Jitesh Sharma : ಲಕ್ನೋದಲ್ಲಿ ಇಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಐಪಿಎಲ್ 2025ರ ಪಂದ್ಯದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.
ಅಲ್ಲದೆ, ಆರ್‌ಸಿಬಿ ನಾಯಕನಾಗಿ ತಮ್ಮ ಮೊದಲ ಪಂದ್ಯದಲ್ಲಿ ಜಿತೇಶ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಮೇ ತಿಂಗಳ ಆರಂಭದಲ್ಲಿ CSK ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ರಜತ್ ಪಟೀದಾರ್ಗೆ ಬೆರಳು ಗಾಯ ಮಾಡಿಕೊಂಡಿದ್ದರು. ಹೀಗಾಗಿ ಅವರು ಸಂಪೂರ್ಣ ಫಿಟ್ ಆಗದ ಕಾರಣ ಇಂದಿನ SRH ವಿರುದ್ಧ ಪಂದ್ಯದ ನಾಯಕತ್ವವನ್ನು ಜಿತೇಶ್ಗೆ ಒಲಿದೆ ಬಂದಿದೆ. ಇದೀಗ ಜಿತೇಶ್ ಆರ್ಸಿಬಿಯ 9 ಕ್ಯಾಪ್ಟನ್ ಆಗಿದ್ದಾರೆ.
ನಾನು ಮೊದಲ ಬಾರಿಗೆ ಆರ್‌ಸಿಬಿ ತಂಡದ ನಾಯಕತ್ವ ವಹಿಸಿಕೊಂಡಿದ್ದೇನೆ. ನಾವು ಮೊದಲು ಬೌಲಿಂಗ್ ಮಾಡಲು ಯೋಚಿಸುತ್ತಿದ್ದೇವೆ; ಲೀಗ್ನಲ್ಲಿ ಅಗ್ರಸ್ಥಾನದಲ್ಲಿ ಇರಲು ಬಯಸುತ್ತೇವೆ. ಪ್ರಾಂಚೈಸಿ, ಆಟಗಾರರ ಬಗ್ಗೆ ಕಾಳಜಿ ವಹಿಸಿದೆ. ನಮಗೆ ಉತ್ತಮ ವಾತಾವರಣ ಮತ್ತು ಸಂಸ್ಕೃತಿ ಇದೆ. ನಾವು ಪ್ರತಿ ಪಂದ್ಯವನ್ನು ಗೆದ್ದು ಕಪ್ ಗೆಲ್ಲಲು ಬಯಸುತ್ತೇವೆ ಎಂದಿದ್ದಾರೆ.
ಖಾಯಂ ನಾಯಕ ಪಟೀದಾರ್ ಬೆರಳಿನ ಗಾಯದ ಹಿನ್ನೆಲೆ ಸಂಪೂರ್ಣ ಫಿಟ್ ಆಗದ ಕಾರಣ ಅವರನ್ನು ಇಂದಿನ ಪಂದ್ಯದಲ್ಲಿ 'ಇಂಪ್ಯಾಕ್ಟ್ ಪ್ಲೇಯರ್' ಅಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.(ಏಜೆನ್ಸೀಸ್)