More

    ಭಾರತದಲ್ಲಿ ಒಬ್ಬನಲ್ಲ, ಹನ್ನೊಂದು ವಿರಾಟ್ ಕೊಹ್ಲಿ ಇದ್ದಾರೆ! ಸಕ್ಲೇನ್​ ಹೀಗೆ ಹೇಳಿದ್ಯಾಕೆ?

    ಕೋಲ್ಕತ: ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಒಬ್ಬನಲ್ಲ, ಹನ್ನೊಂದು ವಿರಾಟ್ ಕೊಹ್ಲಿ ಇದ್ದಾರೆ. ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿದರೆ ನೀವು ಸಂಪೂರ್ಣ ಭಾರತ ತಂಡವನ್ನು ಔಟ್ ಮಾಡಿದಂತೆ ಎಂದು ಪಾಕಿಸ್ತಾನದ ಸ್ಪಿನ್ ದಿಗ್ಗಜ ಸಕ್ಲೇನ್ ಮುಷ್ತಾಕ್, ಇಂಗ್ಲೆಂಡ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿದ್ದಾಗ ಸ್ಪಿನ್ನರ್‌ಗಳಿಗೆ ಸಲಹೆ ನೀಡುತ್ತಿದ್ದರಂತೆ!

    ಇದನ್ನೂ ಓದಿ: VIDEO: ಬಿಡಾಡಿ ದನಗಳಿಗೆ ಶಿಖರ್ ಧವನ್ ಕುಟುಂಬದಿಂದ ಆಹಾರ

    ಕಳೆದ ವಿಶ್ವಕಪ್‌ವರೆಗೆ ಇಂಗ್ಲೆಂಡ್ ತಂಡದ ಜತೆಗಿದ್ದ 43 ವರ್ಷದ ಸಕ್ಲೇನ್ ಮುಷ್ತಾಕ್, ಇನ್‌ಸ್ಟಾಗ್ರಾಂ ಲೈವ್ ಮಾತುಕತೆಯ ವೇಳೆ ವಿರಾಟ್ ಕೊಹ್ಲಿ ವಿರುದ್ಧ ರೂಪಿಸಿದ್ದ ಕಾರ್ಯತಂತ್ರದ ಬಗ್ಗೆ ಹೇಳಿಕೊಂಡಿದ್ದಾರೆ. ‘ವಿರಾಟ್ ಕೊಹ್ಲಿ ಒಬ್ಬನಲ್ಲ, ಹನ್ನೊಂದು ಮಂದಿ ಇದ್ದಾರೆ ಎಂದು ಭಾವಿಸಿಯೇ ನೀವು ಬೌಲಿಂಗ್ ಮಾಡಬೇಕು. ವಿಶ್ವದರ್ಜೆಯ ಆಟಗಾರನೊಬ್ಬನಿಗೆ ಯಾವುದೇ ರೀತಿಯ ಸ್ಪಿನ್ ಬೌಲಿಂಗ್ ಎದುರಿಸುವುದು ಕಷ್ಟವಾಗದು. ಎಡಗೈ, ಆಫ್​, ಅಥವಾ ಲೆಗ್ ಸ್ಪಿನ್ ಬೌಲಿಂಗ್ ಸಮರ್ಥವಾಗಿ ಎದುರಿಸಬಲ್ಲ. ಆದರೆ ಬೌಲರ್‌ಗಿಂತ ಹೆಚ್ಚಿನ ಒತ್ತಡ ಅವರ ಮೇಲಿರುವಂತೆ ನೋಡಿಕೊಳ್ಳಬೇಕು. ಅವರನ್ನು ಇಡೀ ವಿಶ್ವವೇ ನೋಡುತ್ತಿರುತ್ತದೆ. ಬೌಲರ್ ಆಗಿ ನೀವು ಇದನ್ನು ತಲೆಯಲ್ಲಿಟ್ಟುಕೊಳ್ಳಬೇಕು’ ಎಂದು ಸಕ್ಲೇನ್ ಯಾವಾಗಲೂ ತಂಡದ ಸ್ಪಿನ್ ಬೌಲರ್‌ಗಳಾದ ಮೊಯಿನ್ ಅಲಿ ಮತ್ತು ಆದಿಲ್ ರಶೀದ್‌ಗೆ ಹೇಳುತ್ತಿದ್ದರಂತೆ. ಸಕ್ಲೇನ್ ಮಾರ್ಗದರ್ಶನದಲ್ಲಿ ಇವರಿಬ್ಬರು ತಲಾ 6 ಬಾರಿ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.

