ಮುಂಬೈ: ಟೀಮ್ ಇಂಡಿಯಾದ ಸ್ಫೋಟಕ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಮೈದಾನಕ್ಕಿಳಿದರೆ ಅಬ್ಬರದ ಬ್ಯಾಟಿಂಗ್ ಮತ್ತು ಉತ್ತಮ ಬೌಲಿಂಗ್ ದಾಳಿಯ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ವೃತ್ತಿ ಜೀವನವನ್ನು ಆನಂದಿಸುತ್ತಿರುವ ಸ್ಟಾರ್ ಕ್ರಿಕೆಟಿಗ ಬಾಳಲ್ಲಿ ವಿಚ್ಛೇದನ ಎಂಬ ಬಿರುಗಾಳಿ, ಸುಖಕರ ದಾಂಪತ್ಯ ಜೀವನಕ್ಕೆ ಅಂತ್ಯವಾಡಿತು. ಮಾಜಿ ಪತ್ನಿ ನಟಾಸಾ ಸ್ಟಾಂಕೋವಿಕ್ ಅವರೊಂದಿಗೆ ಡಿವೋರ್ಸ್ ಪಡೆದ ನಂತರ ಪುತ್ರ ಅಗಸ್ತ್ಯನ (Agastya) ಜತೆ ಹಾರ್ದಿಕ್ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ತಮ್ಮ ಮಗನ ಮಡಿಲಲ್ಲಿ ಮಲಗಿರುವ ಪಾಂಡ್ಯ ಫೋಟೋ ಸದ್ಯ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: ಎರಡೂ ಕೈಗಳಿಲ್ಲದಿದ್ದರೂ ಫುಡ್ ಡೆಲಿವರಿ ಮಾಡುತ್ತಿರುವ ವ್ಯಕ್ತಿ; Viral Video ನೋಡಿ ನಿಮಗೊಂದು ಸಲಾಂ ಎಂದ ನೆಟ್ಟಿಗರು
ಆದಷ್ಟು ಸಮಯ ಮೈದಾನದಲ್ಲಿಯೇ ಕಳೆಯುವ ಹಾರ್ದಿಕ್ ಇದೀಗ ಮಗನೊಟ್ಟಿಗೆ ಖುಷಿ ಕ್ಷಣಗಳನ್ನು ಕಳೆಯುತ್ತಿರುವ ದೃಶ್ಯಗಳು ಅವರ ಅಭಿಮಾನಿಗಳ ಕಣ್ಣು ತುಂಬಿದೆ. ಮಾಜಿ ಪತ್ನಿ ನಟಾಸಾ ಅವರೊಂದಿಗೆ ದಾಂಪತ್ಯ ಜೀವನ ಮುರಿದುಕೊಂಡ ಪಾಂಡ್ಯ, ಅಂದಿನಿಂದಲೂ ಪುತ್ರ ಅಗಸ್ತ್ಯನ ಆರೈಕೆಯನ್ನು ಮಾಡುತ್ತಿದ್ದಾರೆ. ಸದ್ಯ ಈ ಫೋಟೋ ಕುರಿತು ತಮ್ಮ ಜಾಲತಾಣದ ಖಾತೆಯಲ್ಲಿ, ದಣಿದು ಬಂದ ದಿನ ಅವನ ತೊಡೆಯ ಮೇಲೆ ವಿಶ್ರಾಂತಿಸುವುದು ಮನಸ್ಸಿಗೆ ಮುದ ನೀಡುವಂತದ್ದು ಎಂದು ಬರೆದು, ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ನಟಾಸಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನದ ಮುಖೇನ ಬೇರ್ಪಟ್ಟ ಪಾಂಡ್ಯ, ಪುತ್ರನ ಜೀವನದಲ್ಲಿ ಮಹತ್ವದ ಪಾತ್ರ ಬೀರಿದ್ದಾರೆ. ಆಗಾಗ್ಗೆ ಅಗಸ್ತ್ಯನ ಜತೆಗಿರುವ ಮೋಜಿನ ಕ್ಷಣಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಮುಂಬೈನಲ್ಲಿ ಕುಟುಂಬದ ಜತೆ ವಾಸವಿರುವ ಪಾಂಡ್ಯ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುತ್ತಾರೆ,(ಏಜೆನ್ಸೀಸ್).