸ್ತಿ - ದೆಹಲಿ ಕ್ರಿಕೆಟ್ ಅಸೋಸಿಯೇಷನ್ ​​(50 ಲಕ್ಷ ರೂಪಾಯಿ)

ಫೈನಲ್​ ಪಂದ್ಯದಲ್ಲಿ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 190 ರನ್ ಗಳಿಸಿತು. ವಿರಾಟ್ ಕೊಹ್ಲಿ (43 ರನ್​, 35 ಎಸೆತ, 3 ಬೌಂಡರಿ) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮಯಾಂಕ್ ಅಗರ್ವಾಲ್ (24), ರಜತ್ ಪಟಿದಾರ್ (26), ಲಿಯಾಮ್ ಲಿವಿಂಗ್‌ಸ್ಟೋನ್ (25), ಮತ್ತು ಜಿತೇಶ್ ಶರ್ಮಾ (24) ಉಪಯುಕ್ತ ರನ್​ಗಳ ಕಾಣಿಕೆ ನೀಡಿದರು. ಪಂಜಾಬ್ ಬೌಲರ್‌ಗಳಲ್ಲಿ ಅರ್ಷದೀಪ್ ಸಿಂಗ್ ಮತ್ತು ಜೇಮಿಸನ್ ತಲಾ ಮೂರು ವಿಕೆಟ್ ಪಡೆದರು. ವಿಜಯ್ ಕುಮಾರ್ ವೈಶಾಕ್ ಮತ್ತು ಚಾಹಲ್ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಪಂಜಾಬ್​ ಪರ ಶಶಾಂಕ್ ಸಿಂಗ್ (ಅಜೇಯ 61 ರನ್​, 30 ಎಸೆತ, 3 ಬೌಂಡರಿ, 6 ಸಿಕ್ಸರ್) ಮತ್ತು ಜೋಶ್ ಇಂಗ್ಲಿಷ್ (39 ರನ್​, 23 ಎಸೆತ, 1 ಬೌಂಡರಿ, 4 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲರಾದರು, ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 184 ರನ್‌ಗಳಿಗೆ ಸೀಮಿತವಾಯಿತು. ಆರ್‌ಸಿಬಿ ಬೌಲರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರು. ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್​)