More

    VIDEO: ಬಿಡಾಡಿ ದನಗಳಿಗೆ ಶಿಖರ್ ಧವನ್ ಕುಟುಂಬದಿಂದ ಆಹಾರ

    ನವದೆಹಲಿ: ಮಹಾಮಾರಿ ಕರೊನಾ ವೈರಸ್‌ನಿಂದಾಗಿ ಕಳೆದ ಮೂರು ತಿಂಗಳಿಂದ ಎಲ್ಲರೂ ಇದ್ದಲ್ಲಿಯೇ ಲಾಕ್ ಆಗಿದ್ದರು. ಇದರಿಂದ ಕೇವಲ ಜನ ಸಾಮಾನ್ಯರಲ್ಲದೇ, ಪ್ರಾಣಿ ಸಂಕುಲ, ದನ ಜಾನುವಾರುಗಳ ಸಂಕಷ್ಟ ಹೇಳತೀರದು. ಲಾಕ್‌ಡೌನ್ ಸಡಿಲಿಕೆ ಬಳಿಕ ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ತಮ್ಮ ಪತ್ನಿ, ಮಗ ಸಮೇತ ಬಿಡಾಡಿ ದನಗಳಿಗೆ ಆಹಾರ ನೀಡುವ ಮೂಲಕ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಮಗನಿಗೆ ಹಸಿವಿನ ಹಾಗೂ ಜೀವನ ಕಷ್ಟ ತಿಳಿಸುವ ಸಲುವಾಗಿ ಬಿಡಾಡಿ ದನಗಳಿಗೆ ಆಹಾರ ನೀಡಿದ್ದಾಗಿ ಶಿಖರ್ ಧವನ್ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಒಂದು ತಿಂಗಳಲ್ಲಿ ಚಂದ್ರನಲ್ಲಿಗೆ ಓಡಿರಿ… 3,84,400 ಕಿಲೋಮೀಟರ್!

    VIDEO: ಬಿಡಾಡಿ ದನಗಳಿಗೆ ಶಿಖರ್ ಧವನ್ ಕುಟುಂಬದಿಂದ ಆಹಾರಲಾಕ್‌ಡೌನ್ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದ ಧವನ್, ಅನ್‌ಲಾಕ್‌ನಲ್ಲಿ ಸಾಮಾಜಿಕ ಸೇವೆ ಮೂಲಕ ಮತ್ತೊಮ್ಮೆ ಹೆಸರಾಗಿದ್ದಾರೆ. ಈ ಬಾರಿ ಬಿಡಾಡಿ ದನಗಳಿಗೆ ಆಹಾರ ನೀಡಿ ಎಲ್ಲರ ಗಮನಸೆಳೆದಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಧವನ್, ಜೀವನದ ಮೌಲ್ಯಗಳನ್ನು ಮಗನಿಗೆ ಕಲಿಸುವ ಸಮಯ. ಇತರರಿಗೆ ಅವಶ್ಯಕತೆ ಇದ್ದ ವಸ್ತುವಿನ ಮೌಲ್ಯ ಆತನಿಗೆ ತಿಳಿಯಬೇಕು. ಇಂಥ ಕಠಿಣ ಸಮಯದಲ್ಲಿ ಹಸಿದ ದನಗಳಿಗೆ ಆಹಾರ ನೀಡಬೇಕು. ಮಗನಿಗೆ ಪಾಠ ಹೇಳಿದ್ದಕ್ಕೆ ಹೆಮ್ಮೆಯಿದೆ. ಪ್ರತಿಯೊಬ್ಬರು ಬಿಡಾಡಿ ದನಗಳ ಹಸಿವು ನೀಗಿಸಬೇಕು ಎಂದು ಧವನ್ ಕರೆ ನೀಡಿದ್ದಾರೆ.

    ಇದನ್ನೂ ಓದಿ: VIDEO| ಮನೆಯಂಗಳದಲ್ಲಿ ಕಾರ್ಕಳ ಯುವತಿಯ ಕವರ್​ಡ್ರೈವ್​ಗೆ ಇಎಸ್​ಪಿಎನ್ ಕ್ರಿಕ್​ಇನ್ಪೋ ಫಿದಾ!

    ಧವನ್ ಕಾರ್ಯಕ್ಕೆ ಭಾರತ ತಂಡದ ಸಹ ಆಟಗಾರರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹರ್ಭಜನ್ ಸಿಂಗ್, ಕುಲದೀಪ್ ಯಾದವ್ ಸೇರಿದಂತೆ ಹಾರ್ಟ್ ಎಮೋಜಿ ಮೂಲಕ ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts