ಕ್ರೀಡೆ

IPL 2025; ಮ್ಯಾಚ್​ ಫಿಕ್ಸಿಂಗ್​ಗೆ ಯತ್ನ: ತಂಡಗಳಿಗೆ ಖಡಕ್​ ಎಚ್ಚರಿಕೆ ನೀಡಿದ BCCI

IPL 2025 : ಹೈದರಾಬಾದ್​ ಉದ್ಯಮಿಯೊಬ್ಬ ಐಪಿಎಲ್​ ಆಟಗಾರರಿಗೆ ಹಾಗೂ ಆಟಕ್ಕೆ ಸಂಬಂಧಿಸಿದವರನ್ನು ಕಾನೂನು ಬಾಹಿರ ಕೃತ್ಯ ಎಸಗುವಂತೆ(ಮ್ಯಾಚ್​ ಫಿಕ್ಸಿಂಗ್​) ಒತ್ತಾಯಿಸುತ್ತಿದ್ದಾರೆ ಎಂದು ಐಪಿಎಲ್​ ಪಾಲುದಾರರಿಗೆ(ಪ್ರಾಂಚೈಸಿ) ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(BCCI) ಎಚ್ಚರಿಕೆಯನ್ನು ನೀಡಿದೆ.

ಬಿಸಿಸಿಐ ಕ್ರಿಕೆಟಿಗರು, ಕೋಚ್​ಗಳು, ಸಹಾಯಕ ಸಿಬ್ಬಂದಿ ಹಾಗೂ ವ್ಯಾಖ್ಯಾನಕಾರರಿಗೆ ಈ ಬಗ್ಗೆ ಬಿಸಿಸಿಐ ಎಚ್ಚರಿಕೆ ನೀಡಿದೆ. ಅಲ್ಲದೆ, ಉದ್ಯಮಿಯು ಯಾವ ವಿಧಾನಗಳಿಂದ ಫಿಕ್ಸಿಂಗ್​ಗೆ ಆಹ್ವಾನ ನೀಡುತ್ತಿದ್ದಾರೆ ಎನ್ನುವುದರ ಬಗ್ಗೆ ಕೂಡ BCCI ವಿವರವಾಗಿ ಮಾಹಿತಿ ನೀಡಿದೆ.

ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಭ್ರಷ್ಟಾಚಾರ ವಿರೋಧಿ ಭದ್ರತಾ ಘಟಕ (ಎಸಿಎಸ್‌ಯು) ಉದ್ಯಮಿಗೆ ಬುಕ್ಕಿಗಳೊಂದಿಗೆ ಸಂಪರ್ಕವಿದೆ ಎಂದು ಶಂಕೆ ವ್ಯಕ್ತಪಡಿಸುತ್ತದೆ. ಆ ವ್ಯಕ್ತಿಯು ಇತ್ತೀಚಿನ ದಿನಗಳಲ್ಲಿ ಜನರೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿದ್ದಾನೆ ಮತ್ತು ಸ್ಪರ್ಧೆಯಲ್ಲಿ ಭಾಗಿಯಾಗಿರುವ ಜನರೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ವರದಿಯಾಗಿದೆ.

ಇನ್ನು ಉದ್ಯಮಿ ಬಳಸುತ್ತಿರುವ ವಿಧಾನಗಳಲ್ಲಿ ಫ್ರಾಂಚೈಸ್ ಮಾಲೀಕರು, ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ವೀಕ್ಷಕ ವಿವರಣೆಗಾರರ ​​ಕುಟುಂಬ ಸದಸ್ಯರನ್ನು ಸಂಪರ್ಕಿಸುವುದು ಒಂದು ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)