ಟೀಮ್​ ಇಂಡಿಯಾ ವಿರುದ್ಧ ಶಾಕಿಂಗ್​ ಹೇಳಿಕೆ ನೀಡಿದ ಇಂಜಮಾಮ್ ಉಲ್​ ಹಕ್​ ( Inzamam ul Haq ) 
ಕ್ರಿಕೆಟ್

ಆ ಒಂದು ಕ್ಷಣದಲ್ಲೇ ಎಲ್ಲವು ಬದಲಾಯ್ತು... ಟೀಮ್​ ಇಂಡಿಯಾ ವಿರುದ್ಧ ಶಾಕಿಂಗ್​ ಹೇಳಿಕೆ ನೀಡಿದ ಇಂಜಮಾಮ್! Inzamam ul Haq

ಪ್ರಮುಖ ಮುಖ್ಯಾಂಶಗಳು

  • ನಿನ್ನೆ (ಫೆ.07) ಆರಂಭವಾದ ಟಿ20 ವಿಶ್ವಕಪ್ ಟೂರ್ನಮೆಂಟ್​ನಲ್ಲಿ ಭಾರತ ತನ್ನ ಮೊದಲ ಗೆಲುವು ದಾಖಲಿಸಿದೆ
  • ಕ್ರಿಕೆಟ್​ ಶಿಶು ಅಮೆರಿಕ ವಿರುದ್ಧ ಟೀಮ್​ ಇಂಡಿಯಾ ಜಯದ ಹಾದಿ ಅಷ್ಟು ಸುಲಭವಾಗಿರಲಿಲ್ಲ
  • ತುಂಬಾ ಶ್ರಮಪಟ್ಟು ಅಮೆರಿಕ ವಿರುದ್ಧ ಆತಿಥೇಯ ಭಾರತ ತನ್ನ ಮೊದಲು ಗೆಲುವು ಸಾಧಿಸಿತು
  • ಭಾರತ ಮತ್ತು ಅಮೆರಿಕ ನಡುವಿನ ಪಂದ್ಯ ಫಿಕ್ಸಿಂಗ್ ಆಗಿತ್ತು ಎಂದು ಪಾಕಿಸ್ತಾನದ ಮಾಜಿ ನಾಯಕ ಆರೋಪಿಸಿದ್ದಾರೆ
Inzamam ul Haq : ನಿನ್ನೆ (ಫೆ.07) ಆರಂಭವಾದ ಟಿ20 ವಿಶ್ವಕಪ್ ಟೂರ್ನಮೆಂಟ್​ನಲ್ಲಿ ಆತಿಥೇಯ ಭಾರತ ತನ್ನ ಮೊದಲ ಗೆಲುವು ದಾಖಲಿಸಿದೆ. ಕ್ರಿಕೆಟ್​ ಶಿಶು ಅಮೆರಿಕ ವಿರುದ್ಧ ಟೀಮ್​ ಇಂಡಿಯಾ ಜಯ ಸಾಧಿಸಿತು. ಆದರೆ, ಈ ಜಯದ ಹಾದಿ ಅಷ್ಟು ಸುಲಭವಾಗಿರಲಿಲ್ಲ. ನಾಯಕ ಸೂರ್ಯಕುಮಾರ್ ಯಾದವ್ 84 ರನ್ ಗಳಿಸದೇ ಹೋಗಿದ್ದರೆ, ಟೀಮ್ ಇಂಡಿಯಾ ಹೀನಾಯವಾಗಿ ಸೋಲುತ್ತಿತ್ತು. ತಂಡದ ಪ್ರಮುಖ ಬ್ಯಾಟ್ಸ್​ಮನ್​ಗಳೇ ಒಂದಂಕಿಗೆ ವಿಕೆಟ್​ ಒಪ್ಪಿಸಿದರು. ತುಂಬಾ ಶ್ರಮಪಟ್ಟು ಅಮೆರಿಕ ವಿರುದ್ಧ ಭಾರತ ಗೆಲುವು ಸಾಧಿಸಿತು. ಆದರೆ, ಈ ಗೆಲುವು ಪಾಕಿಸ್ತಾನದ ಮಾಜಿ ಆಟಗಾರರಿಗೆ ಹೊಟ್ಟೆಯಲ್ಲಿ ಬೆಂಕಿ ಇಟ್ಟಂತಾಗಿದೆ. ಹೀಗಾಗಿ, ಟೀಮ್​ ಇಂಡಿಯಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ಪಂದ್ಯ ಫಿಕ್ಸಿಂಗ್ ಆಗಿತ್ತು ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸೂರ್ಯಕುಮಾರ್ ಯಾದವ್ ಪಂದ್ಯದ ಸಮಯದಲ್ಲಿ ಅಮೆರಿಕದ ಬೌಲರ್‌ಗಳೊಂದಿಗೆ ರಹಸ್ಯವಾಗಿ ಮಾತನಾಡಿದರು. ಆ ಬಳಿಕ ಪಂದ್ಯದ ಸ್ವರೂಪವೇ ಬದಲಾಯಿತು. ಇದರಿಂದಲೇ ಭಾರತ ಗೆದ್ದಿತು. ಇಲ್ಲದಿದ್ದರೆ ಅಮೆರಿಕ ಗೆಲ್ಲುತ್ತಿತ್ತು ಎಂದು ಇಂಜಮಾಮ್​ ಆರೋಪಿಸಿದ್ದಾರೆ.
