ನವದೆಹಲಿ: ಟೀಮ್ ಇಂಡಿಯಾದಲ್ಲಿ ಶಿಸ್ತು ಮತ್ತು ಏಕತೆಯನ್ನು ಮೂಡಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ವಿಶೇಷವಾಗಿ ಹೊಸ ನಿಯಮಗಳನ್ನು ಹೊರಡಿಸಿದೆ. ಆಟಗಾರರು ಈ ನಿಯಮಗಳನ್ನು ಪಾಲಿಸದಿದ್ದರೆ ಕಠಿಣ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಬಿಸಿಸಿಐ ಎಚ್ಚರಿಸಿದೆ. ಇದೀಗ ಈ ಹೊಸ ರೂಲ್ಸ್ಗಳ ಬಗ್ಗೆ ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್ ಮೈಕಲ್ ಕ್ಲಾರ್ಕ ಟೀಕೆ ಮಾಡಿದ್ದಾರೆ.
ಇದನ್ನೂ ಓದಿ:ಚನ್ನಳ್ಳಿ ಗ್ರಾಪಂನಲ್ಲಿ ಸರ್ಕಾರದ ಹಣ ದುರುಪಯೋಗ ?; ಅತಿವೃಷ್ಠಿಗೆ ಹಾನಿಗೀಡಾದ ಮನೆಗಳಿಗೆ ಪರಿಹಾರದಲ್ಲಿ ಅವ್ಯವಹಾರ ಆರೋಪ
ಈ ಹೊಸ ನಿಯಮಗಳ ಪ್ರಕಾರ, ಇಡೀ ಪಂದ್ಯಾವಳಿಯಲ್ಲಿ ಪತ್ನಿಯರು ಆಟಗಾರರೊಂದಿಗೆ ಇರುವಂತಿಲ್ಲ. ಕುಟುಂಬವು 2 ವಾರಗಳವರೆಗೆ ಮಾತ್ರ ಒಟ್ಟಿಗೆ ಇರಬಹುದು. ಎಲ್ಲಾ ಆಟಗಾರರು ತಂಡದ ಬಸ್‌ನಲ್ಲಿ ಪ್ರಯಾಣಿಸಬೇಕು ಎಂಬುದು ಇದೆ. ಈ ವಿಷಯದ ಬಗ್ಗೆ ಎಲ್ಲಾ ಆಟಗಾರರು ತಮ್ಮ ಪತ್ನಿಯರನ್ನು ತಮ್ಮೊಂದಿಗೆ ಕರೆದೊಯ್ಯಲು ಅವಕಾಶ ನೀಡುವಂತೆ ಆಟಗಾರರು ಒತ್ತಡ ಹೇರಿದ್ದರು ಎಂದು ಹೇಳಲಾಗಿದೆ. ಆದರೆ, ಬಿಸಿಸಿಐ ಮಾತ್ರ ಇದಕ್ಕೆಲ್ಲ ಸೊಪ್ಪು ಹಾಕದೆ ಕಠಿಣ ನಿಯಮಗಳನ್ನು ಜಾರಿ ಮಾಡಿದೆ.
45 ದಿನ ಪ್ರವಾಸದಲ್ಲಿ 15 ದಿನಗಳು ಮಾತ್ರ ಕುಟುಂಬದ ಜತೆ ಕಾಲ ಕಳೆಯಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ. ಇದು ಕುಟುಂಬದಿಂದ ದೂರ ಇರಲು ತುಂಬಾ ಕಷ್ಟಕರವಾಗಲಿದೆ ಎಂದು ಆಟಗಾರರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
'ನಾನು ನನ್ನ ವೃತ್ತಿ ಜೀವನದುದ್ದಕ್ಕೂ ಕಷ್ಟಪಟ್ಟಿದ್ದೇನೆ. ಆಟದ ಜತೆಯಲ್ಲಿಯೆ ಕುಟುಂಬದ ಜತೆ ಕಾಲಕಳೆದಿದ್ದು ಎರಡು ಕಡೆ ಸಮತೋಲನ ಮಾಡಿದ್ದೇನೆ. ಕೆಲ ಕಠಿಣ ಪರಿಸ್ಥಿತಿಗಳಲ್ಲಿ ಕುಟುಂಬವನ್ನು ತೊರೆದು ಆಟವಾಡಿದ್ದೇನೆ. ಕುಟುಂಬದಿಂದ ದೂರು ಇದ್ದು ಆಟ ಆಡುವುದು ಕಷ್ಟಕರ' ಎಂದು ಕ್ಲಾರ್ಕ್ ಹೇಳಿದ್ದಾರೆ.
ಎರಡು ಕಡೆ ಬ್ಯಾಲೆನ್ಸ್ ಮಾಡುವುದು ತುಂಬಾ ಕಷ್ಟ. ಒತ್ತಡ ಆಟಗಳ ಬಳಿಕ ರಿಲ್ಯಾಕ್ಸ್ ಮಾಡಲು ಮತ್ತು ಭಾವನೆಗಳನ್ನು ಹೇಳಿಕೊಳ್ಳಲು ಕುಟುಂಬ ಇರಬೇಕು. ಸಂಗಾತಿ ಜತೆ ಇಲ್ಲದಿದ್ದಾರೆ ಒಬ್ಬರೇ ಬಾರ್ ಮತ್ತು ರೆಸ್ಟೋರೆಂಟ್ಗೆ ಅನುಮತಿ ನೀಡುತ್ತಾರೆಯೇ? ಎಂದು ಪ್ರಶ್ನಿಸಿದ ಕ್ಲಾರ್ಕ್ ಈ ನಿಯಮಗಳು ಅದೇಗೆ ವರ್ಕ್ ಆಗುತ್ತೆ ಎಂದು ನನಗೆ ತಿಳಿಯದು ಎಂದು ಹೇಳಿದ್ದಾರೆ.(ಏಜೆನ್ಸೀಸ್)