More

    ಕಾಂಗ್ರೆಸ್ ಪಕ್ಷಕ್ಕೆ 3567 ಕೋಟಿ ರೂ ಪಾವತಿಸಲು ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

    ನವದೆಹಲಿ: ಕಾಂಗ್ರೆಸ್​ಗೆ ಆದಾಯ ತೆರಿಗೆ ಇಲಾಖೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ತೆರಿಗೆ ಇಲಾಖೆಯು 3567 ಕೋಟಿ ರೂ.ಪಾವತಿಸುವಂತೆ ಹೊಸದಾಗಿ ನೋಟಿಸ್​ ನೀಡಿದೆ ಎಂದು ಭಾನುವಾರ ಕಾಂಗ್ರೆಸ್​ ತಿಳಿಸಿದೆ.

    ಇದನ್ನೂ ಓದಿ: ಅಥಿಯಾ ಶೆಟ್ಟಿ ಪ್ರೆಗ್ನೆನ್ಸಿ ಬಗ್ಗೆ ಸುಳಿವು ಕೊಟ್ಟ ಸುನೀಲ್‌ ಶೆಟ್ಟಿ!: ರಾಹುಲ್​ ತಂದೆ ಆಗಲಿದ್ದಾರೆ?

    2014-15 ರಿಂದ 2016-17ರವರೆಗಿನ ಆರ್ಥಿಕ ವರ್ಷಗಳಿಗೆ ಸಂಬಂಧಿಸಿದಂತೆ 1,745 ಕೋಟಿ ರೂಪಾಯಿ ತೆರಿಗೆ ಪಾವತಿಗೆ ನೋಟಿಸ್ ಬಂದಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ. ಇದರೊಂದಿಗೆ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷದಿಂದ ಒಟ್ಟು 3,567 ಕೋಟಿ ರೂ. ತೆರಿಗೆ ಪಾವತಿಸುವಂತೆ ಡಿಮ್ಯಾಂಡ್ ನೋಟಿಸ್​ ನೀಡಲಾಗಿದೆ.

    2014-15ನೇ ವರ್ಷ 663 ಕೋಟಿ ರೂ., 2015-16ನೇ ವರ್ಷ 664 ಕೋಟಿ ರೂ., 2016-17ನೇ ವರ್ಷ 417 ಕೋಟಿ ರೂ. ತೆರಿಗೆ ಬಡ್ಡಿ ಹಾಗೂ ದಂಡಕ್ಕೆ ಸಂಬಂಧಿಸಿದಂತೆ ಹೊಸದಾಗಿ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಲಾಗಿದೆ ಎಂದು ಕಾಂಗ್ರೆಸ್​ ಮೂಲಗಳು ತಿಳಿಸಿವೆ.

    ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಕಾಂಗ್ರೆಸ್ ನ ಕೆಲವು ನಾಯಕರಿಂದ ವಶಪಡಿಸಿಕೊಂಡ ಡೈರಿಗಳಲ್ಲಿ ಮಾಡಿದ “ಮೂರನೇ ವ್ಯಕ್ತಿ ನಮೂದು” ಗಳಿಗೂ ತೆರಿಗೆ ವಿಧಿಸಲಾಗಿದೆ ಎನ್ನಲಾಗಿದೆ. ಶುಕ್ರವಾರ ನೀಡಲಾದ ನೋಟಿಸ್ ನಲ್ಲಿ ಸುಮಾರು 1,823 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ಕಾಂಗ್ರೆಸ್ ಪಕ್ಷಕ್ಕೆ ಸೂಚಿಸಲಾಗಿತ್ತು

    ತರಿಗೆ ನೋಟೀಸ್​ಗಳನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿತ್ತು. ಅದರ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ನೋಟೀಸ್ ನೀಡಿದೆ.

    ಅಥಿಯಾ ಶೆಟ್ಟಿ ಪ್ರೆಗ್ನೆನ್ಸಿ ಬಗ್ಗೆ ಸುಳಿವು ಕೊಟ್ಟ ಸುನೀಲ್‌ ಶೆಟ್ಟಿ!: ರಾಹುಲ್​ ತಂದೆ ಆಗಲಿದ್ದಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts