ರಾಜ್ಕೋಟ್: ಗುರುವಾರ (ಫೆಬ್ರವರಿ 15) ರಾಜ್‌ಕೋಟ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನ ಮೊದಲ ದಿನದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ಓಪನಿಂಗ್ ಬ್ಯಾಟ್ಸ್ಮನ್ ಆದ ಶುಭಮನ್ ಗಿಲ್ ಹೆಚ್ಚು ಸಮಯ ಕ್ರೀಸ್ನಲ್ಲಿ ನಿಲ್ಲದೇ ಪೆವಿಲಿಯನ್ ಹಾದಿ ಹಿಡಿದರು. ಟೀಂ ಇಂಡಿಯಾ ಪರ ಮೂವರು ಬ್ಯಾಟ್ಸ್ಮನ್ಗಳು ಪಂದ್ಯದ ಆರನೇ ಓವರ್‌ನಲ್ಲಿ ಇಂಗ್ಲೆಂಡ್‌ನ ವೇಗಿ ಮಾರ್ಕ್ ವುಡ್ ಎಸೆತಕ್ಕೆ ಔಟ್ ಆಗಿ ತಂಡಕ್ಕೆ ನಿರಾಸೆ ಮೂಡಿಸಿದರು.
ಆರಂಭಿಕ ಯಶಸ್ವಿ ಜೈಸ್ವಾಲ್ ಪ್ರಾರಂಭದಲ್ಲೇ ಔಟಾಗಿ ಪೆವಿಲಿಯನ್ ಕಡೆ ನಡೆದರು. ಯಶಸ್ವಿ ಬೆನ್ನಲ್ಲೇ ಕ್ರೀಸ್‌ಗೆ ಬಂದ ಗಿಲ್, ಅಖಾಡದಲ್ಲಿ ಲಯ ಕಂಡುಕೊಳ್ಳಲು ತೀರ ಪರದಾಡಿದರು. ಜೇಮ್ಸ್ ಆಂಡರ್ಸನ್ ಮತ್ತು ಮಾರ್ಕ್ ವುಡ್ ಬೌಲಿಂಗ್ ಎದುರಿಸುವಲ್ಲಿ ವಿಫಲವಾದ ಶುಭಮನ್, ತಮ್ಮ ಖಾತೆಯನ್ನು ತೆರೆಯುವಲ್ಲಿ ಸಂಪೂರ್ಣವಾಗಿ ಹಿಂದುಳಿದರು.
ಶುಭಮನ್ ಆಡಿದ ವೈಖರಿಯನ್ನು ಕಂಡ ಕ್ರಿಕೆಟ್ ಅಭಿಮಾನಿಗಳು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆಯನ್ನು ಸರಣಿ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ.
"ಗಿಲ್ ತಮ್ಮ ಕ್ರಿಕೆಟ್ ಟೆಕ್ನಿಕ್ ಅನ್ನು ಮತ್ತಷ್ಟು ಬಲಪಡಿಸಿಕೊಳ್ಳಬೇಕು ಹಾಗೂ ಕೆಲವು ದೇಶೀಯ ಪಂದ್ಯಗಳನ್ನು ಆಡಬೇಕು" ಎಂದು ಒಬ್ಬರು ಅಭಿಪ್ರಾಯಿಸಿದರೆ, ಮತ್ತೊಬ್ಬರು "ಶುಭಮನ್ ಒಬ್ಬ ಟೆಸ್ಟ್ ಆಟಗಾರನಲ್ಲ. 15 ಪಂದ್ಯಗಳಲ್ಲಿ ಕೇವಲ 100 ರನ್ ಗಳಿಸಿ, 15 ಇನ್ನಿಂಗ್ಸ್ಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ" ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).