IND vs PAK: ಇಂದು (ಸೆ.14) ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಜಿದ್ದಾಜಿದ್ದಿನ ಸೆಣೆಸಾಟ ನಡೆಸಿದವು.
ಇದನ್ನೂ ಓದಿ: ಪಾಕಿಸ್ತಾನ ಕೋಚ್ ನವಾಜ್ ಅತ್ಯುತ್ತಮ ಸ್ಪಿನ್ನರ್ ಹೇಳಿಕೆಗೆ ಭಾರತದ ಮಾಜಿ ನಾಯಕ ತಿರುಗೇಟು| Former Indian captain
ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ನಿಗದಿತ 20 ಒವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್ಗಳಿಸಿತು. ಇನ್ನೂ 128 ರನ್ಗಳ ಗುರಿ ಬೆನ್ನಟ್ಟಿದ ಭಾರತ 15.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
ಏಷ್ಯಾ ಕಪ್ನ 6ನೇ ಪಂದ್ಯದಲ್ಲಿ ಪಾಕ್ ಕ್ಯಾಪ್ಟನ್ ಸಲ್ಮಾನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೆ, ಇನ್ನೂ ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ ಮೊದಲು ಫೀಲ್ಡಿಂಗ್ಗೆ ಇಳಿಯಿತು. ಮೊದಲು ಬ್ಯಾಟಿಂಗ್ ಮಾಡಲು ಬಂದ ಪಾಕ್ಗೆ ಆರಂಭಿಕ ಆಟಗಾರ ಸೈಮ್ ಅಯೂಬ್ನನ್ನು ಭಾರತದ ಸ್ಟಾರ್ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ಔಟ್ ಮಾಡಿದರು. ನಂತರ ಬಂದ ಫಖರ್ ಜಮಾನ್ (17), ನಾಯಕ ಸಲ್ಮಾನ್ ಅಲಿ ಅಘಾ (3), ಸಾಹಿಬ್‌ಜಾದಾ ಫರ್ಹಾನ್ 40 ರನ್ಗಳಿಸಿದರು. ನಂತರ ಶಾಹೀನ್ ಅಫ್ರಿದಿಯು ಕೊನೆಯ 16 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳ ಸಹಾಯದಿಂದ ಔಟಾಗದೆ 33 ರನ್ ಗಳಿಸಿದರು.
(ಏಜೆನ್ಸೀಸ್)
ಭಾರತದ ಪರವಾಗಿ ಸ್ಪಿನ್ ಜೋಡಿ ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಪಾಕಿಸ್ತಾನವನ್ನು ಕಡಿದರು. ಕುಲದೀಪ್ ಯಾದವ್ 3 ವಿಕೆಟ್ ಅಕ್ಷರ್ ಪಟೇಲ್ 2, ಮತ್ತು ಜಸ್ಪ್ರೀತ್ ಬುಮ್ರಾ 2 ಪ್ರಮುಖ ವಿಕೆಟ್ ಪಡೆದು ಪಾಕ್ ಅಲ್ಪ ಮೊತ್ತಗಳಿಸುವಂತೆ ಮಾಡಿದರು.