ಕ್ರೀಡೆ

ಏಕದಿನ ವಿಶ್ವಕಪ್​ಗೆ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಪ್ರಮುಖ ಆಟಗಾರನಿಗೆ ವಿಶ್ರಾಂತಿ

ಸಿಡ್ನಿ: ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಆಡುವ 18 ಸದಸ್ಯರ ತಂಡವನ್ನು ಕ್ರಿಕೆಟ್​ ಆಸ್ಟ್ರೇಲಿಯಾ ಮಂಗಳವಾರ ಪ್ರಕಟಿಸಿದೆ.

ಪ್ಯಾಟ್​​ ಕಮಿನ್ಸ್​ ತಂಡವನ್ನು ಮುನ್ನಡೆಸಲಿದ್ದು, ಪ್ರಮುಖ ಬ್ಯಾಟ್ಸ್​ಮನ್​ ಮಾರ್ಕಸ್​​​ ಲಬುಶೇನ್​ಗೆ ವಿಶ್ರಾಂತಿ ನೀಡಲಾಗಿದೆ. ರಾಷ್ಟ್ರೀಯ ತಂಡದ ಪರ ಆಡದ ಯುವ ಲೆಗ್​ ಸ್ಪಿನ್ನರ್​ ತನ್ವೀರ್​ ಸಂಘ 18 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿರುವುದು ವಿಶೇಷ. ವಿಶ್ವಕಪ್​ ಟೂರ್ನಿ ಆರಂಭವಾಗುವ ಮುನ್ನ ಆಸ್ಟ್ರೇಲಿಯ ತಂಡ ದಕ್ಷಿಣ ಆಫ್ರಿಕಾ ಹಾಗೂ ಭಾರತದ ಎದುರು ಸರಣಿ ಆಡಲಿದೆ.

18 ಸದಸ್ಯರ ತಂಡ

ಪ್ಯಾಟ್ ಕಮ್ಮಿನ್ಸ್ (ಸಿ), ಸೀನ್ ಅಬಾಟ್, ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮೆರೂನ್ ಗ್ರೀನ್, ಆರನ್ ಹಾರ್ಡಿ, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್, ಆಡಮ್ ಝಂಪಾ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರರು.