ನಾನು ವೈಭವ್‌ಗೆ ತರಬೇತಿ ನೀಡುತ್ತೇನೆ : ಯುವರಾಜ್ ಸಿಂಗ್
- ನಾನು ವೈಭವ್‌ಗೆ ತರಬೇತಿ ನೀಡುತ್ತೇನೆ : ಯುವರಾಜ್ ಸಿಂಗ್
- ಅಭಿಷೇಕ್ ಶರ್ಮಾ ಹಾಗೂ ವೈಭವ್ ಭಾರತ ಕ್ರಿಕೆಟ್‌ನ ಭವಿಷ್ಯ
- ಲಂಡನ್‌ನಲ್ಲಿ ವಿಂಬಲ್ಡನ್ ಪಂದ್ಯ ವೀಕ್ಷಿಸಿದ ಭಾರತದ ಆಟಗಾರರು
ಲಂಡನ್: ಇತ್ತೀಚೆಗೆ ನಡೆದ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ-20 ಟೂರ್ನಿಯಲ್ಲಿ ಸರಣಿಯಲ್ಲಿ ಭಾರಿ ಮುಖಭಂಗ ಅನುಭವಿಸಿದ ಟೀಂ ಇಂಡಿಯಾ ಆಟಗಾರರು ಭಾನುವಾರ (ಜು.13) ಲಂಡನ್‌ನಲ್ಲಿ ನಡೆಯುತ್ತಿದ್ದ ವಿಂಬಲ್ಡನ್ ಲಾನ್ ಟೆನಿಸ್ ಪಂದ್ಯಾವಳಿಯನ್ನು ವೀಕ್ಷಿಸಲು ಹೋಗಿದ್ದರು.
ಈ ಸಂದರ್ಭದಲ್ಲಿ ಅಭಿಷೇಕ್ ಶರ್ಮಾ ಜೊತೆಯಲ್ಲಿದ್ದ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಬಗ್ಗೆ ಭಾರತ ತಂಡದ ಮಾಜಿ ಸ್ಟಾರ್ ಆಟಗಾರ ಯುವರಾಜ್ ಸಿಂಗ್ (Yuvraj Singh on Vaibhav Suryavanshi) ಹೇಳಿರುವ ಮಾತು ಈಗ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದೆ.
ನಾನು ವೈಭವ್‌ಗೆ ತರಬೇತಿ ನೀಡುತ್ತೆನೆ!
ಅಭಿಷೇಕ್ ಶರ್ಮಾ ಜೊತೆಗಿದ್ದ ವೈಭವ್ ಸೂರ್ಯವಂಶಿ ಬಗ್ಗೆ ಮಾತನಾಡಿದ ಯುವರಾಜ್ ಸಿಂಗ್, ನನಗೆ ಅಭಿಷೇಕ್ನಿಗೆ ಮಾರ್ಗದರ್ಶನ ಮಾಡಿದಂತೆ ವೈಭವ್ ಸೂರ್ಯವಂಶಿಗೂ ತರಬೇತಿ ನೀಡಬೇಕೆಂಬ ಆಸೆಯಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಶ್ರೀಲಂಕಾ ಎ ತಂಡದ ವಿರುದ್ಧ ವೈಭವ್ ಸೂರ್ಯವಂಶಿ ಕೇವಲ 11 ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸುವ ಮೂಲಕ ಯುವರಾಜ್ ಸಿಂಗ್ ಅವರ ವೇಗದ ಅರ್ಧಶತಕದ ದಾಖಲೆಯನ್ನು ವಂಡರ್ ಕಿಡ್ ಮುರಿದಿದ್ದರು.
ವೈಭವ್-ಅಭಿಷೇಕ್ ಭಾರತದ ಭವಿಷ್ಯ!
ಈಗ ನಾವು ಟೆನಿಸ್ನಲ್ಲಿ ಅಲ್ಕರಾಜ್ ಹಾಗೂ ಸಿನ್ನರ್ ರನ್ನು ನೋಡಿದಾಗ ಟೆನಿಸ್ ಹೇಗೆ ಬದಲಾಗಿದೆ ಎಂದು ತಿಳಿಯುತ್ತದೆ. ಹಾಗೆಯೇ ಈ ಅಭಿಷೇಕ್ ಹಾಗೂ ವೈಭವ್ ಸೂರ್ಯವಂಶಿ ಭಾರತ ಕ್ರಿಕೆಟ್‌ನ ಭವಿಷ್ಯ ಎಂದು ಹೇಳಬಹುದು. ನಾನು ಟರ್ಮಿನೇಟರ್ ಆದರೆ ಅಭಿಷೇಕ್ ಟರ್ಮಿನೇಟ್ 4, ವೈಭವ್ ಸೂರ್ಯವಂಶಿ ಟರ್ಮಿನೇಟ್ 6 ಎಂದು ಹೇಳಿದ್ದಾರೆ. ಅಂದರೆ ಅಭಿಷೇಕ್ ನನ್ನಕ್ಕಿಂತ 4 ಪಟ್ಟು ಚೆನ್ನಾಗಿ ಆಟವಾಡುತ್ತಿದ್ದರೆ, ವೈಭವ್ 6 ಪಟ್ಟು ಉತ್ತಮ ಆಟಗಾರನಾಗಿದ್ದಾನೆಂದು ಯುವಿ ಮುಕ್ತ ಕಂಠದಿಂದ ಹೊಗಳಿದ್ದಾರೆ.
ಯುವಿ ಪಾಜಿ ನನಗೆ ಮಾದರಿ!
ಹಾಗೆಯೇ ಲೆಜಂಡರಿ ಆಟಗಾರ ಯುವರಾಜ್ ಸಿಂಗ್ ಬಗ್ಗೆ ಮಾತನಾಡಿದ ವೈಭವ್ ಸೂರ್ಯವಂಶಿ, ಯುವಿ ಪಾಜಿ ನನ್ನ ಆದರ್ಶ ಎಂದರೆ ಸುಳ್ಳಲ್ಲ, ಅವರೊಟ್ಟಿಗೆ ಸಮಯ ಕಳೆಯಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ, ಇವರೊಂದಿಗೆ ಕಳೆದ ಸಮಯ ಅಮೂಲ್ಯವಾಗಿದ್ದು, ಸಾಕಷ್ಟು ಮಾಹಿತಿಯನ್ನು ನನಗೆ ತಿಳಿಯಲು-ಕಲಿಯಲು ಸಹಕಾರಿಯಾಗಿದೆ ಎಂದು ವೈಭವ್, ಯುವರಾಜ್ ಸಿಂಗ್ ಬಗ್ಗೆ ಮೆಚ್ಚುಗೆ ವ್ತಕ್ತಪಡಿಸಿದ್ದಾರೆ.
ನಾನು ಅನುಭವಿಸಿದ್ದನ್ನೇ ವೈಭವ್ ಅನುಭವಿಸಿದ!
ವೈಭವ್ ಸೂರ್ಯವಂಶಿ ಹಾಗೂ ಯುವರಾಜ್ ಸಿಂಗ್ ಬೇಟಿಗೆ ಕಾರಣನಾದ ಅಭಿಷೇಕ್ ಶರ್ಮಾ ಮಾತನಾಡಿ, ನನಗೆ ಯುವರಾಜ್ ಸಿಂಗ್ ಮೊದಲಿಂದಲೂ ಆದರ್ಶ ಆಟಗಾರ, ಆದರೂ ನಾನು ಅವರನ್ನು ಮೊದಲ ಭಾರಿಗೆ ಬೇಟಿ ಮಾಡಿದಾಗ ಬಾರಿ ನರ್ವಸ್ ಆಗಿದ್ದೆ, ಇದೇ ಮೊದಲ ಬಾರಿಗೆ ಯುವಿ ಪಾಜಿ ಜೊತೆಗೆ ವಿಂಬಲ್ಡನ್ ಅದರಲ್ಲೂ ಫೈನಲ್ ಪಂದ್ಯವನ್ನು ವೀಕ್ಷಿಸುತ್ತಿದ್ದನೆ. ನಾನು ಯುವಿ ಅವರನ್ನು ಬೇಟಿ ಮಾಡಿದಾಗ ಯಾವ ಅನುಭವವನ್ನು ಪಡೆದಿದ್ದನೋ ಇಂದು ವೈಭವ್ ಕೂಡ ಅದನ್ನೇ ಅನುಭವಿಸಿದ್ದಾನೆಂದು ಹೇಳಿದ್ದಾರೆ, (ಏಜನ್ಸೀಸ್).