GT vs MI: ಮೇ.30ರಂದು ನಡೆದ ಐಪಿಎಲ್ ಪ್ಲೇಆಫ್ ಹಂತದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು 20 ರನ್ನಿಂದ ಕ್ವಾಲಿಫೈಯರ್-2 ಪಂದ್ಯದಲ್ಲಿ ಆಡುವ ಅವಕಾಶ ಕಳೆದುಕೊಂಡ ಗುಜರಾತ್ ಟೈಟನ್ಸ್, ಭಾರೀ ಬೇಸರದಿಂದ ಲೀಗ್ನಿಂದ ಹೊರನಡೆದಿದೆ. ಗೆಲ್ಲುವ ಅವಕಾಶವನ್ನು ಕೊನೆ ಕ್ಷಣಗಳಲ್ಲಿ ಬ್ಯಾಟರ್ಗಳ ಬೇಜವಾಬ್ದಾರಿಯಿಂದ ಕಳೆದುಕೊಂಡ ಜಿಟಿ, ಇದೀಗ ತನ್ನ ಐಪಿಎಲ್ ಫೈನಲ್ ಕನಸನ್ನು ಎಲಿಮಿನೇಟರ್ ಸೋಲಿನಿಂದ ಮೊಟಕುಗೊಳಿಸಿದೆ.
ಇದನ್ನೂ ಓದಿ: ಜಲಾವೃತ ರಸ್ತೆಯಲ್ಲಿ ವೀವ್ಸ್ಗಾಗಿ ಯುವತಿಯ ಹುಚ್ಚಾಟ: ವಾಹನ ಸವಾರರಿಗೆ ಕಿರಿಕಿರಿ, ಭಾರೀ ಟೀಕೆ! Social Media Influencer
ಇನ್ನು ನಿರ್ಣಾಯಕ ಪಂದ್ಯದಲ್ಲಿ ಹೀನಾಯವಾಗಿ ಸೋತ ಬಳಿಕ ಮಾತನಾಡಿದ ಜಿಟಿ ಕ್ಯಾಪ್ಟನ್ ಶುಭಮನ್ ಗಿಲ್, "ಫೀಲ್ಡಿಂಗ್‌ನಲ್ಲಿನ ಒಂದಷ್ಟು ವೈಫಲ್ಯದಿಂದಾಗಿ ನಾವು ಸೋತೆವು. ಇದೊಂದು ಅದ್ಭುತ ಪಂದ್ಯವಾಗಿತ್ತು. ನಾವು ಸ್ವಲ್ಪ ಅಂತರದಲ್ಲಿ ಸೋತಿದ್ದೇವೆ. ಗುರಿಯನ್ನು ಬೆನ್ನಟ್ಟಲು ನಮಗೆ ಕೊನೆಯ ಮೂರು ಅಥವಾ ನಾಲ್ಕು ಓವರ್‌ಗಳಲ್ಲಿ ಸಾಧ್ಯವಾಗಲಿಲ್ಲ. ಆದರೆ, ಉತ್ತಮವಾಗಿಯೇ ಆಡಿದ್ದೇವೆ. ಮೂರು ಕ್ಯಾಚ್‌ಗಳನ್ನು ಡ್ರಾಪ್ ಮಾಡಿದೆವು. ಇಂತಹ ಕ್ಯಾಚ್‌ಗಳನ್ನು ಕೈಬಿಟ್ಟಾಗ, ಬೌಲರ್‌ಗಳು ರನ್‌ಗಳನ್ನು ನಿಯಂತ್ರಿಸುವುದು ಬಹಳ ಕಷ್ಟ" ಎಂದರು.
"ಸಾಯಿ ಸುದರ್ಶನ್ ಮತ್ತು ವಾಷಿಂಗ್ಟನ್ ಸುಂದರ್ ಒಳ್ಳೆಯ ಪ್ರದರ್ಶನ ನೀಡಿದರು. ಬ್ಯಾಕ್ ಟು ಬ್ಯಾಕ್ ವಿಕೆಟ್ ಹೋಗಿದ್ದೇ ನಮಗೆ ಸಮಸ್ಯೆಯಾಯಿತು. 229 ರನ್‌ಗಳು ಕಷ್ಟದ ಟಾರ್ಗೆಟ್. ಆದರೂ. ನಾವು ಚೆನ್ನಾಗಿ ಆಡಿದ್ದೇವೆ. 20 ರನ್‌ಗಳಿಂದ ಪಂದ್ಯವನ್ನು ಬಿಟ್ಟುಕೊಟ್ಟಿದ್ದೇವೆ ಅಷ್ಟೇ" ಎಂದು ಗಿಲ್ ಹೇಳಿದ್ದಾರೆ,(ಏಜೆನ್ಸೀಸ್).