ಬೆಂಗಳೂರು: ಸ್ಪಿನ್ನರ್ ಯಜುವೇಂದ್ರ ಚಾಹಲ್ ಹಾಗೂ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಹಲವು ವರ್ಷಗಳ ಕಾಲ ರಾಯೆಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಭಾಗವಾಗಿದ್ದರು. ಪರಸ್ಪರ ಕಿಚಾಯಿಸುವ ಈ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದೆ. ಇದೇ ರೀತಿ ಚಾಹಲ್ ಶುಕ್ರವಾರ ಹಾಕಿ ವಿಡಿಯೋ ಒಂದಕ್ಕೆ ಕಾಲೆಳೆಯಲು ಬಂದ ಗೇಲ್ ‘ಅಂಕಲ್’ ಎನಿಸಿಕೊಂಡು ತಿರುಗೇಟು ಅನುಭವಿಸಿದ್ದಾರೆ. ಮತ್ತೋರ್ವ ಸ್ಪಿನ್ನರ್ ಕುಲದೀಪ್ ಯಾದವ್‌ಗೆ ಚಾಹಲ್ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.
ಇದನ್ನೂ ಓದಿ: VIDEO: ಬಿಡಾಡಿ ದನಗಳಿಗೆ ಶಿಖರ್ ಧವನ್ ಕುಟುಂಬದಿಂದ ಆಹಾರ
ಟಿಕ್ ಟಾಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಚಾಹಲ್, ಶುಕ್ರವಾರ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಮಾರ್ಟಿನ್ ಗುಪ್ಟಿಲ್‌ರನ್ನು ಬೌಲ್ಡ್ ಮಾಡಿರುವ ವಿಡಿಯೋ ಪ್ರಕಟಿಸಿದ್ದರು. ಇದಕ್ಕೆ ಕ್ರಿಸ್ ಗೇಲ್, ಲೆಗ್ ಸ್ಪಿನ್ನರ್ (ಚಾಹಲ್) ಕಾಲನ್ನು ಗೆರೆಯಿಂದ ಆಚೆ ಇಟ್ಟಿದ್ದಾರೆ. ಇದು ನೋ ಬಾಲ್ ಅಂಪೈರ್’ ಎಂದು ಕಾಮೆಂಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಚಾಹಲ್...ಹಹ ಅಂಕಲ್, ಇದು ಕಳೆದ ರಾತ್ರಿಯ ಎಫೆಕ್ಟ್ ಅನ್ಸುತ್ತೆ ಎಂದು ಹೇಳಿದ್ದಾರೆ. ಇದೇ ವಿಡಿಯೋಗೆ ಕಾಮೆಂಟ್ ಹಾಕಿರುವ ಕುಲದೀಪ್ ಯಾದವ್, ವೆಲ್ ಬೌಲ್ಡ್ ಸರ್‌ಜೀ ಎಂದಿದ್ದಾರೆ. ನಿನ್ನ ಹಾಗೆಯೇ ಬೌಲಿಂಗ್ ಮಾಡಲು ಪ್ರಯತ್ನಿಸುವೇ ಬ್ರದರ್ ಎಂದು ಚಾಹಲ್ ಕುಲದೀಪ್‌ಗೆ ಪ್ರತಿಕ್ರಿಯಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ಚಾಹಲ್, ಇತ್ತೀಚೆಗಷ್ಟೇ ಆಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಜತೆಗೂಡಿ ಭಾರತ- ಆಫ್ಘಾನಿಸ್ತಾನ ಅತ್ಯುತ್ತಮ ಇಲೆವೆನ್ ತಂಡ ಪ್ರಕಟಿಸಿದ್ದರು. ಬಳಿಕ ಚಾಹಲ್ ಪ್ರಕಟಿಸಿದ್ದ ಫೋಟೋವೊಂದಕ್ಕೆ ರೋಹಿತ್ ಶರ್ಮ, ಬಟ್ಟೆ ನಿನ್ನ ಮೇಲಿದೆಯೋ ಅಥವಾ ಬಟ್ಟೆ ಒಳಗೆ ನಿನ್ನಿದ್ದಿಯೋ ಎಂದು ಕಾಲೆಳೆದಿದ್ದರು.