ಕ್ರೀಡೆ

ನಾನು ಕ್ರಿಕೆಟ್​ ಆಡದಿದ್ದರೆ ಇವತ್ತು ಗ್ಯಾಂಗ್​ಸ್ಟಾರ್​ ಆಗಿರುತ್ತಿದ್ದೆ!; ಖ್ಯಾತ​ ಆಟಗಾರನ ಹೇಳಿಕೆ ವೈರಲ್​ | Gangster

Gangster : ನಾನು ಒಂದು ವೇಳೆ ''ಕ್ರಿಕೆಟ್​ ಕ್ರೀಡೆಯನ್ನು ಆಡದಿದ್ದರೆ ಇವತ್ತು ಗ್ಯಾಂಗ್​ಸ್ಟಾರ್​ ಆಗಿರುತ್ತಿದ್ದೆ'' ಎಂದು ಪಾಕಿಸ್ತಾನ ತಂಡದ ಮಾಜಿ ಆಟಗಾರ ಹಾಗೂ ಸ್ಪಿನ್ನರ್​ ಸಾಜಿದ್​ ಖಾನ್​ ಸಂದರ್ಶನವೊಂದರಲ್ಲಿ ಹೇಳಿರುವ ಹೇಳಿಕೆ ಇದೀಗ ವೈರಲ್​​ ಆಗಿದೆ.

ಹೌದು, ಸಾಜಿದ್ ಪಾಕಿಸ್ತಾನದ ಪರ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಸಾಜಿದ್ ಅತ್ಯುತ್ತಮ ಪ್ರದರ್ಶನ ನೀಡುವವರಲ್ಲಿ ಒಬ್ಬರಾಗಿದ್ದು, 12 ಪಂದ್ಯಗಳಲ್ಲಿ 27.28 ರ ಸರಾಸರಿಯಲ್ಲಿ 59 ವಿಕೆಟ್‌ಗಳನ್ನು ಪಡೆದಿದ್ದಾರೆ. ಸಾಜಿದ್​ ತನ್ನ ಮೀಸೆಯ ಶೈಲಿ ಮತ್ತು ವಿಕೆಟ್ ಪಡೆದ ನಂತರ ಮಾಡುವ ಟ್ರೇಡ್‌ಮಾರ್ಕ್ ಆಚರಣೆಗೆ ಹೆಸರುವಾಸಿಯಾಗಿದ್ದಾರೆ. ಅಲ್ಲಿನ ಖಾಸಗಿ ಸುದ್ದಿವಾಹಿನಿ ಜತಗಿನ ಸಂವಾದದಲ್ಲಿ ನಿರೂಪಕ ಕೇಳಿದ ಪ್ರಶ್ನೆಗೆ, ''ಕ್ರಿಕೆಟಿಗನಾಗದಿದ್ದರೆ ನಿಮ್ಮ ವೃತ್ತಿ ಏನು?'' ಎಂದು ಕೇಳಿದರು. ಇದಕ್ಕೆ ಉತ್ತರಿಸಿದ, ಸಾಜಿದ್​ ಆ ಪರಿಸ್ಥಿತಿಯಲ್ಲಿ ''ಗ್ಯಾಂಗ್‌ಸ್ಟರ್ ಆಗುತ್ತಿದ್ದೆ'' ಎಂದು ಉತ್ತರಿಸಿದರು.

ಮುಂದುವರೆದು ಮಾತನಾಡಿದ ಸಾಜಿದ್​ '' ಬಾಬಾರ್​ ಅಜಾಮ್​ ವಿಶ್ವದ ಅತ್ಯುತ್ತಮ ಆಟಗಾರ ಎಂದು ಬಿಂಬಿಸಿದ ಸಾಜಿದ್​, ವಿರಾಟ್​ ಕೊಹ್ಲಿ ಭಾರತದ ಇದುವರೆಗಿನ ಅತ್ಯುತ್ತಮ ಆಟಗಾರ ಎಂದು ಹೊಗಳಿದರು''.

2024ರಲ್ಲಿ ರಾವಲ್ಪಿಂಡಿಯಲ್ಲಿ ನಡೆದ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ನೀವು ಹೆದರಿಸುತ್ತಿದ್ದರಂತೆ? ಕೇಳಿದಾಗ, ''ನಾನು ಯಾರನ್ನೂ ಹೆದರಿಸಲಿಲ್ಲ, ಆದರೆ ನೀವು ಹೀಗೆ ಹೇಳುತ್ತಿರುತ್ತೀರಿ. ದೇವರು ನನಗೆ ಅಂತಹ ನೋಟವನ್ನು ನೀಡಿದ್ದಾನೆ, ನಾನು ನಕ್ಕರೂ ಜನರು ಹೆದರುತ್ತಾರೆ'' ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.(ಏಜೆನ್ಸೀಸ್​)