ಕ್ರೀಡೆ

ಸತ್ಯವೇನೆಂದರೇ ನಾನು... ರಿಷಭ್​ ಪಂತ್​ ಜೊತೆಗಿನ ಅಫೇರ್​ ಕುರಿತು ಮೌನ ಮುರಿದ Urvashi Rautela

ಮುಂಬೈ: ಬಾಲಿವುಡ್​ ನಟಿ ಊರ್ವಶಿ ರೌಟೇಲಾ (Urvashi Rautela) ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಖಾಸಗಿ ವಿಡಿಯೋ ವಿಚಾರವಾಗಿ ಸದ್ದು ಮಾಡಿದ್ದ ನಟಿ ಆ ಬಳಿಕ ತಣ್ಣಗಾಗಿದ್ದರು. ಇದಲ್ಲದೆ ಖ್ಯಾತನಾಮರೊಂದಿಗೆ ಅಫೇರ್​ ವಿಚಾರವಾಗಿಯೂ ನಟಿ ಹೆಚ್ಚು ಸದ್ದು ಮಾಡುತ್ತಿದ್ದು, ಊರ್ವಶಿ ಹಾಗೂ ಪಂತ್​ (Rishabh Pant) ನಡುವಿನ ಲವ್‌ ರೂಮರ್ಸ್‌ ಬಹಳ ದಿನಗಳಿಂದಲೂ ಸದ್ದು ಮಾಡುತ್ತಿದೆ.. ಅವರಿಬ್ಬರೂ ತುಂಬಾ ಸಲ ಅಂತದ್ದೇನು ಇಲ್ಲ ಎಂದರೂ ಅವರಿಬ್ಬರ ಬಗೆಗಿನ ಚರ್ಚೆ ಮಾತ್ರ ನಿಂತಿಲ್ಲ.. ಆದರೆ ಇದೀಗ ಕೊನೆಗೂ ಊರ್ವಶಿ ರೌಟೇಲಾ ಈ ಸಂಬಂಧದ ಸುದ್ದಿಯ ಬಗ್ಗೆ ಮೌನ ಮುರಿದಿದ್ದಾರೆ.  

ಇತ್ತೀಚಿನ ವರ್ಷಗಳಲ್ಲಿ ಅವರ ಸಂಬಂಧದ ವದಂತಿಗಳು ವೈರಲ್ ಆಗುತ್ತಿವೆ, ಆದರೆ ಅವರಲ್ಲಿ ಯಾರೂ ಕೂಡ ಅಧಿಕೃತವಾಗಿ ಸಂಬಂಧದ ಬಗ್ಗೆ ಮಾತನಾಡಿರಲಿಲ್ಲ. ಆದರೆ, ನಟಿ ರಿಷಭ್​ ಪಂತ್ (Rishabh Pant)​ ಅವರ ಫೋಟೋ ಹಾಗೂ ವಿಡಿಯೋಗಳಿಗೆ ಕಮೆಂಟ್​ ಮಾಡುವ ಮೂಲಕ ಮತ್ತಷ್ಟು ಪುಷ್ಠಿ ನೀಡಿದರು. ಆದರೆ, ಇದೀಗ ನಟಿ ಈ ಎಲ್ಲಾ ವಿಚಾರಗಳಿಗೂ ತೆರೆ ಎಳೆಯುವ ಪ್ರಯತ್ನ ಮಾಡಿದ್ದು, ತಮ್ಮ ಹಾಗೂ ರಿಷಭ್​ ನಡುವಿನ ಸಂಬಂಧದ ಕುರಿತು ಮಾತನಾಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ನಟಿ, ನನ್ನನ್ನು ರಿಷಭ್​ ಪಂತ್​ (ಮಾತನಾಡುವ ವೇಳೆ ಆರ್​ಪಿ ಎಂದು ಉಲ್ಲೇಖಿಸಿದ್ದಾರೆ) ಜೊತೆಗಿನ ಲವ್ ಅಫೇರ್​ ವದಂತಿಗಳಿಗೆ ಸಂಬಂಧಿಸಿದಂತೆ, ಈ ಮೀಮ್‌ಗಳು ಮತ್ತು ಸುದ್ದಿಗಳು  ಆಧಾರರಹಿತವೆಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನನ್ನ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಇರಿಸಿಕೊಳ್ಳಲು ನಾನು ಬಯಸುತ್ತೇನೆ. ಸತ್ಯವೇನೆಂದರೇ ನಾನು ನನ್ನ ವೃತ್ತಿಜೀವನದ ಮೇಲೆ ಗಮನಸಿದ್ದೇನೆ.

ಚಾಲೆಂಜಿಂಗ್​ ದರ್ಶನ್​ ನಟನೆಯ ಐರಾವತ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ಊರ್ವಶಿ ರೌಟೇಲಾ ಬಾಲಿವುಡ್​ ಸೇರಿದಂತೆ ಸೌತ್​ ಸಿನಿ ಇಂಡಸ್ಟ್ರಿಯಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಇತ್ತ ಊರ್ವಶಿ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಕೆಲವರು ನಟಿಯನ್ನು ಟ್ರೋಲ್ ಮಾಡುತ್ತಿದ್ದರೆ, ಕೆಲವರು ರಿಷಬ್ ಪಂತ್ ಒಳ್ಳೆಯ ವ್ಯಕ್ತಿ ಎಂದು ಹೇಳುತ್ತಾರೆ. ಆದರೆ, ಇದಕ್ಕೆ ರಿಷಭ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ.