ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ವಿಶ್ವಕಪ್ ಟೂರ್ನಿಯ ಪಂದ್ತಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನ ತಂಡದ ಎದುರು 8 ವಿಕೆಟ್ಗಳ ಭರ್ಜರಿ ಜಯಗಳಿಸಿದೆ. ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಉಪಯುಕ್ತ ಆಟದಿಂದ ಭಾರತ ತಂಡವು 35 ಓವರ್ಗಳಲ್ಲಿ ಗುರಿಯನ್ನು ತಲುಪಿ ಗೆಲುವಿನ ನಗೆ ಬೀರಿತ್ತು.
ಭಾರತ ಅಫ್ಘಾನಿಸ್ತಾನ ಪಂದ್ಯದ ವೇಳೆ ಮೈದಾನದಲ್ಲಿ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯಾವ ಕಾರಣಕ್ಕೆ ಹೊಡೆದಾಟವಾಯಿತು ಎಂದು ಹಲವರು ಪ್ರಶ್ನಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಪಂದ್ಯ ನಡೆಯುವ ವೇಳೆ ಸ್ಟ್ಯಾಂಡ್ನಲ್ಲಿ ನಿಂತಿರುವ ಕೆಲವು ಅಭಿಮಾನಿಗಳ ನಡುವೆ ಮೊದಲಿಗೆ ವಾಗ್ವಾದ ಶುರುವಾಗುತ್ತದೆ. ಇದಾದ ಕೆಲ ಹೊತ್ತಿನ ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಅಭಿನಾನಿಗಳ ನಡುವೆ ಹೊಡೆದಾಟವಾಗಿದ್ದು, ಯಾವ ಕಾರಣಕ್ಕೆ ಜಗಳವಾಯಿತು ಎಂಬ ಕಾರಣ ಬಹಿರಂಗವಾಗಿಲ್ಲ.
ಟ್ರೆಂಡುಲ್ಕರ್ ಎಂಬ ಪೇಜ್ನಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, 89 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಯಾವ ಕಾರಣಕ್ಕೆ ಹೊದೆಡಾಟವಾಯಿತು ಎಂಬ ವಿಚಾರದ ಕುರಿತು ಹಲವರು ಕಮೆಂಟ್ ಮೂಲಕ ಪ್ರಶ್ನಿಸಿದ್ದಾರೆ.