ಮಹಾರಾಷ್ಟ್ರ: ಈಗ ಎಲ್ಲೆಡೆ ಐಪಿಎಲ್ ಕ್ರೇಜ್ ನಡೆಯುತ್ತಿದೆ. ತಮ್ಮ ನೆಚ್ಚಿನ ತಂಡಗಳ ಪರವಾಗಿ ಕ್ರಿಕೆಟ್ ಫ್ಯಾನ್ಸ್ ಏನು ಬೇಕಾದ್ರೂ ಮಾಡೋಕೆ ತಯಾರಿರ್ತಾರೆ ಅನ್ನೋದಕ್ಕೆ ಮಾರ್ಚ್ 27 ಬುಧವಾರ ನಡೆದ ಪಂದ್ಯದ ವೇ ಳೆ ನಡೆದ ಜಗಳ ಸಾಕ್ಷಿಯಾಗಿದೆ.
ಐಪಿಎಲ್ 2024 ರಲ್ಲಿ ನೋಡುವ ಸಂದರ್ಭದಲ್ಲಿ ಉಭಯ ತಂಡಗಳ ಅಭಿಮಾನಿಗಳ ನಡುವೆ ಜಗಳ ತಾರಕ್ಕೇರಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದ ಹನ್ಮಂತವಾಡಿ ವ್ಯಾಪ್ತಿಯಲ್ಲಿ ನಡೆದಿದೆ. 63 ವರ್ಷದ ಬಂಡ್ಪಂತ್ ಮೃತಪಟ್ಟಿರುವ ದುರ್ದೈವಿ.
ಮಾರ್ಚ್ 27 ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ವೇಳೆ ಈ ದಾರುಣ ಘಟನೆ ನಡೆದಿದೆ.
ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯವನ್ನು ಈ ಮೂವರು ವೀಕ್ಷಿಸುತ್ತಿದ್ದರು. ಈ ವೇಳೆ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಮುಂಬೈ ಇಂಡಿಯನ್ಸ್ ಆಟಗಾರ ರೋಹಿತ್ ಶರ್ಮಾ ಔಟಾದರು. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಯೊಬ್ಬರು ಸಂಭ್ರಮಿಸಿದ್ದಾನೆ.
ಇದನ್ನು ನೋಡಿ ಬೇಸರಗೊಂಡ ಬಲವಂತ್ ಹಾಗೂ ಸಾಗರ್ ಸಿಎಸ್ಕ್ ಅಭಿಮಾನಿ ಬಂಡ್ಪಂತ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಎರಡು ಗುಂಪುಗಳ ನಡುವೆ ಜಗಳ ಶುರುವಾಗಿದೆ. ಬಂಡ್ಪಂತ್ ಮೇಲೆ ಇಬ್ಬರು ಹಲಗೆ ಮತ್ತು ಕೋಲಿನಿಂದ ತೀವ್ರ ಹಲ್ಲೆ ಮಾಡಿದ್ದಾರೆ. ಇದರಿಂದ ಬಂಡ್ಪಂತ್ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 31 ರಂದು ಅವರು ಸಾವನ್ನಪ್ಪಿದರು.
ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಹೆಚ್ಚಿನ ತನಿಖೆಗಾಗಿ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಕೋರ್ಟ್ ಆದೇಶಿಸಿದೆ. 20 ಓವರ್‌ಗಳಲ್ಲಿ 3 ವಿಕೆಟ್‌ಗೆ 277 ರನ್ ಗಳಿಸಿದ ನಂತರ ಎಸ್ಆರ್ಎಚ್ ಮುಂಬೈ ತಂಡವನ್ನು 31 ರನ್‌ಗಳಿಂದ ಸೋಲಿಸುವುದರೊಂದಿಗೆ ಪಂದ್ಯವು ಹೆಚ್ಚು ಸ್ಕೋರಿಂಗ್ ಆಗಿ ಹೊರಹೊಮ್ಮಿತು.