ಕೊಚ್ಚಿ: ಮುಂದಿನ ವರ್ಷ (2027) ನಡೆಯಲಿರುವ ವುಮೆನ್ಸ್ ಪ್ರೀಮಿಯರ್ ಲೀಗ್ (WPL) ರ ಬಹುನಿರೀಕ್ಷಿತ ಮಿನಿ ಹರಾಜು ಪ್ರಕ್ರಿಯೆ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಮುಂಬರುವ ರೋಚಕ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ಐದೂ ಫ್ರಾಂಚೈಸಿಗಳು ತಮ್ಮ ಕಾರ್ಯತಂತ್ರಕ್ಕೆ ತಕ್ಕಂತೆ ಬಲಿಷ್ಠ ಹಾಗೂ ಪ್ರತಿಭಾವಂತ ಆಟಗಾರ್ತಿಯರನ್ನು ತಂಡಕ್ಕೆ ಸೇರಿಸಿಕೊಂಡಿವೆ.
ಈ ಬಾರಿಯ ಮಿನಿ ಹರಾಜಿನಲ್ಲಿ ‘ಯುಪಿ ವಾರಿಯರ್ಸ್’ (UP Warriorz) ಅತ್ಯಂತ ಚುರುಕಾಗಿ ಪಾಲ್ಗೊಂಡು ಎಲ್ಲರ ಗಮನ ಸೆಳೆದಿದ್ದು, ಹಲವು ಸ್ಟಾರ್ ಆಟಗಾರ್ತಿಯರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಈ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಸೋಫಿ ಮೋಲಿನೆಕ್ಸ್ (Sophie Molineux) ಅತಿ ಹೆಚ್ಚು ಬೇಡಿಕೆ ಪಡೆದಿದ್ದು, ಇವರನ್ನು ಯುಪಿ ವಾರಿಯರ್ಸ್ತ ತಂಡ ಬರೋಬ್ಬರಿ 1.1 ಕೋಟಿ ರೂಪಾಯಿ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿತು. ಜೊತೆಗೆ, ಸಿಡಿಲಬ್ಬರದ ಬ್ಯಾಟಿಂಗ್ಗೆ ಹೆಸರುವಾಸಿಯಾದ ಅನುಭವಿ ಆಲ್-ರೌಂಡರ್ ಗ್ರೇಸ್ ಹ್ಯಾರಿಸ್ ಕೂಡ ಯುಪಿ ವಾರಿಯರ್ಸ್ ಸೇರ್ಪಡೆಯಾಗಿದ್ದಾರೆ. ಭಾರತೀಯ ಅನುಭವಿ ಆಟಗಾರ್ತಿ ಸ್ನೇಹಾ ರಾಣಾ ಅವರನ್ನೂ ಒಳಗೊಂಡಂತೆ ಹಲವು ಪ್ರಮುಖರನ್ನು ಕಣಕ್ಕಿಳಿಸಿರುವ ಯುಪಿ ಪಡೆ, WPL 2027ರ ಸೀಸನ್ನಲ್ಲಿ ಅತ್ಯಂತ ಸಮತೋಲಿತ ತಂಡವಾಗಿ ಕಣಕ್ಕಿಳಿಯಲು ಸಜ್ಜಾಗಿದೆ.
ಮಿನಿ ಹರಾಜಿನಲ್ಲಿ ಒಟ್ಟು 27 ಸ್ಥಾನಗಳಿಗಾಗಿ 146 ಆಟಗಾರ್ತಿಯರ ಹೆಸರನ್ನು ಅಂತಿಮಗೊಳಿಸಲಾಗಿತ್ತು . ಇದರಲ್ಲಿ 7 ಸ್ಥಾನಗಳು ವಿದೇಶಿ ಆಟಗಾರ್ತಿಯರಿಗಾಗಿ ಮೀಸಲಾಗಿದ್ದವು. ಭಾರತೀಯ ಯುವ ಪ್ರತಿಭೆ ಜಿ. ಕಮಲಿನಿ ಗುಜರಾತ್ ಜೈಂಟ್ಸ್ ಪಾಲಾದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಜೆಸ್ ಜೊನಾಸೆನ್ ಹಾಗೂ ಕ್ಲೋಯ್ ಟ್ರಯಾನ್ ಅವರನ್ನು ತನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಂಡು ಲೈನ್-ಅಪ್ ಬಲಪಡಿಸಿಕೊಂಡಿದೆ. ಇತ್ತ, ಮುಂಬೈ ಇಂಡಿಯನ್ಸ್ (MI) ಯುವ ಆಟಗಾರ್ತಿ ಶ್ವೇತಾ ಸೆಹ್ರಾವತ್ ಮತ್ತು ಅಕ್ಷಿತಾ ಭಗತ್ ಅವರಂತಹ ತಾರೆಯರನ್ನು ಸೆಳೆದುಕೊಂಡು ತಂಡದ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ.
