More

    ವರುಣಾರ್ಭಟಕ್ಕೆ ‘ಮಹಾರಾಷ್ಟ್ರ’ ತತ್ತರ: 209 ಸಾವು, ಎಂಟು ಜನ ನಾಪತ್ತೆ

    ಮಹಾರಾಷ್ಟ್ರ: ವರುಣನ ಅಬ್ಬರಕ್ಕೆ ಮಹಾರಾಷ್ಟ್ರದಲ್ಲಿ ಸಾವಿನ ಪ್ರಮಾಣ ಏರಿಕೆಯಾಗುತ್ತಿದ್ದು, ಇದುವರೆಗೂ 209 ಮಂದಿ ಸಾವನ್ನಪ್ಪಿದ್ದು, ಎಂಟು ಜನ ನಾಪತ್ತೆಯಾಗಿದ್ದಾರೆ.

    ಇದನ್ನೂ ಓದಿ: ಮಹಾ ಮಳೆಗೆ 130 ಮಂದಿ ಬಲಿ: ಮಹಾರಾಷ್ಟ್ರದ ರಾಯಗಢ, ರತ್ನಗಿರಿ ಜಿಲ್ಲೆಯಲ್ಲಿ ಹೆಚ್ಚು ಅನಾಹುತ, ಹೆಲಿಕಾಪ್ಟರ್ ಮೂಲಕ ಹಲವರ ರಕ್ಷಣೆ

    ಕಳೆದ ಹಲವು ದಿನಗಳಿಂದ ಮಹಾರಾಷ್ಟ್ರ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಭೀಕರ ಪ್ರವಾಹ ಉಂಟಾಗಿದೆ. ವಸಿಸ್ತಿ ನದಿ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು, 43 ರಸ್ತೆಗಳು ಹಲವು ಸೇತುವೆಗಳಿಗೆ ಹಾನಿಯಾಗಿದೆ.

    4,34,185 ಜನರು ಪ್ರವಾಹ ಪೀಡಿತರಾಗಿದ್ದು, ಥಾಣೆ, ಕೊಲ್ಹಾಪುರ, ಸಾಂಗ್ಲಿ, ರತ್ನಗಿರಿ, ಸತಾರ ಜಿಲ್ಲೆಗಳಲ್ಲಿ ರಾಜ್ಯ ವಿಪತ್ತು ನಿರ್ವಹಣ ಮತ್ತು ಎನ್​ಡಿಆರ್​ಎಫ್​​ ತಂಡ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದೆ.

    ಸಾಂಘ್ಲಿಯಲ್ಲಿ ಹೆಚ್ಚಾಗಿ ಮಳೆ ಬಾರದಿದ್ದರೂ ಸತಾರಾ ಜಿಲ್ಲೆಯಲ್ಲಿರುವ ಕೊಯ್ನಾ ಅಣೆಕಟ್ಟಿನಿಂದ ಹೊರಬರುತ್ತಿರುವ ಹೆಚ್ಚಿನ ಪ್ರಮಾಣದ ನೀರಿನಿಂದ ಸಮಸ್ಯೆಯಾಗಿದೆ. ಒಟ್ಟು 308 ತಾತ್ಕಾಲಿಕ ಆಶ್ರಯ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ನದಿಪಾತ್ರಗಳ ಜನರನ್ನೆಲ್ಲ ಇಲ್ಲಿ ಕರೆದುಕೊಂಡು ಬರಲಾಗುತ್ತಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts