ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ (Team India) ಹಾಗೂ ಬಾಂಗ್ಲಾದೇಶ (Bangladesh) ನಡುವಿನ ಟಿ20 ಸರಣಿಯ ಅಂತಿಮ ಪಂದ್ಯ ನಡೆಯುತ್ತಿದ್ದು, ಪ್ರವಾಸಿ ತಂಡದ ಎದುರು ಆತಿಥೇಯರು ಮತ್ತೊಮ್ಮೆ ತಮ್ಮ ಪಾರುಪತ್ಯವನ್ನು ಮುಂದುವರೆಸಿದ್ದಾರೆ. ಆರಂಭಿಕ ಸಂಜು ಸ್ಯಾಮ್ಸನ್ (Sanju Samson) ಹಾಗೂ ಸೂರ್ಯಕುಮಾರ್ ಯಾದವ್ (Suryakumar Yadav) ಸ್ಫೋಟಕ ಬ್ಯಾಟಿಂಗ್ ಫಲವಾಗಿ ಟೀಮ್ ಇಂಡಿಯಾ (Team India) ಬೃಹತ್ ಮೊತ್ತ ಪೇರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸೂರ್ಯಕುಮಾರ್ ಯಾದವ್ ತಂಡಲ್ಲಿ ಒಂದು ಬದಲಾವಣೆ ಮಾಡಿರುವುದಾಗಿ ತಿಳಿಸಿದರು. ವೇಗಿ ಅರ್ಷದೀಪ್ (Harshadeep Singh) ಬದಲಾಗಿ ಸ್ಪಿನ್ನರ್ ರವಿ ಬಿಷ್ಣೋಯಿಗೆ (Ravi Bishnoi) ಸ್ಥಾನ ನೀಡಿರುವುದಾಗಿ ಹೇಳಿದರು. ಆದರೆ, ಈ ಮೊದಲು ಅರ್ಷದೀಪ್ ಬದಲಾಗಿ ಯುವವೇಗಿ ಹರ್ಷಿತ್ ರಾಣಾ (Harshit Rana) ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂದು ಹೇಳಲಾಗಿತ್ತಾದರೂ ಅಂತಿಮವಾಗಿ ಅವರನ್ನು ಆಯ್ಕೆ ಮಾಡಲಾಗಿಲ್ಲ. ಇದೀಗ ಈ ಬಗ್ಗೆ ಕಾರಣ ತಿಳಿದು ಬಂದಿದೆ.
ಇದನ್ನೂ ಓದಿ: Trainee Doctor ಸಾವಿಗೆ ನ್ಯಾಯ ಕೊಡಿಸುವಂತೆ ಸಾಮೂಹಿಕ ರಾಜೀನಾಮೆ; ವೈದ್ಯರಿಗೆ ಮಮತಾ ಸರ್ಕಾರ ಸಖತ್ ಕೌಂಟರ್
ಅಸಲಿಗೆ ಹರ್ಷಿತ್ ರಾಣಾ (Harshit Rana) ತಂಡದಲ್ಲಿ ಸ್ಥಾನ ಪಡೆಯದೆ ಇರಲು ಅನಾರೋಗ್ಯ (Ill Health) ಕಾರಣ ಎಂದು ವರದಿಯಾಗಿದೆ. ಈ ಕಾರಣಕ್ಕಾಗಿಯೇ ವೇಗಿ ಎರಡನೇ ಟಿ20 ಪಂದ್ಯದ (T20 Match) ಬಳಿಕ ತಂಡದೊಂದಿಗೆ ಪ್ರಯಾಣಿಸಿರಲಿಲ್ಲ. ಚಿಕಿತ್ಸೆ ಪಡೆಯಬೇಕಾಗಿದ್ದ ಕಾರಣ ಹರ್ಷಿತ್ ದೆಹಲಿಯಲ್ಲೇ ಉಳಿದುಕೊಂಡರು. ಈ ಕಾರಣಕ್ಕಾಗಿಯೇ ಅವರು ಟಿ20 ಸರಣಿಯ ಅಂತಿಮ ಪಂದ್ಯಕ್ಕೆ ಆಯ್ಕೆಯಾಗಿಲ್ಲ ಎಂದು ಬಿಸಿಸಿಐನ (BCCI) ಉನ್ನತ ಸುದ್ದಿ ಮೂಲಗಳು ತಿಳಿಸಿವೆ.
ಐಪಿಎಲ್ನಲ್ಲಿ (IPL) ತಮ್ಮ ಆಕ್ರಮಣಕಾರಿ ವರ್ತನೆಯಿಂದಲೇ ಹೆಚ್ಚು ಸುದ್ದಿಯಾಗಿದ್ದ ಹರ್ಷಿತ್ ರಾಣಾ (Harshit Rana) ಕಳೆದ ಕೆಲವು ಸರಣಿಗಳಿಗೆ ಟೀಮ್ ಇಂಡಿಯಾದಲ್ಲಿ (Team India) ಸ್ಥಾನ ಪಡೆದಿದ್ದಾರೆ. ಆದರೆ ಅವರಿಗೆ ಇನ್ನೂ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿಲ್ಲ. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಪದಾರ್ಪಣೆ ಮಾಡುವ ಅವಕಾಶವಿತ್ತಾದರೂ ಅನಾರೋಗ್ಯ (Ill Health) ಕಾಡಿದ ಪರಿಣಾಮ ಅವರು ತಂಡದಿಂದ ದೂರು ಉಳಿಯಬೇಕಾಗಿದೆ.