IND vs NZ: ಪ್ರಸಕ್ತ ಪಾಕಿಸ್ತಾನ ಮತ್ತು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆತಿಥೇಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ತಂಡಗಳು ಸದ್ಯ ಟ್ರೋಫಿ ಪೈಪೋಟಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಈ ಪೈಕಿ ರೋಹಿತ್ ಶರ್ಮ ನೇತೃತ್ವದ ಟೀಮ್ ಇಂಡಿಯಾ ಎರಡು ಪಂದ್ಯಗಳನ್ನು ಗೆದ್ದು, ಇದೀಗ ಸೆಮಿಫೈನಲ್ನತ್ತ ದಾಪುಗಾಲಿಟ್ಟಿದೆ. ಇದೇ ಭಾನುವಾರ ನ್ಯೂಜಿಲೆಂಡ್ ವಿರುದ್ಧ ಭಾರತ ಮೂರನೇ ಪಂದ್ಯ ಆಡಲು ಸಜ್ಜಾಗಿದೆ.
ಒಂದೆಡೆ ನ್ಯೂಜಿಲೆಂಡ್ ತಂಡವನ್ನೂ ಮಣಿಸಿ, ಸತತ ಮೂರನೇ ಹ್ಯಾಟ್ರಿಕ್ ಗೆಲುವು ದಾಖಲಿಸಲು ಟೀಮ್ ಇಂಡಿಯಾ ಎದುರುನೋಡುತ್ತಿದೆ. ಆದರೆ, ಈ ಪಂದ್ಯದಿಂದ ಕ್ಯಾಪ್ಟನ್ ರೋಹಿತ್ ಶರ್ಮ ಹೊರಗುಳಿಯಲಿದ್ದಾರೆ ಎಂಬ ಸಂಗತಿ ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿಗೆ ದೂಡಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೈದಾನದಿಂದ 26ನೇ ಓವರ್ನಲ್ಲಿ ಹೊರನಡೆದ ರೋಹಿತ್, ಓಡಾಡಲು ಕೊಂಚ ಪರದಾಡಿದರು. ಈ ಕಾರಣಗಳಿಂದ ಅವರನ್ನು ಕಿವೀಸ್ ವಿರುದ್ಧ ಆಡಲಿರುವ ಪಂದ್ಯದಿಂದ ಕೈಬಿಡಲು ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ರೋಹಿತ್ಗೆ ವಿಶ್ರಾಂತಿ ನೀಡುವ ಮೂಲಕ ಕ್ಯಾಪ್ಟನ್ ಜವಾಬ್ದಾರಿಯನ್ನು ಸ್ಫೋಟಕ ಬ್ಯಾಟರ್ ಶುಭಮನ್ ಗಿಲ್ಗೆ ಹಸ್ತಾಂತರಿಸಲು ತಂಡ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ, ರೋಹಿತ್ ಶರ್ಮ ತಂಡದ ಪರ ಆಡೋದಿಲ್ಲ ಎನ್ನಲಾಗಿದೆ. ಇದೇನಾದರೂ ಖಚಿತವಾದರೆ, ಅವರ ಸ್ಥಾನಕ್ಕೆ ಉಪನಾಯಕ ಶುಭಮನ್ ಗಿಲ್ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರ್ಯಾಕ್ಟೀಸ್ ಅವಧಿಯಲ್ಲಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡದ ಕ್ಯಾಪ್ಟನ್, ಇದರ ಬದಲಿಗೆ ಹೆಡ್ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಗೆಲುವಿನ ಬಗ್ಗೆ ಚರ್ಚಿಸಲು ಸಾಕಷ್ಟು ಸಮಯ ಕಳೆದಿದ್ದಾರೆ ಎನ್ನಲಾಗಿದೆ. ಎರಡೂ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದಿರುವುದರಿಂದ ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಪಂದ್ಯವನ್ನು ಭಾರತ ಹೆಚ್ಚಿನ ರನ್ರೇಟ್ನಿಂದ ಗೆಲ್ಲಲೇಬೇಕಾಗಿದೆ.
ಕೆ.ಎಲ್. ರಾಹುಲ್, ಶುಭಮನ್ ಗಿಲ್ (ಕ್ಯಾಪ್ಟನ್), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ರಿಷಬ್ ಪಂತ್/ವಾಷಿಂಗ್ಟನ್ ಸುಂದರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್,(ಏಜೆನ್ಸೀಸ್).