ಕ್ರೀಡೆ

CWC2023 INDvsAUS: ಟೀಮ್​ ಇಂಡಿಯಾ ವಿಶ್ವಕಪ್ ಗೆಲುವು!; ಅಯೋಧ್ಯಾ ರಾಮ ಮಂದಿರದ ಅರ್ಚಕರು ಹೇಳಿದ್ದಿಷ್ಟು

ಆಯೋಧ್ಯೆ: ಏಕದಿನ ವಿಶ್ವಕಪ್​ 2023ರ ಟೂರ್ನಿಯಲ್ಲಿ ಭಾರತ ತಂಡ ಸತತ ಗೆಲುವಿನ ಮೂಲಕ ಅತ್ಯುತ್ತಮ ಫಾರ್ಮ್​ನಲ್ಲಿದ್ದು, ಇತ್ತೀಚೆಗೆ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡವನ್ನು ಮಣಿಸಿ, ಫೈನಲ್​ ಪ್ರವೇಶಿಸಿತು. ಇದೀಗ ಫೈನಲ್​ ಮ್ಯಾಚ್​ಗೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಅದ್ದೂರಿಯಾಗಿ ಸಿದ್ದವಾಗಿದ್ದು, ಭಾರೀ ಪೈಪೋಟಿ ಕೊಡಲು ಆಸ್ಟ್ರೇಲಿಯಾ ಮತ್ತು ಟೀಮ್​ ಇಂಡಿಯಾ ಸಜ್ಜಾಗಿದೆ.

ಕ್ರಿಕೆಟ್​ ಅಭಿಮಾನಿಗಳು ಸೇರಿದಂತೆ ಇಡೀ ಜಗತ್ತೇ ಬಹಳ ಕುತೂಹಲದಿಂದ ಕಾಯುತ್ತಿರುವ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್​ ಪಂದ್ಯಕ್ಕೆ ಈಗಾಗಲೇ ಕ್ಷಣಗಣನೇ ಆರಂಭಗೊಂಡಿದೆ. ಇಡೀ ದೇಶವೇ ಭಾರತ ತಂಡ ಜಯಭೇರಿಯಾಗಲಿ ಎಂದು ದೇವಸ್ಥಾನ, ಪೂಜಾ ಮಂದಿರಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದೆ. ತಂಡದ ಆಟಗಾರರು ಭರ್ಜರಿ ದಾಖಲೆಗಳನ್ನು ಬರೆದು, ಮತ್ತಷ್ಟು ಇತಿಹಾಸ ನಿರ್ಮಿಸಲಿ ಎಂದು ವ್ಯಾಪಕವಾಗಿ ಶುಭಹಾರೈಸುತ್ತಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯವನ್ನು ಖುದ್ದಾಗಿ ಸ್ಟೇಡಿಯಂಗೆ ಆಗಮಿಸುವ ಮುಖೇನ ಪ್ರಧಾನಿ ಮೋದಿ ವೀಕ್ಷಿಸಲಿದ್ದಾರೆ. ಈ ಮೂಲಕ ಟೀಮ್​ ಇಂಡಿಯಾಗೆ ಭಾರೀ ಬೆಂಬಲ ಸೂಚಿಸಲಿದ್ದಾರೆ. ಇದೀಗ ಆಯೋಧ್ಯಾ ರಾಮ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ತಂಡದ ಗೆಲುವಿನ ಬಗ್ಗೆ ಭರವಸೆಯೊಂದನ್ನು ವ್ಯಕ್ತಪಡಿಸಿದ್ದಾರೆ.

"ರಾಮ್ ಲಲ್ಲಾ ಮತ್ತು ಹನುಮಾನ್ ಅವರ ಆಶೀರ್ವಾದದೊಂದಿಗೆ ನಮ್ಮ ತಂಡವು ವಿಶ್ವಕಪ್ ಗೆಲ್ಲುತ್ತದೆ ಎಂದು ನಾನು ಭಾವಿಸುವೆ" ಎಂದು ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ,(ಏಜೆನ್ಸೀಸ್).