ಕ್ರೀಡೆ

ಐಸಿಸಿ ಟಿ-ಟ್ವೆಂಟಿ ರ್ಯಾಂಕಿಂಗ್: ಅಗ್ರ 10ರೊಳಗೆ ಸ್ಥಾನ ಉಳಿಸಿಕೊಂಡ ಕೊಹ್ಲಿ, ರಾಹುಲ್

ದುಬೈ: ಇತ್ತೀಚೆಗೆ ಬಿಡುಗಡೆಯಾದ ಐಸಿಸಿ ಟಿ-20 ಬ್ಯಾಟ್ಸ್​​ಮನ್​ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬ್ಯಾಟ್ಸ್​​ಮನ್ ಕೆ.ಎಲ್​. ರಾಹುಲ್ ಅಗ್ರ ಹತ್ತರೊಳಗೆ ಮುಂದುವರೆದಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಭಾರತ-ಶ್ರೀಲಂಕಾ ನಡುವಿನ ಟಿ-ಟ್ವೆಂಟಿ ಸರಣಿಯಲ್ಲಿ ಇಬ್ಬರೂ ಆಡದಿದ್ದರು, ರ್ಯಾಂಕಿಂಗ್ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಬೌಲರ್​​ಗಳ ವಿಭಾಗದಲ್ಲಿ ಭಾರತ ತಂಡದ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ 16ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಇವರು ಲಂಕಾ ವಿರುದ್ದ ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ 4/22 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿಗೆ ಸಹಕಾರಿಯಾಗಿದ್ದರು.

ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ 10 ಸ್ಥಾನ ಬಡ್ತಿ ಪಡೆಯುವ ಮೂಲಕ 21ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಹಂಗಾಮಿ ನಾಯಕ ಶಿಖರ್ ಧವನ್ ಬ್ಯಾಟ್ಸ್​​ಮನ್​​ ವಿಭಾಗದಲ್ಲಿ 29ನೇ ಸ್ಥಾನ ಪಡೆದಿದ್ದಾರೆ. (ಏಜೆನ್ಸೀಸ್)