ನವದೆಹಲಿ: ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ ಇದೇ ಸೆಪ್ಟೆಂಬರ್ 4 ರಿಂದ 13 ವರೆಗೂ ಏರ್ಪಡಿಸಲಾಗಿದ್ದ ಕಾಮನ್ವೆಲ್ತ್ (Commonwealth Games) ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಬೆಂಗಳೂರು ಮೂಲದ ದಿಶಾ ಮೋಹನ್ ಹೊಸ ದಾಖಲೆಯನ್ನು ಬರೆದಿದ್ದಾರೆ.
ಎಕ್ವಿಪ್ಡ್ ಸಬ್ ಜೂನಿಯರ್ 57 ಕೆಜಿ, ಸಬ್ ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ 78 ಕೆಜಿ ತೂಕದ ಬೆಂಚ್ ಪ್ರೆಸ್ನಲ್ಲಿ ಯಶಸ್ವಿಯಾಗಿ ಎತ್ತುವುದರ ಮೂಲಕ ನೂತನ ದಾಖಲೆಯನ್ನು ಮಾಡಿದ್ದಾರೆ.
ದಿಶಾ ಮೋಹನ್ ಅವರು ಬೆಂಗಳೂರಿನ ಬಾಲರ್ಕ ಫಿಟ್ನೆಸ್ ಸೆಂಟರ್, ಜೆ.ಪಿ ನಗರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರು ತರಬೇತುದಾರ ವಿಶ್ವನಾಥ ಭಾಸ್ಕರ್ (Commonwealth Record Holder) ಅವರಿಂದ ತರಬೇತಿ ಪಡೆಯುತ್ತಿದ್ದಾರೆ.