Chris Woakes: ಇತ್ತೀಚೆಗಷ್ಟೇ ಇಂಗ್ಲೆಂಡ್ ನೆಲದಲ್ಲಿ 6 ರನ್‌ಗಳಿಂದ ರೋಚಕ ಗೆಲುವು ಸಾಧಿಸಿದ ಭಾರತಕ್ಕೆ ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ, ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. ಕೊನೆಯ ಪಂದ್ಯವನ್ನು ಗೆದ್ದು, ಸರಣಿಯನ್ನು 2-2ರಲ್ಲಿ ಸಮಬಲಗೊಳಿಸಿದ ಟೀಮ್ ಇಂಡಿಯಾ ಪರ ವೇಗಿ ಮೊಹಮ್ಮದ್ ಸಿರಾಜ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದರು. ಪಂದ್ಯದ ಕೊನೆಯಲ್ಲಿ ಕೈಗೆ ಗಾಯವಾಗಿದ್ದರೂ ಅಖಾಡಕ್ಕಿಳಿದ ಇಂಗ್ಲೆಂಡ್ನ ಸ್ಟಾರ್ ಬ್ಯಾಟರ್ ಕ್ರಿಸ್ ವೋಕ್ಸ್, ಇದೀಗ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಬಿಜೆಪಿಯೊಂದಿಗೆ ಚುನಾವಣಾ ಆಯೋಗ ಕೈ ಜೋಡಿಸಿದೆ ಎಂದ ರಾಹುಲ್: ಕರ್ನಾಟಕದ ಎಂಪಿ ಕ್ಷೇತ್ರದ ಹೆಸರು ಉಲ್ಲೇಖ! |Rahul Gandhi
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ, ಕ್ರಿಸ್ ವೋಕ್ಸ್ ಬೌಲಿಂಗ್ ವೇಳೆ ರಿವರ್ಸ್ ಸ್ವೀಪ್ ಆಡಲು ಹೋದ ರಿಷಭ್ ಪಂತ್, ತಮ್ಮ ಕಾಲಿನ ಹೆಬ್ಬೆರಳಿಗೆ ಗಾಯ ಮಾಡಿಕೊಂಡರು. ಹೀಗಾಗಿ, ಐದನೇ ಟೆಸ್ಟ್ನಲ್ಲಿ ತಂಡದ ಪರ ಮೈದಾನಕ್ಕಿಳಿಯಲಿಲ್ಲ. ಇದೇ ಪಂದ್ಯದಲ್ಲಿ, ಬೀಸಾಡಲು ಹೋದ ಕ್ರಿಸ್ ವೋಕ್ಸ್, ತಮ್ಮ ಎಡ ಭುಜದ ಮೂಳೆ ಮುರಿದುಕೊಂಡರು. ಈ ನೋವಿನಿಂದ ಬಳಲುತ್ತಿದ್ದ ಕ್ರಿಸ್, ಐದನೇ ಟೆಸ್ಟ್ನಲ್ಲಿ ಆಡುವ ಪರಿಸ್ಥಿತಿಯಲ್ಲಿರಲಿಲ್ಲ. ಆದರೂ ಕೊನೆಯ ವಿಕೆಟ್ನಲ್ಲಿ ಆಡಿದ ಅವರಿಗೆ ಕ್ರಿಕೆಟ್ ಪ್ರಿಯರಿಂದ ಹಾಗೂ ಸಹ ಆಟಗಾರರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಯಿತು.
ಅಂತಿಮ ಟೆಸ್ಟ್ ಪಂದ್ಯವನ್ನು ಗೆಲ್ಲಲು ಇಂಗ್ಲೆಂಡ್‌ಗೆ 17 ರನ್‌ಗಳ ಅಗತ್ಯವಿತ್ತು. ಈ ವೇಳೆ ಒಂದು ಕೈಯಲ್ಲಿಯೇ ಬ್ಯಾಟಿಂಗ್ ಮಾಡಲು ಬಂದ ಕ್ರಿಸ್ ವೋಕ್ಸ್, ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯುವಲ್ಲಿ ವಿಫಲರಾದರು. ಭಾರತ 6 ರನ್‌ಗಳಿಂದ ಪಂದ್ಯವನ್ನು ಗೆದ್ದ ನಂತರ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಕ್ರಿಸ್ಗೆ ವಿಶೇಷ ಅಭಿನಂದನೆ ತಿಳಿಸಿದ್ದಾರೆ. ಈ ಕುರಿತು ವೋಕ್ಸ್ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
"ಗೆಲ್ಲಲು ಇನ್ನೂ 100 ರನ್ ಅಗತ್ಯವಿದ್ದಾಗಲೂ ನಾನು ಬ್ಯಾಟಿಂಗ್ ಮಾಡಲು ಹೋಗುತ್ತಿದ್ದೆ. ಆದರೆ, ಈ ಪಂದ್ಯವನ್ನು ಸೋತಿದ್ದು ನಿಜಕ್ಕೂ ನೋವುಂಟು ಮಾಡಿದೆ. ನಾನೊಬ್ಬನೇ ಅಲ್ಲ, ನನ್ನ ಜಾಗದಲ್ಲಿ ಯಾವ ಆಟಗಾರ ಇದ್ದಿದ್ದರೂ ಸಹ ತಂಡಕ್ಕಾಗಿ ಇದೇ ರೀತಿ ಮಾಡುತ್ತಿದ್ದರು" ಎಂದು ಕ್ರಿಸ್ ಹೇಳಿದ್ದಾರೆ.
"ಇನ್ಸ್ಟಾಗ್ರಾಮ್ನಲ್ಲಿ ನಾನು ಬ್ಯಾಟಿಂಗ್ ಮಾಡುತ್ತಿದ್ದ ಫೋಟೋವೊಂದನ್ನು ಹಂಚಿಕೊಂಡಿದ್ದೆ. ಇದಕ್ಕೆ ರಿಷಭ್ ಪಂತ್ ಸೆಲ್ಯೂಟ್ ಹೊಡೆಯುವ ಎಮೋಜಿ ಹಾಕಿದ್ದರು. ಅದನ್ನು ನೋಡಿದ ಬಳಿಕ ನಾನವರಿಗೆ ಧನ್ಯವಾದ ಹೇಳಿದೆ. ಅದೇ ಸಮಯದಲ್ಲಿ, ಪಂತ್ ನನ್ನ ಇಂಜುರಿ ಬಗ್ಗೆ ಮಾತನಾಡಿದ್ದಾರೆ. ರಿಷಭ್ ಪಂತ್ ಅವರು, 'ಎಲ್ಲವೂ ಸರಿಯಾಗಲಿ ಎಂದು ಆಶಿಸುತ್ತೇನೆ. ನೀವು ಶೀಘ್ರವೇ ಗುಣಮುಖರಾಗಿ. ಮುಂದೊಂದು ದಿನ ಖಂಡಿತವಾಗಿಯೂ ನಾವಿಬ್ಬರು ಭೇಟಿಯಾಗೋಣ' ಎಂದು ವಾಯ್ಸ್ ನೋಟ್ ಸಂದೇಶ ಕಳುಹಿಸಿದ್ದಾರೆ. ನನ್ನ ಬೌಲಿಂಗ್ನಲ್ಲಿ ಪಂತ್ ಅವರಿಗೆ ಇಂಜುರಿ ಆಯಿತು. ಇದಕ್ಕಾಗಿ ನಾನು ಅವರ ಬಳಿ ಕ್ಷಮೆಯಾಚಿಸುತ್ತೇನೆ" ಎಂದಿದ್ದಾರೆ,(ಏಜೆನ್ಸೀಸ್).