ಐಪಿಎಲ್​ ಅಂಕಪಟ್ಟಿಯಲ್ಲಿ ಯಾವ ತಂಡಗಳು ಟಾಪ್​ 4? ಯಾರ ಬಳಿಯಿದೆ ಆರೆಂಜ್​, ಪರ್ಪಲ್​ ಕ್ಯಾಪ್​; ಇಲ್ಲಿದೆ ಮಾಹಿತಿ | IPL 2025

ವಿಜಯವಾಣಿ (17)
Published on

IPL 2025: ಮಾ.22ರಿಂದ ಶುರುವಾದ ಐಪಿಎಲ್​ 18ನೇ ಆವೃತ್ತಿಯ ಪಂದ್ಯಗಳು ಕ್ರಿಕೆಟ್​ ಅಭಿಮಾನಿಗಳ ಉತ್ಸಾಹ, ಕುತೂಹಲವನ್ನು ಮತ್ತಷ್ಟು ದುಪ್ಪಟ್ಟಾಗಿಸಿದೆ. ಒಂದಕ್ಕಿಂತ ಒಂದು ಪಂದ್ಯ ರೋಚಕತೆಯತ್ತ ಸಾಗುತ್ತಿದ್ದು, ನೋಡುಗರಲ್ಲಿ ಕೌತುಕ ಹುಟ್ಟುಹಾಕುತ್ತಿದೆ. ಪ್ರಸ್ತುತ 10 ಬಲಿಷ್ಠ ತಂಡಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್​, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟನ್ಸ್ ತಂಡಗಳು ಉತ್ತಮ ಆಲ್​ರೌಂಡ್ ಪ್ರದರ್ಶನ ನೀಡುವುದರ ಜತೆಗೆ ಅಂಕಪಟ್ಟಿಯ ಟಾಪ್​ ನಾಲ್ಕು ಸ್ಥಾನಗಳಿಗೆ ಭಾರೀ ಪೈಪೋಟಿ ನೀಡುತ್ತಿವೆ.

ಐಪಿಎಲ್ ಆರಂಭದ ಪಂದ್ಯದಿಂದ ನಿನ್ನೆಯ (ಏ.15) ಪಂಜಾಬ್ ಕಿಂಗ್ಸ್ ಮತ್ತು ಕೆಕೆಆರ್​ ನಡುವಿನ ಹಲವು ಪಂದ್ಯಗಳು ರೋಚಕತೆಗೆ ಸಾಕ್ಷಿಯಾಗುತ್ತಿವೆ. ಆರ್​ಸಿಬಿ, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್​, ಕೆಕೆಆರ್​, ಲಖನೌ ಸೂಪರ್ ಜೈಂಟ್ಸ್​ ತಂಡಗಳು ಅದ್ಭುತ ಆಲ್​ರೌಂಡ್​ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್​ ಪ್ರೇಮಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಆಯಾ ತಂಡದ ಬೌಲರ್​ಗಳು ಮತ್ತು ಬ್ಯಾಟರ್​ಗಳು ಒಬ್ಬರಿಗಿಂತ ಮತ್ತೊಬ್ಬರು ಅತ್ಯುತ್ತಮ ಕೊಡುಗೆ ನೀಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಪ್ರಸ್ತುತ ಯಾವ ತಂಡಗಳು ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ 4 ಸ್ಥಾನದಲ್ಲಿವೆ, ಯಾರ ಬಳಿ ಆರೆಂಜ್​ ಮತ್ತು ಪರ್ಪಲ್​ ಕ್ಯಾಪ್​ ಇದೆ? ಎಂಬುದರ ವಿವರ ಹೀಗಿದೆ.

ಟಾಪ್​ 4 ತಂಡಗಳು (ಪ್ರಸ್ತುತ ವರದಿ)

1. ಗುಜರಾತ್ ಟೈಟನ್ಸ್​ - (ಪಂದ್ಯ 6, ಗೆಲುವು 4, 2 ಸೋಲು) 8 ಅಂಕ

2. ಡೆಲ್ಲಿ ಕ್ಯಾಪಿಟಲ್ಸ್​- ( ಪಂದ್ಯ 5, ಗೆಲುವು 4, ಸೋಲು 1) 8 ಅಂಕ

3. ಆರ್​ಸಿಬಿ- (ಪಂದ್ಯ 6, ಗೆಲುವು 4, 2 ಸೋಲು) 8 ಅಂಕ

4. ಪಂಜಾಬ್ ಕಿಂಗ್ಸ್​- (ಪಂದ್ಯ 6, ಗೆಲುವು 4, 2 ಸೋಲು) ಅಂಕ

ಅತ್ಯಧಿಕ ರನ್​ ಗಳಿಸಿದ ಬ್ಯಾಟರ್​ (ಆರೆಂಜ್​ ಕ್ಯಾಪ್​)

1. ನಿಕೋಲಸ್​ ಪೂರನ್​ (ಎಲ್​ಎಸ್​ಜಿ)- 357 ರನ್​, 7 ಪಂದ್ಯ

ಅತ್ಯಧಿಕ ವಿಕೆಟ್​ ಪಡೆದ ಬೌಲರ್​ (ಪರ್ಪಲ್​ ಕ್ಯಾಪ್​)

1. ನೂರ್ ಅಹ್ಮದ್​ (ಸಿಎಸ್​ಕೆ)- 12 ವಿಕೆಟ್​, 7 ಪಂದ್ಯ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net