ಚೆನ್ನೈ: ಭಾರತ ತಂಡದ ಜೂನ್ 2 ರಂದು ಇಂಗ್ಲೆಂಡ್ ಪ್ರವಾಸಕ್ಕೆ ಹೊರಡುವ ಸಿದ್ಧತೆಯಲ್ಲಿದೆ. ಇಂಗ್ಲೆಂಡ್ಗೆ ತೆರಳುವುದಕ್ಕೂ ಮುನ್ನ ಭಾರತ ತಂಡದ ಆಟಗಾರರು ತವರಿನಲ್ಲೇ 14 ದಿನಗಳ ಕಾಲ ಕ್ವಾರಂಟೈನಲ್ಲಿ ಇರಬೇಕಾಗಿದೆ. ಹೀಗಾಗಿ ಮುಂಬೈ ನಗರದ ಆಟಗಾರರು, ಕೋವಿಡ್ನಿಂದ ಚೇತರಿಸಿಕೊಂಡಿರುವ ಕರ್ನಾಟಕದ ಪ್ರಸಿದ್ಧ ಕೃಷ್ಣ ಹಾಗೂ ವೃದ್ಧಿಮಾನ್ ಸಾಹ ಹೊರತುಪಡಿಸಿ ಉಳಿದ ಎಲ್ಲ ಆಟಗಾರರು ಬುಧವಾರ ಮುಂಬೈಗೆ ಆಗಮಿಸಿದರು. ಚೆನ್ನೈ, ಹೈದರಾಬಾದ್ ಹಾಗೂ ನವದೆಹಲಿಯಿಂದ ಮೂರು ತಂಡಗಳಾಗಿ ಮುಂಬೈಗೆ ಆಗಮಿಸಿದವು. ಪುರುಷರ ತಂಡದೊಂದಿಗೆ ಮಹಿಳಾ ತಂಡ ಕೂಡ ಲಂಡನ್ಗೆ ಒಟ್ಟಿಗೆ ತೆರಳುತ್ತಿರುವುದರಿಂದ ಮಹಿಳಾ ಆಟಗಾತಿರ್ಯರು ಮುಂಬೈಗೆ ಆಗಮಿಸಿದರು. ಕನ್ನಡಿಗರಾದ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಆರ್.ಅಶ್ವಿನ್, ವಾಷಿಂಗ್ಟನ್ ಸುಂದರ್, ಮಹಿಳಾ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಒಂದೇ ವಿಮಾನದಲ್ಲಿ ಮುಂಬೈನತ್ತ ಹೊರಟರು.
ಆಟಗಾರರು ಮುಂಬೈಗೆ ತೆರಳುತ್ತಿರುವ ಫೋಟೋವನ್ನು ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಪ್ರಕಟಿಸಿದೆ. ಇಂಗ್ಲೆಂಡ್ಗೆ ತೆರಳುವುದಕ್ಕೂ ಮುನ್ನ ಸ್ಟಾಪ್ ಎಂದು ಬರೆಯಲಾಗಿದೆ. ಮುಂಬೈ ಆಟಗಾರರಾದ ರೋಹಿತ್ ಶರ್ಮ, ಅಜಿಂಕ್ಯ ರಹಾನೆ ಮೇ 24 ರಂದು ತಂಡ ಕೂಡಿಕೊಳ್ಳಲಿದ್ದು, ಅವರೊಂದಿಗೆ ಪ್ರಸಿದ್ಧ ಕೃಷ್ಣ ಹಾಗೂ ವೃದ್ಧಿಮಾನ್ ಸಾಹ ಕೂಡ ಅಂದೇ ತಂಡ ಸೇರಲಿದ್ದಾರೆ.
ಜೂನ್ 2 ರಂದು ಇಂಗ್ಲೆಂಡ್ಗೆ ತೆರಳಲಿರುವ ಭಾರತ ತಂಡಗಳು ಅಲ್ಲಿಯೂ 10 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಲಿವೆ. ಬಳಿಕ ಭಾರತ ಪುರುಷರ ತಂಡ ಜೂನ್ 18 ರಿಂದ ಸೌಥಾಂಪ್ಟನ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಎದುರಿಸಲಿದೆ. ಬಳಿಕ ಇಂಗ್ಲೆಂಡ್ ಎದುರು 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದೇ ವೇಳೆ ಭಾರತ ಮಹಿಳಾ ತಂಡ ಕೂಡ 7 ವರ್ಷಗಳ ಬಳಿಕ ಟೆಸ್ಟ್ ಪಂದ್ಯವನ್ನಾಡಲಿದೆ. ಬಳಿಕ ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿಯಲ್ಲಿ ಆಡಲಿದೆ.