Rohit Sharma: ಕಟಕ್ನಲ್ಲಿ ಭಾನುವಾರ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನದ ಪಂದ್ಯದಲ್ಲಿ ಭರ್ಜರಿ ಶತಕದ ಮೂಲಕ ಫಾರ್ಮ್ಗೆ ಮರಳಿದ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ್ ಅವರನ್ನು ಬಾಲಿವುಡ್ ದಿಗ್ಗಜ, ನಟ ಅಮಿತಾಬ್ ಬಚ್ಚನ್ ಶ್ಲಾಘಿಸಿದ್ದಾರೆ.
ಇದನ್ನೂ ಓದಿ:ಮದ್ಯದ ಚಟವನ್ನು ನಿಲ್ಲಿಸುವುದು ಹೇಗೆ?; ಸಮಸ್ಯೆ ಪರಿಹಾರಕ್ಕೆ ಈ ಅಭ್ಯಾಸಗಳೇ ಸಾಕು.. ಹೆಲ್ತಿ ಮಾಹಿತಿ | Health Tips
ಹೌದು, ಕಳೆದ ತಿಂಗಳಿದೆ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ರೋಹಿತ್ ನೀಡಿದ ಕಳಪೆ ಪ್ರದರ್ಶನದಿಂದ ಹಿಟ್ಮ್ಯಾನ್ ಭಾರೀ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ, ನಾಯಕ ಸ್ಥಾನ ತೊರೆಯವುದರ ಮತ್ತು ನಿವೃತ್ತಿಯ ಬಗ್ಗೆ ಕೂಡ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಇದರಿಂದ ಬೇಸರದಲ್ಲಿದ್ದ ಹಿಟ್ಮ್ಯಾನ್ ಇದೀಗ ಬ್ಯಾಟ್ ಮೂಲಕವೇ ಟೀಕಕಾರರ ಬಾಯಿ ಮುಚ್ಚಿಸಿದ್ದು, ಭರ್ಜರಿ ಫಾರ್ಮ್ಗೆ ಮರಳಿದ್ದಾರೆ. ಈ ಪಂದ್ಯದ ಕುರಿತು ನಟ ಬಿಗ್ಬಿ ಮಾತನಾಡಿದ್ದು, ರೋಹಿತ್ನನ್ನು ಹಾಡಿಹೊಗಳಿದ್ದಾರೆ.
ನಾನು ನಿಂತಿರುವ ಪಾದಗಳು.. ಅದು ಅವರಿಸಿರುವ ನೆಲ.. ದಿನದ ಕೊನೆಯಲ್ಲಿ ಅದಕ್ಕೆ ಮಸ್ಸಾಜ್ ಮಾಡಿದಾಗ ಇಷ್ಟು ದಿನಗಳಿಂದ ತಪ್ಪಿಸಿಕೊಂಡಿದ್ದ ಅರಿವು ಉಂಟಾಗುತ್ತದೆ ಎಂದು ಆರಂಭದಲ್ಲಿ ಹೇಳಿರುವ ಅವರು..
''ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ಗೆ ನೀಡಿದ ಧೈರ್ಯಶಾಲಿ ಬ್ಯಾಟಿಂಗ್.. ಸರಳವಾಗಿ ಅದ್ಭುತವಾಗಿದೆ.. ಟೀಕೆಗಳನ್ನು ಮೌನಗೊಳಿಸಲು ಉತ್ತಮ ಮಾರ್ಗವೆಂದರೆ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡುವುದು.. ಮತ್ತು ರೋಹಿತ್ ಅದನ್ನೇ ಮಾಡಿದರು" ಎಂದು ನಟ ಬಿಗ್ಬಿ ಹಂಚಿಕೊಂಡಿದ್ದಾರೆ.(ಏಜೆನ್ಸೀಸ್)