ಸ್ಮೃತಿ ಮಂಧಾನ, ಎಲ್ಲಿಸ್ ಪೆರ್ರಿ, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಜಾರ್ಜಿಯಾ ವೋಲ್, ಲಾರೆನ್ ಬೆಲ್, ನಡಿನ್ ಡಿ ಕ್ಲರ್ಕ್, ಜೆಸ್ ಜೊನಾಸೆನ್, ಕ್ಲೋಯ್ ಟ್ರಯಾನ್, ಪ್ರತ್ಯೂಷಾ ಕುಮಾರ್, ಪ್ರೇಮಾ ರಾವತ್, ಸಯಾಲಿ ಸತ್ಘರೆ, ವೃಂದಾ ದಿನೇಶ್.
ಹರ್ಮನ್ಪ್ರೀತ್ ಕೌರ್, ಅಮೆಲಿಯಾ ಕೆರ್, ಹೇಲಿ ಮ್ಯಾಥ್ಯೂಸ್, ನಟಾಲಿ ಸ್ಕಿವರ್ ಬ್ರಂಟ್, ಶಬ್ನಿಮ್ ಇಸ್ಮಾಯಿಲ್, ನಿಕೋಲಾ ಕ್ಯಾರಿ, ಅಮನ್ಜೋತ್ ಕೌರ್, ಶ್ವೇತಾ ಸೆಹ್ರಾವತ್, ಅಕ್ಷಿತಾ ಭಗತ್, ರಹಿಲಾ ಫಿರ್ದೌಸ್, ಸಜೀವನ್ ಸಜನಾ, ಸಂಸ್ಕೃತಿ ಗುಪ್ತಾ, ವೈಷ್ಣವಿ ಶರ್ಮಾ, ಸನಿಕಾ ಚಾವ್ಲ.
ದೀಪ್ತಿ ಶರ್ಮಾ, ಮೆಗ್ ಲ್ಯಾನಿಂಗ್, ಸೋಫಿ ಎಕ್ಲೆಸ್ಟೋನ್, ಸೋಫಿ ಮೋಲಿನೆಕ್ಸ್, ಗ್ರೇಸ್ ಹ್ಯಾರಿಸ್, ಫೋಬೆ ಲಿಚ್ಫೀಲ್ಡ್, ತಾರಾ ನಾರ್ರಿಸ್, ಹರ್ಲೀನ್ ಡಿಯೋಲ್, ಸ್ನೇಹಾ ರಾಣಾ, ಶಿಖಾ ಪಾಂಡೆ, ಕ್ರಾಂತಿ ಗೌಡ್, ಪ್ರತೀಕಾ ರಾವಲ್, ಶಿಪ್ರಾ ಗಿರಿ, ಸಿಮ್ರಾನ್ ಶೇಖ್, ದಕ್ಷಿಣಿ, ಸಹನಾ ಪವಾರ್, ಆಶಾ ಸೋಭಾನ.
ಬೆತ್ ಮೂನಿ, ಆಶ್ಲೀಗ್ ಗಾರ್ಡನರ್, ಜಾರ್ಜಿಯಾ ವಾರೆಹಮ್, ಕಿಮ್ ಗಾರ್ತ್, ಓರ್ಲಾ ಪ್ರೆಂಡರ್ಗಾಸ್ಟ್, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಜಿ. ಕಮಲಿನಿ, ಅನುಷ್ಕಾ ಶರ್ಮಾ, ಭಾರ್ತಿ ಫುಲ್ಮಾಲಿ, ಹ್ಯಾಪಿ ಕುಮಾರಿ, ಜಿಂಟಿಮಣಿ ಕಲಿತಾ, ಕನಿಕಾ ಅಹುಜಾ, ಕಾಶ್ವೀ ಗೌತಮ್, ತನುಜಾ ಕನ್ವರ್, ಸಮೈರಾ ರಾಘವ್.
ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮಾ, ಮರಿಜಾನ್ನೆ ಕಪ್, ಅನ್ನಾಬೆಲ್ ಸದರ್ಲ್ಯಾಂಡ್, ಲಾರಾ ವೊಲ್ವಾರ್ಡ್, ಚಿನೆಲ್ಲೆ ಹೆನ್ರಿ, ಲೂಸಿ ಹ್ಯಾಮಿಲ್ಟನ್, ಕಿರ್ಸ್ಟಿ ಗಾರ್ಡನ್, ಮಿನ್ನು ಮಣಿ, ಮಮತಾ ಮಡಿವಾಳ, ದೀಯಾ ಯಾದವ್, ಎನ್. ಶ್ರೀ ಚರಣಿ, ನಂದನಿ ಶರ್ಮಾ, ನಿಕಿ ಪ್ರಸಾದ್, ಕಿರಣ್ ನವಗಿರೆ, ನಜ್ಮಾ ಖಾನ್, (ಏಜೆನ್ಸೀಸ್).