    ಇದನ್ನೂ ಓದಿ: VIDEO| ಮನೆಯಂಗಳದಲ್ಲಿ ಕಾರ್ಕಳ ಯುವತಿಯ ಕವರ್​ಡ್ರೈವ್​ಗೆ ಇಎಸ್​ಪಿಎನ್ ಕ್ರಿಕ್​ಇನ್ಪೋ ಫಿದಾ!

    2018ರಲ್ಲಿ ಹೆಡಿಂಗ್ಲೆಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಆದಿಲ್ ರಶೀದ್, ವಿರಾಟ್ ಕೊಹ್ಲಿ ಅವರ ಆಫ್​-ಸ್ಟಂಪ್ ಉರುಳಿಸಿದ್ದರು. ಅರೌಂಡ್ ಲೆಗ್ ಪಿಚ್ ಆಗಿದ್ದ ಚೆಂಡು ಕೊಹ್ಲಿ ಅವರನ್ನು ಕ್ಲೀನ್ ಬೌಲ್ಡ್ ಮಾಡಿತ್ತು. ವೈಡ್ ಆಗಿದ್ದ ಆ ಎಸೆತ ಸಾಕಷ್ಟು ಪಥ ಬದಲಾವಣೆ ಮಾಡಿ ಬೇಲ್ಸ್ ಕೆಡವಿತ್ತು. ಅದಕ್ಕೆ ಸಕ್ಲೇನ್, ‘ವಿರಾಟ್ ವಾಲಾ ಡೆಲಿವರಿ’ ಎಂದೇ ಹೆಸರಿಟ್ಟಿದ್ದಾರೆ. ನೆಟ್ಸ್‌ನಲ್ಲಿ ಆದಿಲ್ ರಶೀದ್‌ರಿಂದ ಸಕ್ಲೇನ್ ಆ ಎಸೆತವನ್ನು ಸತತವಾಗಿ ಅಭ್ಯಾಸ ಮಾಡಿಸಿದ್ದರು.

    ಇದನ್ನೂ ಓದಿ: ಒಂದು ತಿಂಗಳಲ್ಲಿ ಚಂದ್ರನಲ್ಲಿಗೆ ಓಡಿರಿ… 3,84,400 ಕಿಲೋಮೀಟರ್!

    ‘ವಿರಾಟ್ ಕೊಹ್ಲಿ ವಿಶ್ವದ ನಂ.1 ಬ್ಯಾಟ್ಸ್‌ಮನ್ ಆಗಿರಬಹುದು. ಆದರೆ ಬೌಲರ್ ಕೂಡ ಸಮರ್ಥ ಯೋಜನೆ, ಕಲ್ಪನೆ, ಭಾವನೆ ಮತ್ತು ಉತ್ಸಾಹದಿಂದ ಬೌಲಿಂಗ್ ಮಾಡಿದರೆ ಯಾರಿಗೂ ಕಡಿಮೆ ಇರುವುದಿಲ್ಲ. ನಂ. 1 ಬ್ಯಾಟ್ಸ್‌ಮನ್‌ಗೆ ಸಹಜವಾಗಿಯೇ ಅಹಂ ಇರುತ್ತದೆ. ಆತನಿಗೆ ಡಾಟ್ ಬಾಲ್ ಹಾಕಿದರೆ ಖಂಡಿತವಾಗಿಯೂ ಆತನ ಅಹಂಗೆ ನೋವಾಗುತ್ತದೆ. ಆಗ ಆತನನ್ನು ನಿಮ್ಮ ಕಾರ್ಯತಂತ್ರದೊಳಗೆ ತಂದು ಔಟ್ ಮಾಡಬಹುದು. ಇದೊಂದು ಮೈಂಡ್‌ಗೇಮ್. ಆದರೆ ಬೌಲರ್ ಕೂಡ ಉನ್ನತ ಮಟ್ಟದ ಬೌಲಿಂಗ್ ಮಾಡಬೇಕಾಗುತ್ತದೆ’ ಎಂದು ಸಕ್ಲೇನ್ ವಿವರಿಸಿದ್ದಾರೆ. ಪಾಕಿಸ್ತಾನ ಪರ 49 ಟೆಸ್ಟ್ ಮತ್ತು 169 ಏಕದಿನ ಪಂದ್ಯವಾಡಿರುವ ಸಕ್ಲೇನ್, ಕ್ರಮವಾಗಿ 208 ಮತ್ತು 288 ವಿಕೆಟ್ ಕಬಳಿಸಿದ್ದಾರೆ.

    ಬಾಯ್​ಫ್ರೆಂಡ್​ ಜತೆಗೆ ಸೆಕ್ಸ್ ಮಾಡಿ ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳಾ ಬಾಕ್ಸರ್! ಶಿಕ್ಷೆಯಿಂದ ಪಾರಾಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts