ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿ ಪ್ರಾರಂಭವಾಗಿ ಕೇವಲ 9 ದಿನಗಳಷ್ಟೇ ಕಳೆದಿದ್ದು, ಪ್ರತಿ ಪಂದ್ಯದಲ್ಲೂ 10 ತಂಡಗಳು ಕೊಡುತ್ತಿರುವ ಭರ್ಜರಿ ಪೈಪೋಟಿ ಕಂಡು ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಮೊದಲ ಮ್ಯಾಚ್ನಿಂದ ಇಂದಿನ ಮ್ಯಾಚ್ನವರೆಗೆ ಎಲ್ಲಾ ತಂಡಗಳು ಕಡೆಯ ಓವರ್ವರೆಗೂ ಪಂದ್ಯವನ್ನು ತೆಗೆದುಕೊಂಡು ಹೋಗುತ್ತಿರುವುದು ವೀಕ್ಷಕರಲ್ಲಿ ಮತ್ತಷ್ಟು ಕೂತೂಹಲ ಹೆಚ್ಚಿಸಿದೆ.
ಅಂದಹಾಗೆ, ಈ ಸೀಸನ್ ಪ್ರಾರಂಭದ ಕಿಕ್ಸ್ಟಾರ್ಟ್ ಪಂದ್ಯದಲ್ಲೇ ಸೋಲಿನಿಂದ ಪಂದ್ಯ ಆರಂಭಿಸಿದ ಆರ್ಸಿಬಿ, ಎಂದಿನಂತೆ ತಮ್ಮ ಅಭಿಮಾನಿಗಳನ್ನು ಬೇಸರಕ್ಕೆ ದೂಡಿತು. ತದನಂತರದಲ್ಲಿ ಎರಡನೇ ಪಂದ್ಯ ಗೆದ್ದು, ಮೂರನೇ ಮ್ಯಾಚ್ನಲ್ಲಿ ಹೀನಾಯ ಸೋಲು ಅನುಭವಿಸಿತು. ಇದು ಆರ್ಸಿಬಿ ಅಭಿಮಾನಿಗಳನ್ನು ತೀವ್ರ ಕೆರಳಿಸಿತು. ಅಸಲಿಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ಪಂದ್ಯ ಸಿಕ್ಕಾಪಟ್ಟೆ ರೋಚಕವಾಗಿ ಮೂಡಿಬಂದಿದ್ದೇ ಆದರೂ ಗೆಲುವು ಕೆಕೆಆರ್ಗೆ ಹೋಗಿದ್ದು ಆರ್ಸಿಬಿ ಅಭಿಮಾನಿ ಬಳಗಕ್ಕೆ ತೀವ್ರ ಘಾಸಿ ಮಾಡಿತು.
ಇದಕ್ಕೆ ಕಾರಣ ಆರ್ಸಿಬಿ ಫ್ರಾಂಚೈಸಿ ಮಾಡುತ್ತಿರುವ ಎಡವಟ್ಟು! ಕೊಹ್ಲಿ ಪಡೆ ಕೊಟ್ಟ 182 ರನ್ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಬ್ಯಾಟ್ಸ್ಮನ್ಗಳನ್ನು ತಡೆಯುವಲ್ಲಿ ಆರ್ಸಿಬಿ ವೇಗಿಗಳು ವಿಫಲರಾದರು. ಇದು ಕ್ರೀಡಾಂಗಣದಲ್ಲಿ ನೆರೆದಿದ್ದ ಫ್ಯಾನ್ಸ್ಗಳ ನಿರೀಕ್ಷೆಯನ್ನು ಮೊದಲನೇ ಹಂತದಲ್ಲೇ ಕುಸಿಯುವಂತೆ ಮಾಡಿತು. 10 ಓವರ್ ಬಳಿಕವೂ ಶ್ರೇಯಸ್ ಅಯ್ಯರ್ ಪಡೆಯ ಬ್ಯಾಟ್ಸ್ಮನ್ಗಳ ವಿಕೆಟ್ ತೆಗೆಯಲು ವೇಗಿಗಳು ಹರಸಾಹಸ ಪಟ್ಟರು. ಇದೇ ಕೆಕೆಆರ್ ಗೆಲುವಿಗೆ ಪ್ರಮುಖ ಕಾರಣವಾಯಿತು.
ತಮ್ಮ ನೆಚ್ಚಿನ ತಂಡ ಸೋಲು ಅನುಭವಿಸಿದ್ದು ಆರ್ಸಿಬಿ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದಷ್ಟು ನೋವುಂಟುಮಾಡಿತು. ಇದನ್ನು ಪ್ರಶ್ನಿಸಿದ ಪ್ರತಿಯೊಬ್ಬ ಅಭಿಮಾನಿಯೂ, ಇದು ಆರ್ಸಿಬಿ ಆಟಗಾರರ ತಪ್ಪಲ್ಲ, ಬದಲಿಗೆ ಫ್ರಾಂಚೈಸಿಯ ತಪ್ಪು. ಬ್ಯಾಟಿಂಗ್ ಲೈನ್ನಲ್ಲಿ ವಿರಾಟ್ ಕೊಹ್ಲಿ ಮಾತ್ರ ಅಬ್ಬರಿಸಿದರೆ ಸಾಲದು, ತಂಡದ ಉಳಿದವರು ಕೂಡ ಸಾಥ್ ಕೊಡಬೇಕು. ಬ್ಯಾಟಿಂಗ್ ಲೈನ್ ಒಪ್ಪಬಹುದು. ಆದರೆ, ಬೌಲಿಂಗ್ ವಿಭಾಗದಲ್ಲಿ ಏಕೆ ಇದೇ ಸಮಸ್ಯೆ? ಫ್ರಾಂಚೈಸಿ ಅವರು ಯಾಕಿಂತ ತಪ್ಪನ್ನು ಪದೇ ಪದೇ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗ್ತಿಲ್ಲ. ನಮ್ಮಲ್ಲಿ ಉತ್ತಮ ಬೌಲಿಂಗ್ ಲೈನ್ ಇಲ್ಲ ಎಂದು ಅತೀವ ಬೇಸರ ಹೊರಹಾಕಿದ್ದಾರೆ.