ಅಂದಹಾಗೆ, ಈ ಪಂದ್ಯದಲ್ಲಿ ಟೀಮ್ ಇಂಡಿಯಾ, ಅಮೆರಿಕ ತಂಡವನ್ನು 29 ರನ್‌ಗಳಿಂದ ಸೋಲಿಸಿತು. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್​ ಇಂಡಿಯಾ ತುಂಬಾ ಕಷ್ಟಪಟ್ಟು ಗೆಲುವು ಸಾಧಿಸಿತು. ಇದರ ಬೆನ್ನಲ್ಲೇ ತಮ್ಮ ನಾಲಿಗೆ ಹರಿಬಿಟ್ಟಿರುವ ಇಂಜಮಾಮ್​, ಅಮೆರಿಕ ತಂಡ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯೊಂದಿಗೆ ಫಿಕ್ಸಿಂಗ್ ಮಾಡುತ್ತಿದೆ. ಅದಕ್ಕಾಗಿಯೇ ಭಾರತವು ಅಮೆರಿಕವನ್ನು ಉದ್ದೇಶಪೂರ್ವಕವಾಗಿ ಸೋಲಿಸಿದೆ ಎಂದು ಆರೋಪಿಸಿದ್ದಾರೆ.
ಟೀಮ್ ಇಂಡಿಯಾದ ಸ್ಕೋರ್ 77 ಆಗಿದ್ದಾಗ 7 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ಅವರು ಅಮೆರಿಕನ್ ತಂಡದ ಬೌಲರ್‌ ಜತೆ ಪಿಸುಗುಟ್ಟಿದ್ದರು. ಆ ಬಳಿಕ ಪಂದ್ಯದ ಸ್ವರೂಪವೇ ಬದಲಾಯಿತು. ಸೂರ್ಯಕುಮಾರ್​ ಆಟದಿಂದ ಟೀಮ್ ಇಂಡಿಯಾ 160 ರನ್​ ಗಡಿ ದಾಟಿತು. ಇಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ. ಫಿಕ್ಸಿಂಗ್‌ನಿಂದಲೇ ಸೂರ್ಯಕುಮಾರ್ 84 ರನ್ ಗಳಿಸಿದ್ದಾರೆ. ಇಲ್ಲದಿದ್ದರೆ ಅಮೆರಿಕ ತಂಡ ಭಾರತದ ವಿರುದ್ಧ ಭರ್ಜರಿ ಗೆಲುವು ಸಾಧಿಸುತ್ತಿತ್ತು ಎಂದು ಇಂಜಮಾಮ್-ಉಲ್-ಹಕ್ ಆರೋಪಿಸಿದ್ದಾರೆ.
ಆದಾಗ್ಯೂ, ಭಾರತೀಯ ಕ್ರೀಡಾಭಿಮಾನಿಗಳು ಇಂಜಮಾಮ್ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ. ಭಾರತದ ಮೇಲೆ ಕೆಸರು ಎರಚುವುದನ್ನೇ ಪಾಕ್​ನ ಮಾಜಿ ಆಟಗಾರರು ಕೆಲಸ ಮಾಡಿಕೊಂಡಿದ್ದಾರೆ. ನೀವು ಎಷ್ಟೇ ಅಪಪ್ರಚಾರ ಮಾಡಿದರೂ ನಮ್ಮ ಘನತೆ ಕಡಿಮೆಯಾಗುವುದಿಲ್ಲ ಎಂದು ಕಾಮೆಂಟ್​ಗಳನ್ನು ಮಾಡುವ ಮೂಲಕ ತಿರುಗೇಟು ನೀಡುತ್ತಿದ್ದಾರೆ, (ಏಜೆನ್ಸೀಸ್​).