ಕ್ರೀಡೆ

ಆ ದೃಶ್ಯ ವೈರಲ್​ ಆದ ಬಳಿಕ ಸಿರಾಜ್​ ಬಗ್ಗೆ ಕೊಂಡಾಡಿದ ಹ್ಯಾರಿ ಬ್ರೂಕ್​.. | India vs England

India vs England: ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲಂಡ್ ವಿರುದ್ಧ ಭಾರತ 6 ರನ್‌ಗಳಿಂದ ಅದ್ಭುತ ಗೆಲುವು ಸಾಧಿಸಿದೆ. ಈ ಮೂಲಕ ಬರೋಬ್ಬರಿ 77 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಐದು ಪಂದ್ಯಗಳ ಸರಣಿಯ ಅಂತಿಮ ಪಂದ್ಯವನ್ನು ಭಾರತ ಗೆದ್ದಿರುವುದು ಇದೇ ಮೊದಲನೆಯದಾಗಿದೆ.

ಕೊನೆಯ ಟೆಸ್ಟ್ ಪಂದ್ಯದಲ್ಲಿ, ಗಾಯಗೊಂಡ ಕ್ರಿಸ್ ವೋಕ್ಸ್ ಒಂದು ಕೈಯಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದಾಗ, ಈ ಚಿತ್ರ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯಿತು. ಅಲ್ಲದೆ, ಗೆಲುವಿನ ನಂತರ ಮೊಹಮ್ಮದ್ ಸಿರಾಜ್​ ಬ್ಯಾಟರ್​ ಕ್ರಿಸ್ ವೋಕ್ಸ್ ಅವರನ್ನು ತಬ್ಬಿಕೊಂಡು ಕ್ರೀಡಾ ಮನೋಭಾವ ವ್ಯಕ್ತಪಡಿಸಿದರು ಮತ್ತು ಆ ನಂತರ ಈ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಇಂಗ್ಲೆಂಡ್​ ಬ್ಯಾಟರ್​ ಹ್ಯಾರಿ ಬ್ರೂಕ್ ಸಿರಾಜ್​ ಆಟವನ್ನು ಶ್ಲಾಘಿಸಿದರು.

​ಹ್ಯಾರಿ ಬ್ರೂಕ್ ಹೇಳಿದ್ದೇನು? ಪಂದ್ಯದಲ್ಲಿ ಸಿರಾಜ್​ 9 ವಿಕೆಟ್​ ಕಬಳಿಸುವ ಮೂಲಕ ಭಾರತ ಗೆಲುವಿಗೆ ಕಾರಣರಾದರು. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 2-2 ಸಮಬಲ ಸಾಧಿಸಿತು. "ನಾವು ಸುಲಭವಾಗಿ ಗೆಲ್ಲುತ್ತೇವೆ ಎಂದು ನಾನು ಭಾವಿಸಿದ್ದೆ ಆದರೆ ಸಿರಾಜ್ ಬೌಲಿಂಗ್ ಮಾಡಿದ ರೀತಿ, ಅವರು ಈ ಯಶಸ್ಸಿಗೆ ಅರ್ಹರು. ಅವರು ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು ಮತ್ತು ಅದನ್ನು ಮುಗಿಸಿದರು" ಎಂದು ​ಹ್ಯಾರಿ ಬ್ರೂಕ್ ಹೇಳಿದರು.

ಪ್ರಸಿದ್ಧ್​ ಕೃಷ್ಣ ಕೂಡ ಉತ್ತಮ ಬೌಲಿಂಗ್(126 ರನ್​​ಗಳಿಗೆ 4 ವಿಕೆಟ್​)​ ಮಾಡುವ ಮೂಲಕ ಪಂದ್ಯಕ್ಕೆ ಉತ್ತಮ ಬೆಂಬಲ ನೀಡಿದರು. ಅಂತಿಮವಾಗಿ ಇಂಗ್ಲೆಂಡ್ ತಂಡವು 374 ರನ್‌ಗಳ ಗುರಿಯನ್ನು ತಲುಪುವಲ್ಲಿ ವಿಫಲವಾಯಿತು ಮತ್ತು ಭಾರತ ಐದು ಪಂದ್ಯಗಳ ಸರಣಿಯನ್ನು 2-2 ರಲ್ಲಿ ಸಮಬಲಗೊಳಿಸಿತು.(ಏಜೆನ್ಸೀಸ್​)