More

    ಆಂಧ್ರಾಗೆ ಹವಾಮಾನ ಇಲಾಖೆ ಅಲರ್ಟ್: ಕೋಲಾರದಲ್ಲೂ ತುಂತುರು ಮಳೆ ಸಾಧ್ಯತೆ…

    Weather department alert in ap and rain in karnataka
    ಅಮರಾವತಿ​: ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ಮೇಲ್ಮೈ ಸುಳಿಗಾಳಿ ಶುಕ್ರವಾರ ಚಂಡಮಾರುತವಾಗಿ ಬಲಗೊಂಡಿದೆ. ಅದು ರಾತ್ರಿ ಬಾಂಗ್ಲಾದೇಶ ಕರಾವಳಿಯ ಖೇಪುಪಾರ ಬಳಿ ಕರಾವಳಿಯನ್ನು ದಾಟಿದೆ ಎಂದು ಹವಾಮಾನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಪ್ರಯೋಜನವಿಲ್ಲವೆಂದು ತೆಂಗಿನ ನಾರನ್ನು ಬಿಸಾಡುತ್ತೀರಾ? ಉಪಯೋಗದ ಬಗ್ಗೆ ತಿಳಿಯಿರಿ….
    ಈ ಚಂಡಮಾರುತ ಶನಿವಾರ ದುರ್ಬಲಗೊಳ್ಳಲಿದೆ. ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಶ್ರೀಲಂಕಾ ಬಳಿ ಮೇಲ್ಮೈ ಪರಿಚಲನೆಯು ಸಮುದ್ರ ಮಟ್ಟದಿಂದ 3.1 ಕಿ.ಮೀ ವರೆಗೆ ವಿಸ್ತರಿಸಿದೆ. ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಮತ್ತೊಂದು ಮೇಲ್ಮೈ ಪರಿಚಲನೆ ಮುಂದುವರಿದಿದ್ದು, ಮುಂದಿನ ಐದು ದಿನಗಳಲ್ಲಿ ಆಂಧ್ರ, ತಮಿಳುನಾಡು ಮತ್ತು ಕರ್ನಾಟಕದ ಕೋಲಾರ ಮತ್ತಿತರ ಕಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

    ಆಂಧ್ರದ ಶ್ರೀಕಾಕುಳಂ, ಪಾರ್ವತಿಪುರಂ ಮಾನ್ಯಂ, ಅಲ್ಲೂರಿ ಸೀತಾರಾಮರಾಜು, ಗುಂಟೂರು, ಬಾಪಟ್ಲ, ಪಲ್ನಾಡು, ಪ್ರಕಾಶಂ, ನೆಲ್ಲೂರು, ನಂದ್ಯಾಳ, ಶ್ರೀ ಸತ್ಯಸಾಯಿ, ಅನ್ನಮಯ್ಯ, ಚಿತ್ತೂರು ಮತ್ತು ತಿರುಪತಿ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಂಡಮಾರುತದ ಪರಿಣಾಮ ಅಷ್ಟಾಗಿ ಗೋಚರಿಸಲಿಲ್ಲ. ಆದರೆ, ಮೇಲ್ಮೈ ಪರಿಚಲನೆ ಪರಿಣಾಮ ಅಲ್ಲಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

    ಆಂಧ್ರದಲ್ಲಿ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಚಂಡಮಾರುತದ ಭೀತಿ ಮುಗಿದಿದ್ದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಕೆಲವು ಜಿಲ್ಲೆಗಳಲ್ಲಿ ಭತ್ತದ ಬೆಳೆ ಕಟಾವಿಗೆ ಬಂದಿದೆ. ಇನ್ನು ಕೆಲವೆಡೆ ಭತ್ತದ ಕೊಯ್ಲು ಮುಗಿದಿದೆ. ಇದರಿಂದ ಅನ್ನದಾತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
    ಹಾಗೆ ಮಳೆಯಾದರೆ ಹಗಲು ಬಿಸಿಲು, ರಾತ್ರಿ ಚಳಿಯಿಂದ ಜನ ತತ್ತರಿಸುತ್ತಾರೆ. ರಾತ್ರಿಯಿಂದ ಬೆಳಳಗ್ಗೆ 8 ಗಂಟೆಯವರೆಗೆ ತಣ್ಣನೆಯ ವಾತಾವರಣವಿದೆ. ಕೆಲವೆಡೆ ಮಂಜು ಕೂಡ ಬೀಳುತ್ತಿದೆ. ಈ ವಿಚಿತ್ರ ವಾತಾವರಣದಿಂದ ಜನರು ಸ್ವಲ್ಪ ತೊಂದರೆಗೀಡಾಗಿದ್ದಾರೆ.

    ಕೋಲಾರದಲ್ಲಿ 2ದಿನ ಮಳೆ: ಇನ್ನು ಆಂಧ್ರದ ಚಿತ್ತೂರು ಜಿಲ್ಲೆಗೆ ಹೊಂಡಿಕೊಂಡಿರುವ ಕೋಲಾರ ಜಿಲ್ಲೆಯಲ್ಲಿ ನ,20 ಮತ್ತು 21ರಂದು ಚದುರಿದಂತೆ ಮಳೆಯಾಗಲಿದೆ. ತಾಪಮಾನ ಕನಿಷ್ಠ 19ಡಿಗ್ರಿ ಸೆಲ್ಸಿಯಸ್​ ನಿಂದ ಗರಿಷ್ಟ 29 ಡಿಗ್ರಿ ಸೆಲ್ಸಿಯಸ್​ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಮತ್ತೊಮ್ಮೆ 10 ವಿದೇಯಕ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ: ರಾಜ್ಯಪಾಲರ ವಿರುದ್ಧ ಸ್ಟಾಲಿನ್ ವಾಗ್ದಾಳಿ ನಡೆಸಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts