More

    ‘ಶ್ರೀರಾಮನ ಸಂದೇಶ ಅರಿಯಿರಿ’ ಪ್ರಧಾನಿ ಮೋದಿಯವರಿಗೆ ಪ್ರಿಯಾಂಕಾ ಗಾಂಧಿ ಸಲಹೆ..

    ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಸಮಾನತೆ ಸಾಧಿಸುವಂತೆ ಚುನಾವಣಾ ಆಯೋಗವನ್ನು ಪ್ರತಿಪಕ್ಷ ‘INDIA’ ಬಣ ಭಾನುವಾರ ಒತ್ತಾಯಿಸಿದೆ.

    ಬಿಜೆಪಿ ಪ್ರಜಾಸತ್ತಾತ್ಮಕ ಅಡೆ ತಡೆಗಳನ್ನು ಸೃಷ್ಟಿಸುತ್ತಿದ್ದರೂ, ದೇಶದ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಡಲು ಮೈತ್ರಿಕೂಟ ಬದ್ಧವಾಗಿದೆ ಎಂದು ಪ್ರತಿಪಾದಿಸಿದೆ.

    ಇದನ್ನೂ ಓದಿ: ‘ಸಿಎಂ ಮೋಸ ಮಾಡಿದ್ದಾರೆ, ನ್ಯಾಯಕ್ಕಾಗಿ ಹೋರಾಟ ನಡೆಸ್ತೇನೆ’: ಕೇರಳದಲ್ಲಿ ರ‍್ಯಾಗಿಂಗ್​ಗೆ ಬಲಿಯಾದ ವಿದ್ಯಾರ್ಥಿ ತಂದೆ ಎಚ್ಚರಿಕೆ…

    ಇಲ್ಲಿನ ರಾಮಲೀಲಾ ಮೈದಾನದಲ್ಲಿ ನಡೆದ ಲೋಕತಂತ್ರ ಬಚಾವೋ ರ‍್ಯಾಲಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಪಕ್ಷಗಳ ಒಕ್ಕೂಟ ‘INDIA’ ದ ಬೇಡಿಕೆಗಳನ್ನು ಓದಿದರು. ಲೋಕಸಭೆ ಚುನಾವಣೆಯಲ್ಲಿ ಎಲ್ಲ ಪಕ್ಷಗಳನ್ನೂ ಸಮನಾಗಿ ಕಾಣಬೇಕು ಎಂದು ಅವರು ಹೇಳಿದರು.

    ಚುನಾವಣೆಯ ಮೇಲೆ ದುಷ್ಪರಿಣಾಮ ಬೀರಲು ವಿರೋಧ ಪಕ್ಷಗಳ ವಿರುದ್ಧ ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಚುನಾವಣಾ ಆಯೋಗ ತಡೆಯಬೇಕು, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ನಾಯಕಿ ಒತ್ತಾಯಿಸಿದ್ದಾರೆ.

    ಚುನಾವಣಾ ಬಾಂಡ್‌ಗಳ ಯೋಜನೆಯ ಮೂಲಕ ಬಿಜೆಪಿಯ “ಸುಲಿಗೆ” ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ಎಸ್‌ಐಟಿಯನ್ನು ಸ್ಥಾಪಿಸಬೇಕು ಎಂದು ಪ್ರತಿಪಕ್ಷದ ಮೈತ್ರಿಕೂಟವು ಒತ್ತಾಯಿಸಿದೆ.

    ಕಳೆದ ತಿಂಗಳು, ಸುಪ್ರೀಂ ಕೋರ್ಟ್ ರಾಜಕೀಯ ರಾಜಕೀಯ ನಿಧಿಗಾಗಿ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದುಗೊಳಿಸಿತು, ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕು ಮತ್ತು ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.

    ರಾಮನ ಸಂದೇಶ ಅರಿಯಿರಿ: ನಾನು ಬಾಲ್ಯದಿಂದಲೂ ರಾಮಲೀಲಾ ಮೈದಾನಕ್ಕೆ ಬರುತ್ತಿದ್ದೇನೆ. ಪ್ರತಿ ವರ್ಷ ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಲಾಗುತ್ತದೆ. ನಾನು ಚಿಕ್ಕವಳಿದ್ದಾಗ, ಅಜ್ಜಿ ಇಂದಿರಾ ಜೀ ಅವರೊಂದಿಗೆ ಇಲ್ಲಿಗೆ ಬರುತ್ತಿದ್ದೆ. ಆಗ ಅವರು ನನಗೆ ರಾಮಾಯಣವವನ್ನು ಹೇಳುತ್ತಿದ್ದರು. ಇಂದು ಅಧಿಕಾರದಲ್ಲಿರುವವರು ತಮ್ಮನ್ನು ತಾವು ರಾಮಭಕ್ತರು ಎಂದು ಕರೆದುಕೊಳ್ಳುತ್ತಾರೆ. ನಾನು ಅವರಿಗೆ ರಾಮನ ಸಂದೇಶ ನೆನಪಿಸಲು ಬಯಸುತ್ತೇನೆ. ರಾಮನು ಸತ್ಯಕ್ಕಾಗಿ ಹೋರಾಡಿದಾಗ, ಅವನ ಬಳಿ ಶಕ್ತಿ, ಸಂಪನ್ಮೂಲ ಅಥವಾ ರಥವೂ ಇರಲಿಲ್ಲ. ರಾವಣನಿಗೆ ರಥಗಳು, ಸಂಪನ್ಮೂಲಗಳು, ಸೈನ್ಯ ಮತ್ತು ಚಿನ್ನವಿತ್ತು. ಆದರೆ ರಾಮನಿಗೆ ಸತ್ಯ, ಭರವಸೆ, ನಂಬಿಕೆ, ಪ್ರೀತಿ, ದಯೆ, ನಮ್ರತೆ, ತಾಳ್ಮೆ, ಧೈರ್ಯ ಮತ್ತು ಸತ್ಯದ ಅರಿವಿತ್ತು. ಅಧಿಕಾರವು ಶಾಶ್ವತವಲ್ಲ ಮತ್ತು ದುರಹಂಕಾರವು ಛಿದ್ರವಾಗುತ್ತದೆ ಎಂಬುದು ಶ್ರೀರಾಮನ ಜೀವನದ ಸಂದೇಶ ಎಂದು ನಾನು ಅಧಿಕಾರದಲ್ಲಿರುವವರಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಹೇಳಲು ಬಯಸುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

    ಪ್ರಿಯಾಂಕಾ ಚೋಪ್ರಾ ಪತಿ, ಪುತ್ರಿ ಜೊತೆ ಕಾಣಿಸಿಕೊಂಡ ವೀಡಿಯೋ ವೈರಲ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts