More

    ‘ನನ್ನ ಫೋನ್ ಹ್ಯಾಕ್ ಆಗಿದೆ, ಇದು ಎಮೆರ್ಜೆನ್ಸಿಗಿಂತ ಅತಿ ಕೆಟ್ಟ ಪರಿಸ್ಥಿತಿ’

    ನವದೆಹಲಿ: ಪೆಗಾಸಸ್ ಸ್ಪೈವೇರ್​ ಕುರಿತಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಇದು ತುರ್ತು ಪರಿಸ್ಥಿತಿಗಿಂತ ಕೆಟ್ಟ ಪರಿಸ್ಥಿತಿ ಎಂದು ಹೇಳಿದ್ದಾರೆ. ತಮ್ಮ ಫೋನ್ ಕೂಡ ಈ ಸ್ಪೈವೇರ್​ನಿಂದಾಗಿ ಹ್ಯಾಕ್ ಆಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

    ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಅವರು ಈ ಮಾತನ್ನು ಹೇಳಿದ್ದಾರೆ. “ನನ್ನ ಫೋನ್ ಹ್ಯಾಕ್ ಆಗಿದೆ. ಅಭಿಷೇಕ್ ಬ್ಯಾನರ್ಜಿ ಫೋನ್​ನ್ನೂ ಕೂಡ ಈಗಾಗಲೇ ಹ್ಯಾಕ್ ಮಾಡಲಾಗಿದೆ. ಅಲ್ಲದೆ ಪ್ರಶಾಂತ್ ಕಿಶೋರ್ ಅವರ ಫೋನ್​ ಕೂಡ ಪಟ್ಟಿಯಲ್ಲಿದೆ. ನೀವು ಒಂದು ಫೋನ್ ಅನ್ನು ಹ್ಯಾಕ್ ಮಾಡಿದರೆ, ಅದರಿಂದ ಅನೇಕ ಫೋನ್​ಗಳನ್ನು ಹ್ಯಾಕ್ ಮಾಡಬಹುದು. ಇದು ಎಮರ್ಜೆನ್ಸಿಗಿಂತ ಅತಿ ಕೆಟ್ಟ ಪರಿಸ್ಥಿತಿ” ಎಂದು ಅವರು ಹೇಳಿದರು.

    “ಪೆಗಾಸಸ್ ಎಂದರೇನು? ಇದು ಹೈ ಲೋಡೆಡ್ ವೈರಸ್. ಇದರಿಂದಾಗಿ ನಮ್ಮ ಸುರಕ್ಷತೆ ಅಪಾಯದಲ್ಲಿದೆ. ಯಾರಿಗೂ ಸ್ವಾತಂತ್ರ್ಯವಿಲ್ಲ. ಇದು ಜೀವನ, ಆಸ್ತಿ ಮತ್ತು ಸುರಕ್ಷತೆಯ ಗಂಭೀರ ವಿಷಯವಾಗಿದೆ. ಆದರೆ ಕೇಂದ್ರವು ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂದು ಅವರು ದೂರಿದ್ದಾರೆ. (ಏಜೆನ್ಸೀಸ್)

    ‘ಪ್ರಧಾನಿ ಸ್ಥಾನಕ್ಕೆ ಮಮತಾ ಬ್ಯಾನರ್ಜಿಯವರೇ ಬೆಸ್ಟ್!’ ದೀದಿಯನ್ನು ಹಾಡಿ ಹೊಗಳಿದ ಸಂಸದ

    ಗ್ರಾಹಕರಿಗೆ ಶಾಕ್ ಕೊಟ್ಟ ಏರ್​ಟೆಲ್! ಅಗ್ಗದ ರಿಚಾರ್ಜ್ ಪ್ಲಾನ್ ಕಿತ್ತು ಹಾಕಿದ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts