ಲಖನೌ ನಾಯಕತ್ವದಿಂದ ಕೆಳಗಿಳಿದ ರಿಷಭ್ ಪಂತ್
- ಐಪಿಎಲ್ 2026 ರಲ್ಲಿ ತಂಡದ ಕಳಪೆ ಪ್ರದರ್ಶನ
- ಲಖನೌ ನಾಯಕತ್ವದಿಂದ ಕೆಳಗಿಳಿದ ರಿಷಭ್ ಪಂತ್
- ಸೋಷಿಯಲ್ ಮೀಡಿಯಾನಲ್ಲಿ ಪೋಸ್ಟ್ ಮಾಡಿದ ಎಲ್ಎಸ್ಜಿ ಫ್ರಾಂಚೈಸಿ!
ಲಖನೌ: ಈ ಭಾರಿಯ ಐಪಿಎಲ್ನಲ್ಲಿ ಅತ್ಯಂತ ನಿರಾಶಾದಾಯಕ ಪ್ರದರ್ಶನ ನೀಡಿದ ಹಿನ್ನಲೆ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಸ್ಥಾನದಿಂದ ರಿಷಭ್ ಪಂತ್ ಕೆಳಗಿಳಿಯಲಿದ್ದಾರೆ (Rishabh Pant step down LSG Captaincy) ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೆಲ ದಿನಗಳಿಂದ ಇದೊಂದು ಗಾಳಿ ಸುದ್ದಿ ಎಂದು ಪರಿಗಣಿಸಲಾಗಿತ್ತು, ಆದರೆ ಶುಕ್ರವಾರ (ಮೇ.29) ಲಖನೌ ಸೂಪರ್ ಜೈಂಟ್ಸ್ ತಂಡ ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ.
ಪೋಸ್ಟ್ನಲ್ಲೇನಿದೆ?
ರಿಷಭ್ ಪಂತ್ ತಮ್ಮನ್ನು ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕತ್ವದಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಫ್ರಾಂಚೈಸಿ ಬಳಿ ವಿನಂತಿಸಿ ಕೊಂಡಿದ್ದು, ಫ್ರಾಂಚೈಸಿ ಈ ವಿನಂತಿಯನ್ನು ಸಮ್ಮತಿಸಿದೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದೆ.
2025 ರ ಮೆಘಾ ಆಕ್ಷನ್ನಲ್ಲಿ ರಿಷಬ್ ಪಂತ್ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಬರೊಬ್ಬರಿ 27 ಕೋಟಿ ರೂಪಾಯಿಗೆ ಮಾರಾಟವಾಗಿದ್ದರು. ಆದರೆ ಈ ಭಾರಿಯ ಐಪಿಎಲ್ನಲ್ಲಿ ಲಖನೌ ತಂಡ ಅಂಕಪಟ್ಟಿಯಲ್ಲಿ ಕೊನೆ ಸ್ಥಾನ ತಲುಪಿರುವ ಕಾರಣ ಈ ನಿರ್ಧಾರಕ್ಕೆ ರಿಷಬ್ ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ.
ರಿಷಭ್ ತಮ್ಮ ನಿರ್ಧಾರವನ್ನು ತಿಳಿಸಿದಾಗ ಆ ಕುರಿತು ಪ್ರತಿಕ್ರಿಯಿಸುವುದು ನಮಗೆ ಸುಲಭವಾಗಿರಲಿಲ್ಲ. ಆದರೆ ನಾವು ಅವರ ಮನವಿಯನ್ನು ಗೌರವ ಪೂರಕವಾಗಿ ಸ್ವೀಕರಿಸಿದ್ದವೆ. ಡ್ರೆಸಿಂಗ್ ರೂಮ್ಗೆ ರಿಷಭ್ ತಂದಿರುವ ಖುಷಿ-ದುಃಖವನ್ನು ನಾವು ಸಮಾನವಾಗಿ ಸ್ವೀಕರಿಸಿದ್ದೆವೆ ಎಂದು ಲಖನೌ ತಂಡ ಬರೆದುಕೊಂಡಿದೆ.
2026 ರ ಐಪಿಎಲ್ನಲ್ಲಿ ಎಲ್ಎಸ್ಜಿ!
ಈ ಭಾರಿಯ ಐಪಿಎಲ್ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ನಿರಾಶಾದಾಯಕ ಪ್ರದರ್ಶನ ನೀಡಿದೆ ಎಂದರೆ ಸುಳ್ಳಲ್ಲ. ಆಡಿರುವ 14 ಪಂದ್ಯಗಳಲ್ಲಿ 10 ಪಂದ್ಯಗಳಲ್ಲಿ ಸೋಲನ್ನು ಕಂಡು ಕೇವಲ 4 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿ 8 ಅಂಕಗಳೊಂದಿಗೆ ಲಖನೌ ಹತ್ತನೇ ಸ್ಥಾನವನ್ನು ಪಡೆಯುವ ಮೂಲಕ ಈ ಸೀಸನ್ನ್ನು ಮುಗಿಸಿದೆ, (ಏಜನ್ಸೀಸ್).