ಕ್ರೀಡೆ

IPL 2023| ಬ್ಯಾಟ್ಸ್​ಮ್ಯಾನ್​-ಬೌಲರ್​ಗಳ ಸಂಘಟಿತ ಪ್ರದರ್ಶನ; CSKಗೆ 77ರನ್​ ಜಯ

Webdesk - Manjunatha B

ನವದೆಹಲಿ: ಬ್ಯಾಟ್ಸ್​ಮ್ಯಾನ್​-ಬೌಲರ್​ಗಳ ಸಂಘಟಿತ ಪ್ರದರ್ಶನದ ಫಲವಾಗಿ ಚೆನ್ನೈ ಸೂಪರ್​ಕಿಂಗ್ಸ್​ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 77ರನ್​ಗಳ ಜಯ ಸಾಧಿಸಿ ಪ್ಲೇ ಆಫ್​ ಪ್ರವೇಶಿಸಿದೆ.

ನವದೆಹಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿ ಸಿಎಸ್​ಕೆ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 223ರನ್​ ಗಳಿಸಿತ್ತು.

ಋತುರಾಜ್​-ಕಾನ್​ವೇ ಬಿರುಸಿನಾಟ

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದುಕೊಂಡ ಚೆನ್ನೈ ತಂಡವು ಆರಂಭಿಕರಾದ ಋತುರಾಜ್​ ಗಾಯಕ್ವಾಡ್​(79 ರನ್​, 50 ಎಸೆತ, 3 ಬೌಂಡರಿ, 7 ಸಿಕ್ಸರ್​), ಡೆವೊನ್​ ಕಾನ್​ವೇ(87 ರನ್, 52 ಎಸೆತ, 11 ಬೌಂಡರಿ, 3 ಸಿಕ್ಸರ್​) ಬಿರುಸಿನ ಜೊತೆಯಾಟದ ಫಲವಾಗಿ 3 ವಿಕೆಟ್​ ನಷ್ಟಕ್ಕೆ 20 ಓವರ್​ಗಳಲ್ಲಿ 223 ರನ್ ಗಳಿಸಿತ್ತು.

ಡೆಲ್ಲಿ ಪರ ಚೇತನ್​ ಸಕಾರಿಯಾ(4-0-36-1), ಎನ್ರಿಚ್​ ನೋಕಿಯಾ(4-0-43-1), ಖಲೀಲ್​ ಅಹ್ಮದ್​(4-0-45-1), ಕುಲದೀಪ್​ ಯಾದವ್​(3-034-0), ಅಕ್ಷರ್​​ ಪಟೇಲ್​(3-0-32-0), ಲಲಿತ್​ ಯಾದವ್​(2-0-32-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

ಕಡಿವಾಣ ಹೇರಿದ ಬೌಲರ್ಸ್​​

ಬೃಹತ್​ ಗುರಿ ಬೆನ್ನತ್ತಿದ್ದ ಡೆಲ್ಲಿ ತಂಡಕ್ಕೆ ಚೆನ್ನೈ ಬೌಲರ್ಸ್​ ಕಡಿವಾಣದ ಹೊರತ್ತಾಗಿಯೂ ನಾಯಕ ಡೇವಿಡ್​ ವಾರ್ನರ್​(86 ರನ್, 58 ಎಸೆತ, 7 ಬೌಂಡರಿ, 5 ಸಿಕ್ಸರ್​) ಫಲವಾಗಿ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 146 ರನ್​ಗಳಿಸಿ ಸೋಲುವ ಮೂಲಕ ಐಪಿಎಲ್​ನಲ್ಲಿ ತನ್ನ ಅಭಿಯಾನವನ್ನು ಮುಗಿಸಿತ್ತು.

ಚೆನ್ನೈ ಪರ ದೀಪಕ್​ ಚಹರ್​(4-0-22-3), ಮಹೀಶ್​ ತೀಕ್ಷ್ಣ(4-1-23-2), ಮತೀಶ ಪಥಿರಾಣಾ(4-0-22-2), ತುಷಾರ್​ ದೇಶಪಾಂಡೆ(4-0-26-1), ರವೀಂದರ್ರ ಜಡೇಜಾ(4-0-50-1) ಡೆಲ್ಲಿ ಬ್ಯಾಟ್ಸ್​ಮ್ಯಾನ್​ಗಳಿಗೆ ಕಡಿವಾಣ ಹಾಕುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.