MS Dhoni: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಶ್ರೇಷ್ಠ ಆಟಗಾರ, ಕ್ರಿಕೆಟ್ ದಂತಕಥೆ ಮಹೇಂದ್ರ ಸಿಂಗ್ ಧೋನಿ ಅವರಿಗೆ 'ಐಸಿಸಿ ಹಾಫ್ ಆಫ್ ಫೇಮ್' ಗೌರವ ಒಲಿದುಬಂದಿದೆ. ಈ ವಿಷಯ ತಿಳಿದ ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಗಣ್ಯರು ಧೋನಿ ಅವರಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.
ಇದನ್ನೂ ಓದಿ: ವಜ್ರದ ಉಂಗುರ, ಚಿನ್ನದ ಸರ… ಪುತ್ರನ ನೆನೆದು ತಾಯಿ ಕಣ್ಣೀರು! ಬಗೆದಷ್ಟೂ ಬಯಲಾಗ್ತಿದೆ ಸೋನಮ್ ಕರಾಳತೆ | Indore Couple
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಈ ಬಾರಿ ಧೋನಿ ಅವರಿಗೆ ಈ ಗೌರವ ನೀಡಿದೆ. ಐಸಿಸಿ ಘೋಷಿಸಿದ 'ಹಾಲ್ ಆಫ್ ಫೇಮ್' ಪಟ್ಟಿಯಲ್ಲಿ ಧೋನಿಗೆ ಸ್ಥಾನ ನೀಡಲಾಗಿದ್ದು, ಅವರೊಂದಿಗೆ ಇತರೆ ದೇಶದ 6 ಕ್ರಿಕೆಟಿಗರಿಗೂ ಸ್ಥಾನ ನೀಡಿ ಗೌರವಿಸಲಾಗಿದೆ. ಐಸಿಸಿ ಗ್ರೇಮ್ ಸ್ಮಿತ್ (ದ. ಆಫ್ರಿಕಾ), ಹಾಶಿಮ್ ಆಮ್ಲಾ (ದ. ಆಫ್ರಿಕಾ), ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ), ಡೇನಿಯಲ್ ವೆಟ್ಟೋರಿ (ನ್ಯೂಜಿಲೆಂಡ್) ಮತ್ತು ಮಹಿಳಾ ಕ್ರಿಕೆಟಿಗರಾದ ಸಾರಾ ಟೇಲರ್ (ಇಂಗ್ಲೆಂಡ್) ಮತ್ತು ಸನಾ ಮಿರ್ (ಪಾಕಿಸ್ತಾನ) ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಹಾಗೂ ಶ್ರೇಷ್ಠ ನಾಯಕ ಎಂದು ಗುರುತಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ, ತಮ್ಮ ನಾಯಕತ್ವದ ಅವಧಿಯಲ್ಲಿ ಭಾರತಕ್ಕೆ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಲ್ಲದೇ, ವಿಶೇಷ ದಾಖಲೆಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಧೋನಿ ನಾಯಕತ್ವದಲ್ಲಿ, ಭಾರತ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಬೀಗಿತು. 90 ಟೆಸ್ಟ್‌ಗಳಲ್ಲಿ 4,876 ರನ್, 350 ಏಕದಿನ ಪಂದ್ಯಗಳಲ್ಲಿ 10,773 ರನ್ ಮತ್ತು 98 ಟಿ20ಐ ಪಂದ್ಯಗಳಲ್ಲಿ 1617 ರನ್‌ಗಳನ್ನು ಧೋನಿ ದಾಖಲಿಸಿದ್ದಾರೆ. ಇನ್ನು ವಿಕೆಟ್ ಕೀಪರ್ ಆಗಿ 824 ವಿಕೆಟ್ ಕಬಳಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ ಕತ್ತೆಗಳಿಗೆ ಸಖತ್ ಡಿಮಾಂಡ್! ಚೀನಾಗೆ ಏಕೆ ಪಾಕ್ ಮೇಲೆ ಕಣ್ಣು? ಹೀಗಿದೆ ಅಚ್ಚರಿ ವರದಿ | Donkey
ಇಲ್ಲಿಯವರೆಗೆ ಒಟ್ಟು 11 ಭಾರತೀಯ ಕ್ರಿಕೆಟ್ ದಿಗ್ಗಜರನ್ನು ಐಸಿಸಿ 'ಹಾಲ್ ಆಫ್ ಫೇಮ್' ಪಟ್ಟಿಗೆ ಸೇರಿಸಲಾಗಿದೆ. ಸುನಿಲ್ ಗವಾಸ್ಕರ್ (2009), ಬಿಷನ್ ಬೇಡಿ (2009), ಕಪಿಲ್ ದೇವ್ (2010), ಅನಿಲ್ ಕುಂಬ್ಳೆ (2015), ರಾಹುಲ್ ದ್ರಾವಿಡ್ (2018), ಸಚಿನ್ ತೆಂಡೂಲ್ಕರ್ (2019), ವಿನೂ ಮಂಕಡ್ (2021), ಡಯಾನಾ ಎಡುಲ್ಜಿ (2023), ವೀರೇಂದ್ರ ಸೆಹ್ವಾಗ್ (2023), ನೀತು ಡೇವಿಡ್ (2024), ಮಹೇಂದ್ರ ಸಿಂಗ್ ಧೋನಿ (2025) ಈ ಪಟ್ಟಿಯಲ್ಲಿದ್ದಾರೆ,(ಏಜೆನ್ಸೀಸ್).