ಕ್ರೀಡೆ

ಫ್ರೆಂಚ್ ಓಪನ್ 1 ವಾರ ಮುಂದೂಡಿಕೆ

malli

ಪ್ಯಾರಿಸ್: ಈಗಾಗಲೆ ಮುಂದೂಡಿಕೆಯಾಗಿರುವ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಯನ್ನು ಇನ್ನೊಂದು ವಾರದ ಮಟ್ಟಿಗೆ ಮುಂದೂಡಲಾಗಿದೆ. ಮೂಲ ವೇಳಾಪಟ್ಟಿಯ ಪ್ರಕಾರ ಮೇ-ಜೂನ್​ನಲ್ಲಿ ನಡೆಯಬೇಕಾಗಿದ್ದ ಟೂರ್ನಿಯನ್ನು ಸೆಪ್ಟೆಂಬರ್ 20ರಿಂದ ಅಕ್ಟೋಬರ್ 4ರವರೆಗೆ ಮರುನಿಗದಿ ಗೊಳಿಸಲಾಗಿತ್ತು. ಆದರೆ ಪರಿಷ್ಕೃತ ವೇಳಾಪಟ್ಟಿಯ ಅನ್ವಯ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 11ರವರೆಗೆ ಟೂರ್ನಿ ನಡೆಯಲಿದೆ.

ಕ್ಲೇಕೋರ್ಟ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಸೆಪ್ಟೆಂಬರ್ 21ರಿಂದ 25ರವರೆಗೆ ನಡೆಯಲಿದೆ. ಯುಎಸ್ ಓಪನ್ ಮುಗಿದ ಒಂದು ವಾರದಲ್ಲೇ ಆರಂಭಗೊಳ್ಳಬೇಕಾಗಿದ್ದ ಫ್ರೆಂಚ್ ಓಪನ್ ಪ್ರಧಾನ ಸುತ್ತಿನ ಪಂದ್ಯಗಳು ಈಗ 2 ವಾರಗಳ ನಂತರ ನಡೆಯಲಿವೆ.

ಆಗಸ್ಟ್​ನಲ್ಲಿ ವೃತ್ತಿಪರ ಟೆನಿಸ್ ಶುರು: ಕರೊನಾದಿಂದಾಗಿ ಕಳೆದ ಮಾರ್ಚ್ ನಿಂದಲೂ ಸ್ಥಗಿತಗೊಂಡಿರುವ ವೃತ್ತಿಪರ ಟೆನಿಸ್ ಚಟುವಟಿಕೆಗಳು ಕೊನೆಗೂ ಆಗಸ್ಟ್​ನಲ್ಲಿ ಆರಂಭಗೊಳ್ಳುವುದು ಖಚಿತಗೊಂಡಿದೆ. ಮಹಿಳಾ ಮತ್ತು ಪುರುಷರ ವೃತ್ತಿಪರ ಟೆನಿಸ್ ಟೂರ್ನಿಗಳ ತಾತ್ಕಾಲಿಕ ಕ್ಯಾಲೆಂಡರ್ ಬಿಡುಗಡೆಗೊಂಡಿದೆ.